ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಜನವರಿ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಅನುರೂಪ ಮಾಹಿತಿ
  • ದೇವರ ಹೆಸರನ್ನು ಉಪಯೋಗಿಸುವುದು ತಪ್ಪೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೇವರಿಗೊಂದು ಹೆಸರಿದೆಯಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಏಕಮಾತ್ರ ಸತ್ಯ ದೇವರನ್ನು ಗುರುತಿಸುವುದು
    ಎಚ್ಚರ!—1999
  • ದೇವರ ನಾಮವನ್ನು ಉಚ್ಚರಿಸುವುದು ತಪ್ಪೋ?
    ಎಚ್ಚರ!—1999
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಜನವರಿ ಪು. 31
ದೇವರ ಹೆಸರಿನ ಕೆತ್ತನೆ ಇರೋ ಕಲ್ಲು.

ಕಲ್ಲಿನ ಮೇಲಿರೋ ಕೆತ್ತನೆ: “ಕಾಗಾವನ ಮಗನಾದ ಕಾಗಾಫ್‌ಗೆ ಯಾಹ್ವೆ ಶವಿಯೋಟ್‌ನ ಶಾಪ ತಟ್ಟಲಿ.”

ನಿಮಗೆ ಗೊತ್ತಿತ್ತಾ?

ಹಳೆ ಕಾಲದ ಒಂದು ಕಲ್ಲಿನ ಮೇಲೆ ಕೆತ್ತಿರೋ ಮಾತುಗಳು ಬೈಬಲ್‌ ಸತ್ಯ ಅಂತ ಹೇಗೆ ತೋರಿಸುತ್ತೆ?

ಜೆರುಸಲೇಮ್‌ನಲ್ಲಿ ಬೈಬಲ್‌ ಲ್ಯಾಂಡ್ಸ್‌ ಮ್ಯೂಸಿಯಂ ಅನ್ನೋ ಸಂಗ್ರಹಾಲಯ ಇದೆ. ಅಲ್ಲಿ ಕ್ರಿಸ್ತ ಪೂರ್ವ 700 ರಿಂದ 600 ರ ಸಮಯದಲ್ಲಿ ಕೆತ್ತಲಾಗಿರೋ ಒಂದು ಕಲ್ಲಿದೆ. ಈ ಕಲ್ಲು ಸಿಕ್ಕಿದ್ದು ಇಸ್ರೇಲ್‌ನ ಹೆಬ್ರೋನ್‌ ಹತ್ರ ಇರೋ ಒಂದು ಗುಹೆಯಲ್ಲಿ. ಈ ಗುಹೆ ಒಂದು ಸಮಾಧಿ ಆಗಿತ್ತು. ಆ ಕಲ್ಲಿನ ಮೇಲೆ “ಕಾಗಾವನ ಮಗನಾದ ಕಾಗಾಫ್‌ಗೆ ಯಾಹ್ವೆ ಶವಿಯೋಟ್‌ನ ಶಾಪ ತಟ್ಟಲಿ” ಅನ್ನೋ ಕೆತ್ತನೆ ಇದೆ. ಈ ಮಾತುಗಳು ಬೈಬಲ್‌ ಸತ್ಯ ಅಂತ ಹೇಗೆ ತೋರಿಸುತ್ತೆ? ಯಾಹ್ವೆ ಅಂದ್ರೆ ಯೆಹೋವನ ಹೆಸರು ಆಗಿನ ಕಾಲದ ಜನ್ರಿಗೆ ಚೆನ್ನಾಗಿ ಗೊತ್ತಿತ್ತು ಮತ್ತು ಮಾತಾಡುವಾಗ ಆ ಹೆಸ್ರನ್ನ ಬಳಸ್ತಿದ್ರು ಅಂತ ಇದರಿಂದ ಗೊತ್ತಾಗುತ್ತೆ. ಈ ಹೆಸರನ್ನ ಹಳೆ ಕಾಲದ ಹೀಬ್ರು ಅಕ್ಷರದಲ್ಲಿ ಕೆತ್ತಲಾಗಿದೆ. ಅಷ್ಟೇ ಅಲ್ಲ, ಇಂಥ ಸಮಾಧಿಗಳಿಂದ ಸಿಕ್ಕಿರೋ ಬೇರೆ ಕೆತ್ತನೆಗಳಿಂದ ಇನ್ನೊಂದು ವಿಷ್ಯ ಗೊತ್ತಾಗುತ್ತೆ. ಅದೇನಂದ್ರೆ ಯಾರನ್ನಾದರೂ ಭೇಟಿ ಮಾಡಕ್ಕೆ ಈ ಗುಹೆಗಳಿಗೆ ಹೋಗ್ತಿದ್ದವರು ಅಥವಾ ಅಲ್ಲಿ ಬಚ್ಚಿಟ್ಟುಕೊಳ್ತಿದ್ದವರು ಅವುಗಳ ಗೋಡೆ ಮೇಲೆ ದೇವರ ಹೆಸ್ರನ್ನ ಮತ್ತು ತಮ್ಮ ಹೆಸ್ರನ್ನ ಬರೆಯುತ್ತಿದ್ರು. ಅವ್ರ ಹೆಸ್ರುಗಳಲ್ಲಿ ದೇವರ ಹೆಸ್ರೂ ಸೇರಿರುತ್ತಿತ್ತು.

ಈ ಕೆತ್ತನೆ ಬಗ್ಗೆ ಜಾರ್ಜಿಯ ವಿಶ್ವವಿದ್ಯಾಲಯದ ಡಾಕ್ಟರ್‌ ರೇಚಲ್‌ ನಬುಲ್ಸಿ ಹೀಗೆ ಹೇಳಿದ್ದಾರೆ: ‘ಹೀಬ್ರು ಅಕ್ಷರದಲ್ಲಿರುವ ದೇವರ ಹೆಸರನ್ನ ಪದೇಪದೇ ಕೆತ್ತಿರೋದ್ರಿಂದ ಆ ಹೆಸ್ರು ತುಂಬಾ ಪ್ರಾಮುಖ್ಯವಾಗಿತ್ತು ಅಂತ ಗೊತ್ತಾಗುತ್ತೆ. ಯೆಹೋವ ಅನ್ನೋ ಹೆಸ್ರಿರೋ ದೇವ್ರು ಇಸ್ರೇಲಿಗಳಿಗೆ ಮತ್ತು ಯೆಹೂದಿಗಳಿಗೆ ತುಂಬ ಮುಖ್ಯವಾಗಿದ್ದನು ಅಂತನೂ ಗೊತ್ತಾಗುತ್ತೆ.’ ಹೀಬ್ರು ಅಕ್ಷರದಲ್ಲಿರೋ ದೇವರ ಹೆಸರು ಬೈಬಲಿನಲ್ಲಿ ಸಾವಿರಾರು ಬಾರಿ ಇದೆ ಅನ್ನೋದಕ್ಕೆ ಈ ಡಾಕ್ಟರ್‌ ಹೇಳಿದ ಮಾತು ಕೂಡ ಆಧಾರ ಕೊಡುತ್ತೆ. ಅಷ್ಟೇ ಅಲ್ಲ, ಅನೇಕ ವ್ಯಕ್ತಿಗಳ ಹೆಸರಲ್ಲಿ ದೇವರ ಹೆಸ್ರು ಸೇರಿತ್ತು ಅನ್ನೋದಕ್ಕೂ ಇದು ಆಧಾರವಾಗಿದೆ.

ಆ ಕಲ್ಲಿನ ಮೇಲೆ ಕೆತ್ತಲಾಗಿರೋ “ಯಾಹ್ವೆ ಶವಿಯೋಟ್‌” ಅನ್ನೋ ಪದದ ಅರ್ಥ “ಸೈನ್ಯಗಳ ದೇವರಾದ ಯೆಹೋವ” ಅಂತ. ಇದ್ರಿಂದ ಬೈಬಲ್‌ ಕಾಲದಲ್ಲಿ ಜನ ಬರೀ ದೇವ್ರ ಹೆಸ್ರನ್ನಲ್ಲ, “ಸೈನ್ಯಗಳ ದೇವರಾದ ಯೆಹೋವ” ಅನ್ನೋ ಬಿರುದನ್ನೂ ತುಂಬ ಸಲ ಬಳಸ್ತಿದ್ರು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಈ ಬಿರುದು ಬೈಬಲಿನ ಹೀಬ್ರು ಭಾಗ 250ಕ್ಕೂ ಹೆಚ್ಚು ಬಾರಿ ಕಂಡುಬರುತ್ತೆ. ಅದ್ರಲ್ಲೂ ಹೆಚ್ಚಾಗಿ ಯೆಶಾಯ, ಯೆರೆಮೀಯ ಮತ್ತು ಜೆಕರ್ಯ ಪುಸ್ತಕಗಳಲ್ಲಿ ಕಂಡುಬರುತ್ತೆ. ಹಾಗಾಗಿ ಬೈಬಲಿನಲ್ಲಿ ಹೇಳಿರೋ ವಿಷ್ಯಗಳು ಸತ್ಯ ಅನ್ನೋದನ್ನು ಈ ಅಂಶ ಕೂಡ ಪುಷ್ಟೀಕರಿಸುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ