ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಏಪ್ರಿಲ್‌ ಪು. 28-ಪು. 29 ಪ್ಯಾ. 6
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಆಧುನಿಕ ತಾತ್ಪರ್ಯವುಳ್ಳ ಒಂದು ಪುರಾತನ ಪ್ರಮಾಣವಚನ
    ಎಚ್ಚರ!—2004
  • ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಏಪ್ರಿಲ್‌ ಪು. 28-ಪು. 29 ಪ್ಯಾ. 6

ವಾಚಕರಿಂದ ಪ್ರಶ್ನೆಗಳು

ಪ್ರಮಾಣ ಮಾಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಪ್ರಮಾಣ ಮಾಡೋದು ಅಂದ್ರೆ “ಎಲ್ಲರ ಮುಂದೆ ‘ನಾನು ಹೇಳುತ್ತಿರುವುದು ಸತ್ಯ’ ಅಂತ ಪ್ರತಿಜ್ಞೆ ಮಾಡುವುದು ಅಥವಾ ‘ನಾನು ಒಂದು ಕೆಲಸವನ್ನ ಮಾಡ್ತೀನಿ’ ಅಂತ ಮಾತು ಕೊಟ್ಟಮೇಲೆ ಅದನ್ನ ತಪ್ಪದೆ ಮಾಡುವುದು.” ಸಾಮಾನ್ಯವಾಗಿ ಜನರು ಪ್ರತಿಜ್ಞೆ ಮಾಡುವಾಗ ದೇವರ ಮೇಲೆ ಆಣೆಯಿಟ್ಟು ಹೇಳ್ತಾರೆ. ಇನ್ನೂ ಕೆಲವರು ಅದನ್ನ ಬರವಣಿಗೆ ರೂಪದಲ್ಲಿ ಮಾಡುತ್ತಾರೆ.

“ಆಣೆ ಇಡಲೇಬೇಡಿ. . . . ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ. ಇದಕ್ಕಿಂತ ಬೇರೆ ಏನೇ ಬಂದ್ರೂ ಅದು ಸೈತಾನನಿಂದ ಬಂದಿರುತ್ತೆ” ಅಂತ ಯೇಸು ಹೇಳಿದನು. (ಮತ್ತಾ. 5:33-37) ಅದಕ್ಕೆ ಕೆಲವರು ಪ್ರಮಾಣ ಮಾಡೋದು ತಪ್ಪು ಅಂತ ಅಂದುಕೊಂಡಿದ್ದಾರೆ. ಆದ್ರೆ ಆತನ ಮಾತಿನ ಅರ್ಥ ಅದಾಗಿರಲಿಲ್ಲ. ಯಾಕಂದ್ರೆ ಕೆಲವು ವಿಷಯಗಳಿಗೆ ಪ್ರಮಾಣ ಮಾಡಬೇಕು ಅಂತ ಮೋಶೆಯ ನಿಯಮ ಪುಸ್ತಕದಲ್ಲಿ ಇತ್ತು. ಹಿಂದಿನ ಕಾಲದ ದೇವರ ಸೇವಕರೂ ಪ್ರಮಾಣ ಮಾಡಿದ್ರು. (ಆದಿ. 14:22, 23; ವಿಮೋ. 22:10, 11) ಅಷ್ಟೇ ಅಲ್ಲ, ಕೆಲವೊಂದು ಸಲ ಯೆಹೋವನೂ ಪ್ರಮಾಣ ಮಾಡಿದ್ದನು ಅಂತ ಯೇಸುಗೆ ಗೊತ್ತಿತ್ತು. (ಇಬ್ರಿ. 6:13-17) ಹಾಗಾಗಿ ಯೇಸು ಪ್ರಮಾಣ ಮಾಡಲೇಬೇಡಿ ಅಂತ ಇಲ್ಲಿ ಹೇಳ್ತಿಲ್ಲ. ಬದಲಿಗೆ ಮಾತು-ಮಾತಿಗೂ ಆಣೆ ಇಡಬೇಡಿ ಅಂತ ಹೇಳ್ತಿದ್ದಾನೆ. ಪ್ರಮಾಣ ಮಾಡೋದು ತುಂಬ ಗಂಭೀರವಾದ ವಿಷಯ. ಪ್ರಮಾಣ ಮಾಡುವಾಗ ನಾವು ಏನು ಹೇಳುತ್ತೀವೋ ಅದೇ ತರ ನಡೆದುಕೊಳ್ಳಬೇಕು ಅಂತ ಯೆಹೋವನು ಬಯಸುತ್ತಾನೆ.

ಹಾಗಾದ್ರೆ ನಿಮಗೆ ಯಾರಾದ್ರು ಪ್ರಮಾಣ ಮಾಡೋಕೆ ಹೇಳಿದ್ರೆ ಏನು ಮಾಡ್ತೀರಾ? ಮೊದಲು, ಪ್ರಮಾಣ ಮಾಡೋ ಮುಂಚೆ ನಿಮ್ಮ ಮಾತಿನ ಪ್ರಕಾರ ನಡಕೊಳ್ಳೋಕೆ ಆಗುತ್ತಾ ಇಲ್ವಾ ಅಂತ ಯೋಚನೆ ಮಾಡಿ. ಅದರ ಬಗ್ಗೆ ಸಂಶಯ ಇದ್ರೆ ಪ್ರಮಾಣ ಮಾಡಬೇಡಿ. ಯಾಕಂದ್ರೆ “ಹರಕೆ ಹೊತ್ತು ಅದನ್ನ ತೀರಿಸದೇ ಇರೋದಕ್ಕಿಂತ ಹರಕೆ ಮಾಡದೇ ಇರೋದೇ ಒಳ್ಳೇದು” ಅಂತ ದೇವರ ವಾಕ್ಯ ಹೇಳುತ್ತೆ. (ಪ್ರಸಂ. 5:5) ಆಮೇಲೆ, ನೀವು ಯಾವ ವಿಷಯದ ಬಗ್ಗೆ ಪ್ರಮಾಣ ಮಾಡಬೇಕೋ ಅದಕ್ಕೆ ಸಂಬಂಧಪಟ್ಟ ಬೈಬಲ್‌ ತತ್ವಗಳ ಬಗ್ಗೆ ಯೋಚಿಸಿ, ನಂತರ ತೀರ್ಮಾನ ಮಾಡಿ. ಅದಕ್ಕೆ ಕೆಲವು ತತ್ವಗಳನ್ನ ಈಗ ನೋಡೋಣ.

ಒಬ್ಬ ಸಹೋದರ ಕೋರ್ಟ್‌ನಲ್ಲಿ ಪ್ರಮಾಣ ಮಾಡ್ತಿದ್ದಾನೆ. ಅವನು ಬಲಗೈಯನ್ನು ಮೇಲೆ ಎತ್ತಿದ್ದಾನೆ. ಎಡಗೈಯನ್ನು ಬೈಬಲ್‌ ಮೇಲೆ ಇಟ್ಟಿದ್ದಾನೆ.

ದೇವರು ಒಪ್ಪುವ ಪ್ರಮಾಣಗಳು. ಯೆಹೋವನ ಸಾಕ್ಷಿಗಳು ಮದುವೆಯಾಗುವಾಗ ಪ್ರಮಾಣ ಮಾಡುತ್ತಾರೆ. ಇದನ್ನ ಯೆಹೋವನು ಒಪ್ಪುತ್ತಾನೆ. ಮದುವೆ ಆಗೋ ಗಂಡು ಹೆಣ್ಣು ತಾವು “ಜೀವಿಸುವಷ್ಟು ಕಾಲ” ಒಬ್ಬರನ್ನೊಬ್ಬರು ಪ್ರೀತಿಸ್ತೀವಿ, ಗೌರವಿಸ್ತೀವಿ ಅಂತ ಎಲ್ಲರ ಮುಂದೆ ಮತ್ತು ಯೆಹೋವನ ಮುಂದೆ ಮಾತು ಕೊಡ್ತಾರೆ. ಇದೂ ಒಂದು ರೀತಿಯಲ್ಲಿ ಪ್ರಮಾಣ ಮಾಡಿದ ಹಾಗೇನೇ. (ಯೆಹೋವನ ಸಾಕ್ಷಿ ಅಲ್ಲದವರು ಕೂಡ ಮದುವೆಯಾಗುವಾಗ ದೇವರನ್ನ ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣ ಮಾಡ್ತಾರೆ.) ಹೀಗೆ ಪ್ರಮಾಣ ಮಾಡಿದ ಮೇಲೆ ಅವರಿಬ್ಬರು ಗಂಡ-ಹೆಂಡತಿ ಆಗ್ತಾರೆ. ಅವರು ಜೀವನ ಪೂರ್ತಿ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು.—ಆದಿ. 2:24; 1 ಕೊರಿಂ. 7:39.

ದೇವರು ಒಪ್ಪದಿರುವ ಪ್ರಮಾಣಗಳು. ‘ನಾನು ಇನ್ಮೇಲೆ ಯೆಹೋವನ ಸಾಕ್ಷಿಯಾಗಿ ಇರಲ್ಲ’ ಅಂತ ಅಥವಾ ‘ದೇಶಕ್ಕೋಸ್ಕರ ಯುದ್ಧ ಮಾಡ್ತೀನಿ’ ಅಂತ ನಾವು ಪ್ರಮಾಣ ಮಾಡಲ್ಲ. ಹೀಗೆ ಮಾಡಿದ್ರೆ ದೇವರ ನಿಯಮವನ್ನ ಮುರಿದ ಹಾಗಾಗುತ್ತೆ. ಕ್ರೈಸ್ತರು “ಲೋಕದ ಜನ್ರ ತರ ಇಲ್ಲದೇ ಇರೋದ್ರಿಂದ” ಯುದ್ಧ ಮತ್ತು ಜಗಳಗಳಲ್ಲಿ ತಲೆ ಹಾಕಲ್ಲ.—ಯೋಹಾ. 15:19; ಯೆಶಾ. 2:4; ಯಾಕೋ. 1:27.

ನಮ್ಮ ಮನಸ್ಸಾಕ್ಷಿಗೆ ಬಿಟ್ಟ ಪ್ರಮಾಣಗಳು. ನಾವು ಪ್ರಮಾಣ ಮಾಡೋ ವಿಷಯದ ಬಗ್ಗೆ ಮಾತು ಕೊಡೋ ಮುಂಚೆನೇ ಚೆನ್ನಾಗಿ ಯೋಚನೆ ಮಾಡಬೇಕು ಅಂತ ಯೇಸುವಿನ ಮಾತಿಂದ ನಮಗೆ ಗೊತ್ತಾಗುತ್ತೆ. ಆತನು ಹೇಳಿದ್ದು, “ರಾಜಂದು ರಾಜನಿಗೆ ಕೊಡಿ, ಆದ್ರೆ ದೇವರದ್ದನ್ನ ದೇವರಿಗೆ ಕೊಡಿ.”—ಲೂಕ 20:25.

ಒಬ್ಬ ಸಹೋದರ ಒಂದು ದೇಶದ ನಾಗರೀಕನಾಗೋಕೆ ಅಥವಾ ಪಾಸ್‌ಪೋರ್ಟ್‌ ಮಾಡಿಸೋಕೆ ಅರ್ಜಿ ಹಾಕ್ತಾನೆ ಅಂದುಕೊಳ್ಳಿ. ಆಗ ಆ ದೇಶದ ಕಾನೂನನ್ನ ಪಾಲಿಸ್ತೀನಿ ಅಂತ ಅವನು ಮಾತು ಕೊಡಬೇಕಾಗುತ್ತೆ. ಆದ್ರೆ ಆ ದೇಶದ ನಿಯಮಗಳು ದೇವರ ನಿಯಮಗಳಿಗೆ ವಿರುದ್ಧವಾಗಿದ್ರೆ ಅವನ ಮನಸ್ಸಾಕ್ಷಿ ಅದನ್ನ ಒಪ್ಪಿಕೊಳ್ಳಲ್ಲ. ಆದ್ರೆ ಕೆಲವು ದೇಶಗಳಲ್ಲಿ ಪ್ರಮಾಣ ಮಾಡ್ತಿರೋ ಷರತ್ತು-ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳೋಕೆ ಸರ್ಕಾರ ಒಪ್ಪಬಹುದು. ಅಂಥ ಸಂದರ್ಭದಲ್ಲಿ ತನ್ನ ಮನಸ್ಸಾಕ್ಷಿ ಒಪ್ಪುವುದಾದರೆ ಅವನು ಪ್ರಮಾಣ ಮಾಡಬಹುದು.

ಈ ತರ ಬದಲಾಗಿರೋ ಷರತ್ತು-ನಿಯಮಗಳಿಗೆ ಒಪ್ಪಿಕೊಂಡು ಪ್ರಮಾಣ ಮಾಡುವುದರಿಂದ ಸರ್ಕಾರಕ್ಕೆ ವಿಧೇಯತೆ ತೋರಿಸ್ತೀವಿ. ಇದು ಒಂದರ್ಥದಲ್ಲಿ ರೋಮನ್ನರಿಗೆ 13:1 ರಲ್ಲಿರೋ “ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು” ಅನ್ನೋ ತತ್ವವನ್ನ ಪಾಲಿಸಿದ ಹಾಗೂ ಇರುತ್ತೆ. ದೇವರು ಹೇಳಿದ್ದನ್ನೇ ಮಾಡಿದ ಹಾಗೂ ಇರುತ್ತೆ.

ಪ್ರಮಾಣ ಮಾಡುವಾಗ ಒಂದು ವಸ್ತು ಮೇಲೆ ಕೈ ಇಡ್ತಾರೆ ಅಥವಾ ಯಾವುದಾದರೂ ಒಂದು ರೀತಿಯ ಕ್ರಿಯೆ ಮಾಡ್ತಾರೆ. ಆದ್ರೆ ಇದನ್ನ ಮಾಡಬೇಕಾ ಬೇಡವಾ ಅನ್ನೋದು ಪ್ರತಿಯೊಬ್ಬರ ಮನಸ್ಸಾಕ್ಷಿಗೆ ಬಿಟ್ಟದ್ದು. ಹಿಂದಿನ ಕಾಲದಲ್ಲಿ ರೋಮನ್ನರು ಮತ್ತು ಸಿದಿಯರು ಪ್ರಮಾಣ ಮಾಡುವಾಗ ಕೈಯಲ್ಲಿ ಕತ್ತಿ ಹಿಡಿದುಕೊಳ್ತಿದ್ರು. ಇದು ಅವರು ಯುದ್ಧ ದೇವರ ಮುಂದೆ ಪ್ರಮಾಣ ಮಾಡಿದ ಹಾಗಿದೆ ಅಂತ ಅಂದುಕೊಳ್ತಿದ್ರು. ಅದೇ ತರ ಗ್ರೀಕರು ಆಕಾಶದ ಕಡೆ ಕೈ ಎತ್ತಿ ಪ್ರಮಾಣ ಮಾಡ್ತಿದ್ರು. ಯಾಕಂದ್ರೆ ಪ್ರಮಾಣ ಮಾಡ್ತಿರೋ ವ್ಯಕ್ತಿ ಅವನು ಹೇಳಿದ ತರ ನಡೆದುಕೊಳ್ತಾನಾ ಇಲ್ವಾ ಅಂತ ದೇವರು ನೋಡ್ತಾನೆ ಮತ್ತು ಅವನ ಹತ್ರ ಲೆಕ್ಕ ಕೇಳ್ತಾನೆ ಅಂತ ಅವರು ನೆನಸುತ್ತಿದ್ದರು.

ರಾಷ್ಟ್ರೀಯ ಲಾಂಛನಗಳು ಸುಳ್ಳಾರಾಧನೆಗೆ ಸಂಬಂಧ ಪಟ್ಟಿದ್ರೆ ಅಥವಾ ಕೆಲವು ಕಡೆ ರಾಷ್ಟ್ರೀಯ ಲಾಂಛನಗಳನ್ನ ಜನರು ಆರಾಧಿಸಿದ್ರೆ ಯೆಹೋವನ ಆರಾಧಕರು ಅವುಗಳ ಮೇಲೆ ಕೈಯಿಟ್ಟು ಪ್ರಮಾಣ ಮಾಡಲ್ಲ. ಆದ್ರೆ ನಿಮಗೆ ಒಂದುವೇಳೆ ಕೋರ್ಟಲ್ಲಿ ಬೈಬಲ್‌ ಮೇಲೆ ಕೈ ಇಟ್ಟು ಪ್ರಮಾಣ ಮಾಡೋಕೆ ಹೇಳಿದ್ರೆ ಏನು ಮಾಡೋದು? ಆಗ ಆ ಸಹೋದರ ಕೈ ಇಡಬಹುದು. ಯಾಕಂದ್ರೆ ಬೈಬಲ್‌ ಕಾಲದಲ್ಲೂ ಎಷ್ಟೋ ನಂಬಿಗಸ್ತ ಜನರು ಮಾತು ಕೊಡುವಾಗ ಕೆಲವು ನಿರ್ದಿಷ್ಟ ಕ್ರಿಯೆಗಳನ್ನು ಮಾಡಿದ್ರು ಅಂತ ಬೈಬಲ್‌ ಹೇಳುತ್ತೆ. (ಆದಿ. 24:2, 3, 9; 47:29-31) ಒಂದುವೇಳೆ ನೀವು ಈ ತರ ಪ್ರಮಾಣ ಮಾಡೋದಾದ್ರೆ ನೀವು ದೇವರನ್ನ ಸಾಕ್ಷಿಯಾಗಿಟ್ಟುಕೊಂಡು ಮಾಡ್ತಿದ್ದೀರ ಅನ್ನೋದನ್ನ ಮರೆಯಬೇಡಿ. ಹಾಗಾಗಿ ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನಿಜಾನೇ ಹೇಳಬೇಕು.

ಬೈಬಲ್‌ ತತ್ವಗಳು

  • ಮತ್ತಾಯ 5:37: “ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ.”

  • ಯೋಹಾನ 15:19: ‘ನೀವು ಲೋಕದ ಜನ್ರ ತರ ಇಲ್ಲ.’

  • ಧರ್ಮೋಪದೇಶಕಾಂಡ 5:9: “ನಾನೇ ನಿಮ್ಮ ದೇವರಾದ ಯೆಹೋವ. . . . ನನ್ನನ್ನ ಬಿಟ್ಟು ಬೇರೆ ಯಾರನ್ನೂ ಆರಾಧನೆ ಮಾಡಬಾರದು.”

  • ರೋಮನ್ನರಿಗೆ 13:1: “ಅಧಿಕಾರಿಗಳ ಮಾತು ಕೇಳಬೇಕು.”

  • ಲೂಕ 20:25: “ರಾಜಂದು ರಾಜನಿಗೆ ಕೊಡಿ, ಆದ್ರೆ ದೇವರದ್ದನ್ನ ದೇವರಿಗೆ ಕೊಡಿ.”

  • 1 ಪೇತ್ರ 2:12: “ಲೋಕದ ಜನ್ರ ಮಧ್ಯ ಇರುವಾಗ ನೀವು ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಿ. . . . ನೀವು ಮಾಡಿದ ಒಳ್ಳೇ ಕೆಲಸಗಳನ್ನ ನೋಡ್ತಾರೆ.”

ನೀವು ಪ್ರಮಾಣ ಮಾಡೋ ಮುಂಚೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಬೇಕು ಮತ್ತು ಹೀಗೆ ಪ್ರಮಾಣ ಮಾಡುವಾಗ ನಿಮ್ಮ ಮನಸ್ಸಾಕ್ಷಿ ಚುಚ್ಚುತ್ತಿದೆಯಾ? ನೀವು ಬೈಬಲ್‌ ತತ್ವಗಳನ್ನ ಪಾಲಿಸ್ತಿದ್ದೀರಾ? ಅಂತ ಯೋಚಿಸಬೇಕು. ಯಾಕಂದ್ರೆ ನಾವು ಯೆಹೋವ ದೇವರ ಜೊತೆ ಇರೋ ಸಂಬಂಧವನ್ನ ಕಾಪಾಡಿಕೊಳ್ಳೋಕೆ ಆಸೆ ಪಡ್ತೀವಿ. ಅಷ್ಟೇ ಅಲ್ಲ, ನಾವು ಮಾತು ಕೊಟ್ಟ ಮೇಲೆ ಅದನ್ನ ಉಳಿಸಿಕೊಳ್ಳಲೇಬೇಕು.—1 ಪೇತ್ರ 2:12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ