ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಅಕ್ಟೋಬರ್‌ ಪು. 14-17
  • ಪುನಃ ಯೆಹೋವನ ಫ್ರೆಂಡ್‌ ಆಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪುನಃ ಯೆಹೋವನ ಫ್ರೆಂಡ್‌ ಆಗಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾಕೆ ಕಷ್ಟ ಆಗುತ್ತೆ?
  • ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನಿಡಿ
  • ಬಿಟ್ಟುಕೊಡಬೇಡಿ!
  • ‘ಹಿರಿಯರ ಹತ್ರ ಮಾತಾಡಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ದೇವರ ಕರುಣೆಯನ್ನು ಇಂದು ಅನುಕರಿಸಿರಿ
    ಕಾವಲಿನಬುರುಜು—1992
  • ಯೆಹೋವ ದೇವರು ನಿಮ್ಮನ್ನ ತುಂಬ ಪ್ರೀತಿಸ್ತಾನೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಹಿರಿಯರು ಪೌಲನಿಂದ ಏನೆಲ್ಲ ಕಲಿಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಅಕ್ಟೋಬರ್‌ ಪು. 14-17
ಬಿದ್ದು ಹೋಗಿರೋ ಮನೆಯನ್ನ ಮತ್ತೆ ಕಟ್ಟೋಕೆ ಕಷ್ಟಪಡಬೇಕಾಗುತ್ತೆ ಸಮಯ ಹಿಡಿಯುತ್ತೆ ಅಂತ ಒಬ್ಬ ಸಹೋದರ ಯೋಚನೆ ಮಾಡ್ತಾ ನಿಂತಿದ್ದಾನೆ.

ಪುನಃ ಯೆಹೋವನ ಫ್ರೆಂಡ್‌ ಆಗಿ

ಪ್ರತಿವರ್ಷ, ಬಹಿಷ್ಕಾರ ಆದವರಲ್ಲಿ ತುಂಬ ಜನ ಯೆಹೋವನ ಹತ್ರ ವಾಪಸ್‌ ಬರುತ್ತಿದ್ದಾರೆ. ಅವರಲ್ಲಿ ಪ್ರತಿಯೊಬ್ಬರನ್ನು ನೋಡಿ “ಸ್ವರ್ಗದಲ್ಲಿ ಇರೋರು ತುಂಬ ಸಂತೋಷ ಪಡ್ತಾರೆ.” (ಲೂಕ 15:7, 10) ಇತ್ತೀಚೆಗೆ ನೀವು ಯೆಹೋವನ ಹತ್ರ ವಾಪಸ್‌ ಬಂದಿರೋದಾದ್ರೆ ಒಂದು ವಿಷಯ ಮನಸ್ಸಲ್ಲಿಡಿ. ಯೇಸು, ದೇವದೂತರು ಮತ್ತು ಯೆಹೋವ ನೀವು ವಾಪಸ್‌ ಬಂದಿದ್ದಕ್ಕೆ ತುಂಬ ಖುಷಿಪಡ್ತಾರೆ. ನಿಮಗೆ ಯೆಹೋವನ ಜೊತೆ ಮತ್ತೆ ಸ್ನೇಹ ಬೆಳೆಸಿಕೊಳ್ಳೋಕೆ ಸ್ವಲ್ಪ ಕಷ್ಟ ಆಗಬಹುದು. ಯಾಕೆ? ಯೆಹೋವನಿಗೆ ಹತ್ರ ಆಗೋಕೆ ಯಾವುದು ನಿಮಗೆ ಸಹಾಯ ಮಾಡುತ್ತೆ?

ಯಾಕೆ ಕಷ್ಟ ಆಗುತ್ತೆ?

ಬಹಿಷ್ಕಾರ ಆಗಿ ಯೆಹೋವನ ಹತ್ರ ವಾಪಸ್‌ ಬಂದಿರೋರಿಗೆ ಕುಗ್ಗಿಸೋ ಯೋಚನೆಗಳು ತುಂಬ ಬರುತ್ತೆ. ಉದಾಹರಣೆಗೆ, ದಾವೀದ ತಪ್ಪು ಮಾಡಿದ ಮೇಲೆ ಯೆಹೋವ ಅವನನ್ನು ಕ್ಷಮಿಸಿದ್ರೂ “ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿವೆ” ಅಂತ ಹೇಳಿದ. (ಕೀರ್ತ. 40:12; 65:3) ಅವನ ತರಾನೇ ನಿಮಗೂ ಅನಿಸ್ತಾ ಇರಬಹುದು. ಇನ್ನೂ ಕೆಲವರಿಗೆ ‘ತಪ್ಪುಮಾಡಿಬಿಟ್ಟೆನಲ್ಲಾ’ ಅನ್ನೋ ಕೊರಗು ಹಾಗೇ ಇರುತ್ತೆ, ನಾಚಿಕೆ ಆಗ್ತಾ ಇರುತ್ತೆ. ಸಹೋದರಿ ಇಜೆಬೇಲಗೆ ಬಹಿಷ್ಕಾರ ಆಗಿ 20ಕ್ಕಿಂತ ಜಾಸ್ತಿ ವರ್ಷಗಳಾಗಿತ್ತು.a ಅವರು ಹೇಳೋದು: “ಯೆಹೋವ ದೇವರು ನನ್ನನ್ನ ಕ್ಷಮಿಸಿದ್ರು ಅಂತ ನಂಬೋಕೆ ಆಗ್ತಿಲ್ಲ.” ನಿಮಗೂ ಆ ತರ ಕೊರಗಿದ್ರೆ ದಯವಿಟ್ಟು ಕುಗ್ಗಿ ಹೋಗಬೇಡಿ. ಯಾಕಂದ್ರೆ ಅದ್ರಿಂದ ನೀವು ಯೆಹೋವನಿಂದ ಇನ್ನೂ ದೂರ ಹೋಗಿಬಿಡಬಹುದು.—ಜ್ಞಾನೋ. 24:10.

ಇನ್ನು ಕೆಲವರಿಗೆ ಯೆಹೋವನ ಜೊತೆ ಮುಂಚಿನ ತರ ಸ್ನೇಹ ಬೆಳೆಸಿಕೊಳ್ಳೋಕೆ ಆಗಲ್ಲ ಅಂತ ಅನಿಸಿಬಿಡುತ್ತೆ. ಬಹಿಷ್ಕಾರ ಆಗಿ ಯೆಹೋವನ ಹತ್ರ ವಾಪಸ್‌ ಬಂದ ಸಹೋದರ ಆಂಟ್ವಾನ್‌ ಹೇಳಿದ್ದು: “ಯೆಹೋವನ ಸಾಕ್ಷಿ ಆಗಿದ್ದಾಗ ನಾನು ಏನೇನು ಮಾಡ್ತಿದ್ನೋ ಅದನ್ನೆಲ್ಲಾ ಮರೆತು ಹೋಗಿಬಿಟ್ಟಿದ್ದೀನಿ.” ಇಂಥ ಭಾವನೆ ಇರೋದರಿಂದ ಮುಂಚಿನ ತರ ಯೆಹೋವನ ಸೇವೆ ಮಾಡೋಕೆ ಕೆಲವರು ಮುಂದೆ ಬರಲ್ಲ.

ಒಬ್ಬರ ಮನೆ ಜೋರಾದ ಗಾಳಿ ಮಳೆಯಿಂದ ಬಿದ್ದು ಹೋಗಿಬಿಡುತ್ತೆ ಅಂತ ಇಟ್ಟುಕೊಳ್ಳಿ. ಆ ಮನೆಯವರಿಗೆ ತುಂಬ ಬೇಜಾರಾಗುತ್ತೆ. ಅದನ್ನ ಮತ್ತೆ ಕಟ್ಟೋಕೆ ತುಂಬ ಸಮಯ ಹಿಡಿಯುತ್ತೆ. ಅದೇ ತರ ನೀವು ದೊಡ್ಡ ತಪ್ಪು ಮಾಡಿದ್ದರಿಂದ ಯೆಹೋವನ ಜೊತೆಗಿನ ನಿಮ್ಮ ಸಂಬಂಧ ಹಾಳಾಯ್ತು. ಅದನ್ನ ಸರಿಮಾಡಿಕೊಳ್ಳೋಕೆ ಸಮಯ ಬೇಕಾಗುತ್ತೆ ಮತ್ತು ಸ್ವಲ್ಪ ಕಷ್ಟಪಡಬೇಕಾಗುತ್ತೆ. ಅದಕ್ಕೆ ಬೇಕಾದ ಸಹಾಯನೂ ಸಿಗುತ್ತೆ.

“ಬನ್ನಿ, ನಾವೀಗ ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ” ಅಂತ ಯೆಹೋವ ಕರೆಯುತ್ತಿದ್ದಾರೆ. (ಯೆಶಾ. 1:18) ನೀವು ಈಗಾಗಲೇ ಯೆಹೋವ ದೇವರ ಜೊತೆ ‘ವಿಷ್ಯಗಳನ್ನ ಇತ್ಯರ್ಥ ಮಾಡಿಕೊಳ್ಳೋಕೆ’ ಪ್ರಯತ್ನ ಹಾಕಿದ್ದೀರ. ಇದನ್ನ ಮಾಡಿರೋದಕ್ಕೆ ದೇವರು ನಿಮ್ಮನ್ನ ತುಂಬ ಪ್ರೀತಿ ಮಾಡ್ತಾರೆ. ನೀವು ಯೆಹೋವನ ಹತ್ರ ವಾಪಸ್‌ ಬಂದಿರೋದ್ರಿಂದ ಸೈತಾನ ಸುಳ್ಳುಗಾರ ಅಂತ ನಿರೂಪಿಸೋಕೆ ಯೆಹೋವ ದೇವರಿಗೆ ಒಂದು ಅವಕಾಶ ಸಿಗುತ್ತೆ.—ಜ್ಞಾನೋ. 27:11.

ನೀವು ಈಗಾಗಲೇ ಯೆಹೋವನ ಹತ್ರ ಬರೋಕೆ ಹೆಜ್ಜೆ ತಗೊಂಡಿದ್ದೀರ. ಅದೇ ತರ ನಿಮಗೂ ಹತ್ರ ಆಗ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾರೆ. (ಯಾಕೋ. 4:8) ನೀವು ಕೂಟಗಳಿಗೆ ಹಾಜರಾಗ್ತಾ ಇದ್ರಷ್ಟೇ ಸಾಕಾಗಲ್ಲ. ಯೆಹೋವ ಅಪ್ಪಾಗೆ ಹತ್ರ ಆಗೋಕೆ ಮತ್ತು ಆತನ ಜೊತೆ ಇನ್ನೂ ಸ್ನೇಹ ಬೆಳೆಸಿಕೊಳ್ಳೋಕೆ ಕೆಲವು ವಿಷಯಗಳನ್ನೂ ಮಾಡಬೇಕು. ಅದೇನು ಅಂತ ನೋಡೋಣ.

ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನಿಡಿ

ಮನೆ ಬಿದ್ದು ಹೋದರೂ ಅಡಿಪಾಯ ಹಾಗೇ ಇರೋ ತರ ಮುಂಚೆ ನೀವು ಯೆಹೋವ ದೇವರ ಬಗ್ಗೆ, ಪರದೈಸ್‌ ಬಗ್ಗೆ ಕಲಿತ ವಿಷಯಗಳು ನಿಮ್ಮ ಮನಸ್ಸಲ್ಲಿ ಹಾಗೇ ಅಚ್ಚುಳಿದಿರುತ್ತೆ. ಆದ್ರೆ ನೀವು ಬಿಟ್ಟಿರೋ ರೂಢಿಗಳನ್ನ ಮತ್ತೆ ಬೆಳೆಸಿಕೊಳ್ಳಬೇಕು. ಉದಾಹರಣೆಗೆ ಸಿಹಿಸುದ್ದಿ ಸಾರಬೇಕು, ಕೂಟಗಳಿಗೆ ಬರಬೇಕು ಮತ್ತು ಸಹೋದರ ಸಹೋದರಿಯರ ಜೊತೆ ಸಮಯ ಕಳಿಬೇಕು. ಇದನ್ನೆಲ್ಲಾ ಮಾಡೋಕೆ ನೀವು ಇನ್ನೂ ಚಿಕ್ಕಚಿಕ್ಕ ಗುರಿಗಳನ್ನ ಇಡಬೇಕು. ಅದೇನು?

ಯೆಹೋವನ ಹತ್ರ ಮಾತಾಡ್ತಾ ಇರಿ. ಆತನ ಹತ್ರ ಮಾತಾಡೋಕೆ ಎಷ್ಟು ಕಷ್ಟ ಆಗುತ್ತೆ, ನಿಮ್ಮ ಮನಸ್ಸು ಎಷ್ಟು ಚುಚ್ಚುತ್ತೆ ಅಂತ ಯೆಹೋವ ಅಪ್ಪಾಗೆ ಅರ್ಥ ಆಗುತ್ತೆ. (ರೋಮ. 8:26) ಆದ್ರೂ ನೀವು ‘ಪಟ್ಟುಬಿಡದೆ ಪ್ರಾರ್ಥನೆ ಮಾಡ್ತಾ’ ಯೆಹೋವನ ಸ್ನೇಹ ಬೇಕು ಅಂತ ಹೇಳ್ತಾ ಇರಿ. (ರೋಮ. 12:12) ಸಹೋದರ ಆಂದ್ರೆ ನೆನಪಿಸಿಕೊಳ್ಳೋದು: “ನಂಗೆ ನಾಚಿಕೆ ಆಗ್ತಿತ್ತು. ನನ್ನ ಮನಸ್ಸು ಚುಚ್ಚುತ್ತಿತ್ತು. ಆದ್ರೂ ಆಗೆಲ್ಲಾ ನಾನು ಪ್ರಾರ್ಥನೆ ಮಾಡ್ತಿದ್ದೆ. ಆಗ ಮನಸ್ಸು ಹಗುರ ಆಗ್ತಿತ್ತು ಮತ್ತು ಸಮಾಧಾನ ಸಿಗ್ತಿತ್ತು.” ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ನಿಮಗೆ ಗೊತ್ತಿಲ್ಲಾಂದ್ರೆ ಪಶ್ಚಾತ್ತಾಪ ಪಟ್ಟ ರಾಜ ದಾವೀದ ಕೀರ್ತನೆ 51 ಮತ್ತು 65ರಲ್ಲಿ ಏನು ಹೇಳಿದ್ದಾರೆ ಅಂತ ನೋಡಿ.

ತಪ್ಪದೇ ಬೈಬಲ್‌ ಓದಿ. ಇದ್ರಿಂದ ಯೆಹೋವ ದೇವರ ಮೇಲೆ ಪ್ರೀತಿ, ನಂಬಿಕೆ ಹೆಚ್ಚಾಗುತ್ತೆ. (ಕೀರ್ತ. 19:7-11) ಫಿಲಿಪ್ಪೇ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ನಾನು ಬೈಬಲ್‌ ಓದದೇ ಇದ್ದಿದ್ರಿಂದ ಯೆಹೋವ ದೇವರಿಂದ ತುಂಬ ದೂರ ಹೋಗಿಬಿಟ್ಟೆ. ಈಗ ಅದೇ ತಪ್ಪನ್ನ ಪುನಃ ಮಾಡೋಕೆ ಇಷ್ಟಪಡಲ್ಲ. ಹಾಗಾಗಿ ದಿನಾ ಬೈಬಲ್‌ ಓದೋಕೆ ಆರಂಭಿಸಿದ್ದೀನಿ.” ನೀವೂ ಇದನ್ನೇ ಮಾಡಬಹುದು. ಯಾವ ವಿಷಯ ಓದಬೇಕು, ಕಲೀಬೇಕು ಅಂತ ಗೊತ್ತಾಗದೇ ಇದ್ರೆ ಯೆಹೋವನ ಜೊತೆ ಒಳ್ಳೆ ಸಂಬಂಧ ಇರೋ ಒಬ್ಬ ಫ್ರೆಂಡ್‌ ಹತ್ರ ಸಹಾಯ ಕೇಳಿ.

ಸಭೆಯಲ್ಲಿರೋ ಸಹೋದರ ಸಹೋದರಿಯರ ಜೊತೆ ಸ್ನೇಹ ಬೆಳೆಸಿ. ಕೆಲವರು ವಾಪಸ್‌ ಯೆಹೋವನ ಹತ್ರ ಬರುವಾಗ ಸಭೆಯವರು ಏನು ಅಂದುಕೊಳ್ತಾರೋ ಅಂತ ಯೋಚಿಸ್ತಾರೆ. ಲ್ಯಾರೀಸಾ ಅನ್ನೋ ಸಹೋದರಿ ಹೀಗೆ ಹೇಳ್ತಾರೆ: “ನಂಗೆ ತುಂಬ ನಾಚಿಕೆ ಆಗ್ತಿತ್ತು. ಯಾಕಂದ್ರೆ ನಾನು ಸಭೆಗೆ ದ್ರೋಹ ಮಾಡಿಬಿಟ್ಟೆ ಅನ್ನೋ ಯೋಚನೆ ಸುಮಾರು ವರ್ಷಗಳಿಂದ ನನ್ನನ್ನ ಕಾಡ್ತಾ ಇತ್ತು.” ಹಿರಿಯರಾಗಲಿ ಅಥವಾ ಇತರ ಸಹೋದರ ಸಹೋದರಿಯರಾಗಲಿ ನಿಮಗೆ ಸಹಾಯ ಮಾಡೋಕೆ ಮುಂದೆ ಬರ್ತಾರೆ. (“ಹಿರಿಯರು ಏನು ಮಾಡಬಹುದು?” ಚೌಕ ನೋಡಿ.) ನೀವು ವಾಪಸ್‌ ಬಂದಾಗ ಅವರಿಗೆ ತುಂಬ ಖುಷಿ ಆಗುತ್ತೆ. ನೀವು ಖುಷಿ ಆಗಿರಬೇಕು ಅನ್ನೋದೇ ಅವರ ಆಸೆ.—ಜ್ಞಾನೋ. 17:17.

ಸಭೆಯವರಿಗೆ ಹತ್ರ ಆಗೋಕೆ ನೀವೇನು ಮಾಡಬೇಕು? ಸಭೆಯವರು ಏನು ಮಾಡ್ತಾರೋ ಅದನ್ನೇ ಮಾಡಿ. ಅಂದ್ರೆ ತಪ್ಪದೇ ಕೂಟಗಳಿಗೆ ಹಾಜರಾಗಿ, ಅವರ ಜೊತೆ ಸೇವೆಗೆ ಹೋಗಿ. ಹೀಗೆ ಮಾಡಿದ್ರಿಂದ ಫೆಲಿಕ್ಸ್‌ ಅನ್ನೋ ಸಹೋದರನಿಗೆ ಹೇಗೆ ಸಹಾಯ ಆಯ್ತು ಅಂತ ಅವರ ಮಾತಲ್ಲೇ ಕೇಳಿ: “ನಾನು ಮತ್ತೆ ಸಭೆಗೆ ವಾಪಸ್‌ ಬರಬೇಕು ಅಂತ ಸಹೋದರರು ತುಂಬ ಕಾಯ್ತಾ ಇದ್ರು. ನಾನು ವಾಪಸ್‌ ಬಂದಾಗ ಪ್ರೀತಿಯಿಂದ ಸೇರಿಸಿಕೊಂಡ್ರು. ಯೆಹೋವ ನನ್ನನ್ನ ಕ್ಷಮಿಸಿದ್ದಾರೆ, ನಾನು ಮತ್ತೆ ದೇವರ ಸೇವೆ ಮಾಡ್ಕೊಂಡು ಹೋಗಬಹುದು ಅಂತ ನನ್ನಲ್ಲಿ ಭರವಸೆ ಮೂಡಿಸಿದ್ರು.”—“ನೀವೇನು ಮಾಡಬಹುದು?” ಚೌಕ ನೋಡಿ.

ನೀವೇನು ಮಾಡಬಹುದು?

ಯೆಹೋವನ ಜೊತೆಗಿನ ಸ್ನೇಹ ಕಟ್ಟೋಕೆ . . .

ಯೆಹೋವನ ಹತ್ರ ವಾಪಸ್‌ ಬಂದಿರೋ ಸಹೋದರನ ಜೊತೆ ಒಬ್ಬ ಹಿರಿಯ ಪ್ರಾರ್ಥನೆ ಮಾಡ್ತಿದ್ದಾನೆ.

ಯೆಹೋವನ ಹತ್ರ ಮಾತಾಡ್ತಾ ಇರಿ

ಯೆಹೋವನ ಸ್ನೇಹ ಬೇಕು ಅಂತ ಹೇಳ್ತಾ ಇರಿ. ಹಿರಿಯರು ನಿಮಗೋಸ್ಕರ ನಿಮ್ಮ ಜೊತೆ ಪ್ರಾರ್ಥನೆ ಮಾಡ್ತಾರೆ

ಆ ಹಿರಿಯ ಆ ಸಹೋದರನ ಜೊತೆ “ಯೆಹೋವನ ಸಮೀಪಕ್ಕೆ ಬನ್ನಿರಿ” ಪುಸ್ತಕದಿಂದ ಸ್ಟಡಿ ಮಾಡ್ತಿದ್ದಾರೆ.

ತಪ್ಪದೇ ಬೈಬಲ್‌ ಓದಿ

ಇದ್ರಿಂದ ಯೆಹೋವನ ಮೇಲೆ ಪ್ರೀತಿ, ನಂಬಿಕೆ ಜಾಸ್ತಿ ಆಗುತ್ತೆ

ಆ ಸಹೋದರ ಸಭೆಯಲ್ಲಿರೋ ಸಹೋದರರ ಜೊತೆ ಒಂದು ಗೆಟ್‌ಟುಗೆದರ್‌ನಲ್ಲಿ ಮಾತಾಡ್ತಿದ್ದಾರೆ.

ಸಭೆಯವರ ಜೊತೆ ಸ್ನೇಹ ಬೆಳೆಸಿ

ತಪ್ಪದೇ ಕೂಟಗಳಿಗೆ ಹಾಜರಾಗಿ, ಅವರ ಜೊತೆ ಸೇವೆಗೆ ಹೋಗಿ

ಬಿಟ್ಟುಕೊಡಬೇಡಿ!

ನೀವು ಒಂದು ಕಡೆ ಯೆಹೋವನ ಜೊತೆ ನಿಮ್ಮ ಸ್ನೇಹವನ್ನ ಕಟ್ಟುತ್ತಾ ಇರುವಾಗ ಇನ್ನೊಂದು ಕಡೆ ಸೈತಾನ ಅದನ್ನ ಬೀಳಿಸೋಕೆ ಕಷ್ಟ ಪರೀಕ್ಷೆಗಳನ್ನ ತರ್ತಾನೆ. (ಲೂಕ 4:13) ಏನೇ ಆದ್ರೂ ಬಿಟ್ಟುಕೊಡಬೇಡಿ, ಯೆಹೋವನ ಜೊತೆ ನಿಮಗಿರೋ ಸ್ನೇಹವನ್ನ ಬಲಪಡಿಸ್ತಾ ಇರಿ.

ಕಳೆದುಹೋದ ಕುರಿ ತರ ಇರೋ ಜನರ ಬಗ್ಗೆ ಯೆಹೋವ ಹೀಗೆ ಮಾತು ಕೊಟ್ಟಿದ್ದಾರೆ: “ಕಳೆದು ಹೋಗಿದ್ದನ್ನ ಹುಡುಕ್ತೀನಿ, ತಪ್ಪಿಸ್ಕೊಂಡು ಹೋಗಿದ್ದನ್ನ ವಾಪಸ್‌ ತರ್ತಿನಿ, ಗಾಯ ಆಗಿದ್ರೆ ಪಟ್ಟಿ ಕಟ್ತೀನಿ, ಬಡಕಲಾಗಿದ್ರೆ ಬಲಪಡಿಸ್ತೀನಿ.” (ಯೆಹೆ. 34:16) ದೇವರು ತುಂಬ ಜನರಿಗೆ ತನ್ನ ಜೊತೆ ಇನ್ನೂ ಆಪ್ತರಾಗೋಕೆ ಸಹಾಯ ಮಾಡಿದ್ದಾನೆ. ಅದೇ ತರ ನಿಮಗೂ ಸಹಾಯ ಮಾಡೇ ಮಾಡ್ತಾನೆ.

ಹಿರಿಯರು ಏನು ಮಾಡಬಹುದು?

ಬಿದ್ದು ಹೋಗಿರೋ ಮನೆಯನ್ನ ಮತ್ತೆ ಕಟ್ಟೋಕೆ ಆ ಹಿರಿಯ ಸಹಾಯ ಮಾಡ್ತಿದ್ದಾನೆ.

ಯೆಹೋವನ ಹತ್ರ ವಾಪಸ್‌ ಬಂದಿರೋ ಪ್ರಚಾರಕರು ಆತನ ಹತ್ರ ಮತ್ತೆ ಸಂಬಂಧ ಬೆಳೆಸಿಕೊಳ್ಳೋಕೆ ಹಿರಿಯರು ಒಂದು ಮುಖ್ಯ ಪಾತ್ರ ವಹಿಸ್ತಾರೆ. ಅವರು ಹೇಗೆ ಸಹಾಯ ಮಾಡ್ತಾರೆ ಅಂತ ನೋಡೋಣ.

ಧೈರ್ಯ ತುಂಬಿ. ಪಶ್ಚಾತ್ತಾಪ ಪಟ್ಟು ಮರಳಿ ಬಂದ ವ್ಯಕ್ತಿ “ಇನ್ನೂ ದುಃಖದಲ್ಲಿ ಮುಳುಗಿ ಹೋಗಬಹುದು” ಅಂತ ಪೌಲನಿಗೆ ಗೊತ್ತಿತ್ತು. (2 ಕೊರಿಂ. 2:7) ಹಾಗಾಗಿ “ಅವನನ್ನ ಮನಸಾರೆ ಕ್ಷಮಿಸಬೇಕು, ಸಮಾಧಾನ ಮಾಡಬೇಕು” ಅಂತ ಪೌಲ ಹೇಳಿದ್ದಾನೆ. ಮರಳಿ ಯೆಹೋವನ ಹತ್ರ ಬಂದವರನ್ನ ಯೆಹೋವ ಪ್ರೀತಿಸ್ತಾರೆ, ಸಹೋದರರು ಪ್ರೀತಿಸ್ತಾರೆ ಅಂತ ಅರ್ಥಮಾಡಿಸಬೇಕು. ಹಿರಿಯರು ಅವರನ್ನು ಪ್ರೋತ್ಸಾಹಿಸುತ್ತಾ, ಅವರ ಜೊತೆ ಮಾತಾಡ್ತಾ, ಅವರ ಅಗತ್ಯಗಳನ್ನ ಪೂರೈಸುತ್ತಾ ಸಹಾಯ ಮಾಡುವಾಗ ಆ ಕೊರಗಿನಿಂದ ಹೊರಗೆ ಬರೋಕೆ ಸಹಾಯ ಆಗುತ್ತೆ.

ಅವರ ಜೊತೆ ಪ್ರಾರ್ಥಿಸಿ. “ನೀತಿವಂತರು ಅಂಗಲಾಚಿ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ.” (ಯಾಕೋ. 5:16) ಲಾರಿಸಾ ಹೀಗೆ ಹೇಳ್ತಾರೆ: “ನಾನು ನನಗಿದ್ದ ಸಂಶಯಗಳ ಬಗ್ಗೆ ಮತ್ತು ಭಯದ ಬಗ್ಗೆ ಹಿರಿಯರ ಹತ್ರ ಮಾತಾಡಿದೆ. ಅವರು ನನಗೋಸ್ಕರ ಪ್ರಾರ್ಥಿಸಿದ್ರು. ಆಗ ಹಿರಿಯರಿಗೆ ನನ್ನ ಮೇಲೆ ಕೋಪ ಇಲ್ಲ ಅಂತ ಅರ್ಥ ಆಯ್ತು. ಯೆಹೋವನ ಜೊತೆ ಮತ್ತೆ ಸಂಬಂಧ ಬಲಪಡಿಸೋಕೆ ಅವರು ನನಗೆ ಸಹಾಯ ಮಾಡಿದ್ರು.” ಸಹೋದರ ಲಿಯೋ ಹೀಗೆ ಹೇಳ್ತಾರೆ: “ಹಿರಿಯರು ಪ್ರಾರ್ಥನೆ ಮಾಡುವಾಗ ಯೆಹೋವ ದೇವರು ನನ್ನನ್ನ ನಿಜವಾಗಲೂ ಪ್ರೀತಿಸ್ತಾರೆ, ನನ್ನಲ್ಲಿರೋ ಕೆಟ್ಟದ್ದು ಮಾತ್ರ ಅಲ್ಲ, ಒಳ್ಳೇದನ್ನೂ ನೋಡ್ತಾರೆ ಅಂತ ಅರ್ಥ ಆಯ್ತು.”

ಸ್ನೇಹಿತರಾಗಿ. ಪಶ್ಚಾತ್ತಾಪ ಪಟ್ಟು ಮರಳಿ ಬರೋ ಸಹೋದರರಿಗೆ ಸ್ನೇಹಿತರ ಅಗತ್ಯ ಇರುತ್ತೆ. ಜಸ್ಟಿನ್‌ ಅನ್ನೋ ಹಿರಿಯ ಹೀಗೆ ಹೇಳ್ತಾರೆ: “ಮರಳಿ ಬಂದವರ ಜೊತೆ ಸಮಯ ಮಾಡಿಕೊಂಡು ಸೇವೆಗೆ ಹೋಗೋದು, ಅವರ ಮನೆಗೆ ಹೋಗಿ ಅವರನ್ನ ಮಾತಾಡಿಸೋದು, ಅವರ ಜೊತೆ ಸ್ನೇಹಿತರಾಗೋದು ತುಂಬ ತುಂಬ ಮುಖ್ಯ.” ಇನ್ನೊಬ್ಬ ಹಿರಿಯ ಹೆನ್ರಿ ಹೀಗೆ ಹೇಳ್ತಾರೆ: “ಹಿರಿಯರಾದ ನಾವು ಅವರಿಗೆ ಒಳ್ಳೆ ಸ್ನೇಹಿತರಾಗಿ ಮಾತಾಡೋಕೆ ಶುರುಮಾಡಿದ್ರೆ, ಸಭೆಯಲ್ಲಿ ಇರುವವರು ಸಹ ಸ್ನೇಹಿತರಾಗೋಕೆ ಸುಲಭ ಆಗುತ್ತೆ.”

ಅಧ್ಯಯನ ಮಾಡೋಕೆ ಸಹಾಯ ಮಾಡಿ. ಯೆಹೋವನ ಹತ್ರ ಮರಳಿ ಬಂದವರಿಗೆ ಬೈಬಲ್‌ ಓದಿ, ಅಧ್ಯಯನ ಮಾಡೋಕೆ ಒಳ್ಳೆ ಸ್ನೇಹಿತರು ಸಹಾಯ ಮಾಡ್ತಾರೆ. ಒಬ್ಬ ಹಿರಿಯ ಡಾರ್ಕೋ ಹೇಳ್ತಾರೆ: “ನಾನು ಬೈಬಲ್‌ ಓದಿ ಅಧ್ಯಯನ ಮಾಡುವಾಗ ನನಗೆ ಇಷ್ಟವಾದ ವಿಷಯಗಳನ್ನ ಅವರ ಜೊತೆ ಹಂಚಿಕೊಳ್ತೀನಿ. ಬೈಬಲನ್ನ ನಾನೆಷ್ಟು ಇಷ್ಟಪಡ್ತೀನಿ ಅಂತ ಅವರಿಗೆ ಹೇಳ್ತೀನಿ. ಅಷ್ಟೇ ಅಲ್ಲ, ಜೊತೆಯಾಗಿ ಕೆಲವು ಲೇಖನಗಳನ್ನ ಓದ್ತೀವಿ.” ಇನ್ನೊಬ್ಬ ಹಿರಿಯ ಕ್ಲೇಟನ್‌ ಹೇಳ್ತಾರೆ: “ನಿಮ್ಮ ತರಾನೇ ಅನುಭವ ಆಗಿರೋ ವ್ಯಕ್ತಿಗಳ ಬಗ್ಗೆ ಬೈಬಲಿಂದ ಓದಿ ಕಲಿರಿ ಅಂತ ಹೇಳ್ತೀನಿ.”

ಪರಿಪಾಲನೆ ಮಾಡಿ. ಮರಳಿ ಯೆಹೋವನ ಹತ್ರ ಬಂದವರು ಹಿರಿಯರನ್ನ ನ್ಯಾಯಾಧೀಶರ ತರ ನೋಡಿರುತ್ತಾರೆ. ಆದ್ರೆ ಈಗ ಅವರು ಕುರಿಗಳನ್ನ ಪರಿಪಾಲಿಸೋ ಒಬ್ಬ ಕುರುಬನ ತರ ನೋಡಬೇಕು. (ಯೆರೆ. 23:4) ಅವರು ಹೇಳೋದನ್ನ ಕೇಳೋಕೆ ಹಿರಿಯರು ತಯಾರಾಗಿರಬೇಕು ಮತ್ತು ಅವರಿಗೆ ಬೇಕಾಗಿರೋ ಪ್ರಶಂಸೆಯನ್ನೂ ಕೊಡಬೇಕು. ಆಗಾಗ ಅವರನ್ನ ಮಾತಾಡಿಸ್ತಾ ಇರಬೇಕು. ಮಾರ್ಕಸ್‌ ಅನ್ನೋ ಹಿರಿಯ ಪರಿಪಾಲನೆ ಮಾಡ್ತಿದ್ದಾಗ ಆದ ಅನುಭವದ ಬಗ್ಗೆ ಹೀಗೆ ಹೇಳ್ತಾರೆ: “ನಾವು ಬೈಬಲಲ್ಲಿದ್ದ ವಿಷಯಗಳನ್ನು ಅವರಿಗೆ ಹಂಚುತ್ತಿದ್ವಿ. ಅವರು ಮಾಡುತ್ತಿದ್ದ ಒಳ್ಳೆ ವಿಷಯಗಳಿಗೆ ಪ್ರೋತ್ಸಾಹ ನೀಡುತ್ತಿದ್ವಿ. ಅಷ್ಟೇ ಅಲ್ಲ, ಅವರು ಮರಳಿ ಬಂದಿದ್ದರಿಂದ ಯೆಹೋವ ದೇವರಿಗೆ ಸಂತೋಷ ಆಯ್ತು ಮತ್ತು ನಮಗೂ ತುಂಬ ಖುಷಿ ಆಯ್ತು ಅಂತ ಹೇಳಿ ಪ್ರೋತ್ಸಾಹಿಸ್ತಾ ಇದ್ವಿ. ಮುಂದಿನ ಪರಿಪಾಲನಾ ಭೇಟಿ ಯಾವಾಗ ಅಂತ ದಿನಾಂಕ ಗೊತ್ತುಮಾಡ್ತೀವಿ.”

a ಈ ಲೇಖನದಲ್ಲಿ ಕೆಲವು ಹೆಸರುಗಳು ಬದಲಾಗಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ