ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp23 ನಂ. 1 ಪು. 8-9
  • 2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದರ ಅರ್ಥ ಏನು
  • ಇದು ಹೇಗೆ ಸಹಾಯ ಮಾಡುತ್ತೆ
  • ಸಹಾಯ‘ಸಾಂತ್ವನದ ದೇವರಿಂದ’
    ಎಚ್ಚರ!—2009
  • ನಕಾರಾತ್ಮಕ ಭಾವನೆಗಳ ವಿರುದ್ಧ ಹೇಗೆ ಹೋರಾಡಬಲ್ಲಿರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • 3 | ಬೈಬಲ್‌ನಲ್ಲಿರೋ ಉದಾಹರಣೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ಮುದುಡಿದ ಮನಸ್ಸು
    ಎಚ್ಚರ!—2014
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
wp23 ನಂ. 1 ಪು. 8-9
 ವಯಸ್ಸಾದ ಒಬ್ಬ ವ್ಯಕ್ತಿ ತಾನು ಬೈಬಲ್‌ನಲ್ಲಿ ಓದಿದ್ದನ್ನ ಧ್ಯಾನಸ್ತಿದ್ದಾನೆ.

2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’

ಬೈಬಲ್‌ ಹೀಗೆ ಹೇಳುತ್ತೆ: “ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ, ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.

ಇದರ ಅರ್ಥ ಏನು

ಬೈಬಲ್‌ನಲ್ಲಿರೋ ಮಾತುಗಳು ನಮಗೆ ಸಾಂತ್ವನ ಕೊಟ್ಟು, ಬೇಡದೇ ಇರೋ ವಿಷ್ಯಗಳನ್ನ ಯೋಚಿಸದೇ ಇರೋಕೆ ಸಹಾಯ ಮಾಡುತ್ತೆ. ನಮ್ಮ ಮನಸ್ಸಲ್ಲಿರೋ ನೋವುಗಳು ಕೂಡ ಭವಿಷ್ಯದಲ್ಲಿ ಇರಲ್ಲ ಅಂತ ಬೈಬಲ್‌ ಮಾತು ಕೊಡುತ್ತೆ.

ಇದು ಹೇಗೆ ಸಹಾಯ ಮಾಡುತ್ತೆ

ನಮ್ಮೆಲ್ಲರಿಗೂ ಒಂದಲ್ಲಾ ಒಂದು ಚಿಂತೆ ಇದ್ದೇ ಇದೆ. ಆದ್ರೆ ಖಿನ್ನತೆ ಮತ್ತು ಆತಂಕದ ಸಮಸ್ಯೆ ಇರೋರಿಗೆ ನೋವು ತುಂಬಿದ ಭಾವನೆಗಳು ಒಂದೊಂದು ಕ್ಷಣನೂ ಕಿತ್ತು ತಿನ್ನುತ್ತೆ. ಇಂಥವ್ರಿಗೆ ಬೈಬಲ್‌ ಸಹಾಯ ಮಾಡುತ್ತಾ?

  • ಕಹಿ ಭಾವನೆಗಳಿಂದ ಹೊರಗೆ ಬರೋಕೆ ಬೈಬಲ್‌ನಲ್ಲಿರೋ ಒಳ್ಳೇ ಮಾತುಗಳು ಸಹಾಯ ಮಾಡುತ್ತೆ. (ಫಿಲಿಪ್ಪಿ 4:8) ಅದ್ರಲ್ಲಿರೋ ಸಾಂತ್ವನದ ಮತ್ತು ಹಿತಕರ ಮಾತುಗಳು ನಮ್ಮ ಭಾವನೆಗಳನ್ನ ನಿಯಂತ್ರಣದಲ್ಲಿ ಇಡೋಕೆ ನೆರವಾಗುತ್ತೆ.—ಕೀರ್ತನೆ 94:18, 19.

  • ನಾವು ಯೋಗ್ಯತೆ ಇಲ್ಲದವರು ಅನ್ನೋ ಭಾವನೆಯನ್ನ ತೆಗೆದುಹಾಕೋಕೆ ಬೈಬಲ್‌ ಸಹಾಯ ಮಾಡುತ್ತೆ.—ಲೂಕ 12:6, 7.

  • ನಾವು ಒಂಟಿಯಲ್ಲ ಮತ್ತು ನಮ್ಮನ್ನ ಸೃಷ್ಟಿ ಮಾಡಿರೋ ದೇವರು ನಮ್ಮ ಜೊತೆ ಇದ್ದಾನೆ ಅನ್ನೋ ಧೈರ್ಯ ಬೈಬಲ್‌ನಲ್ಲಿರೋ ಮಾತುಗಳಿಂದ ಸಿಗುತ್ತೆ.—ಕೀರ್ತನೆ 34:18; 1 ಯೋಹಾನ 3:19, 20.

  • ನಮ್ಮ ಕಹಿ ನೆನಪುಗಳನ್ನೆಲ್ಲ ದೇವರು ತೆಗೆದುಹಾಕ್ತಾನೆ ಅಂತ ಬೈಬಲ್‌ ಮಾತು ಕೊಡುತ್ತೆ. (ಯೆಶಾಯ 65:17; ಪ್ರಕಟನೆ 21:4) ಈ ಆಶ್ವಾಸನೆಯನ್ನ ನಾವು ಮರೆಯದೇ ಇದ್ರೆ ನಮ್ಮ ಮನಸ್ಸಲ್ಲಿರೋ ನೋವನ್ನ ನಿಭಾಯಿಸೋಕೆ ಆಗುತ್ತೆ.

ಬೈಬಲ್‌ನಿಂದ ಸಹಾಯ ಪಡೆದ ಜೆಸಿಕ

ಖಿನ್ನತೆ ನನ್ನನ್ನ ಕುಗ್ಗಿಸಿದಾಗ . . .

ಜೆಸಿಕ ತನ್ನ ಕೈಯಲ್ಲಿ ಬೈಬಲ್‌ನ ಹಿಡ್ಕೊಂಡು ನಿದ್ರೆ ಮಾಡ್ತಿದ್ದಾಳೆ.

“ನನಗೆ 25 ವರ್ಷ ಇದ್ದಾಗ ಒಂದಿನ ಸಹಿಸಲಾರದ ದುಃಖ, ಆತಂಕ, ನೋವು, ಚಿಂತೆ ಎಲ್ಲಾ ಒಟ್ಟಿಗೆ ಬಂತು. ಆಗ ನಾನು ಕುಸಿದು ಬಿದ್ದೆ (ನರ್ವಸ್‌ ಬ್ರೇಕ್‌ಡೌನ್‌). ಇದ್ರಿಂದ ಚಿಕ್ಕಪುಟ್ಟ ಕೆಲಸಗಳನ್ನ ಮಾಡೋಕೂ ಆಗ್ತಿರಲಿಲ್ಲ. ಈ ಘಟನೆ ನಡೆದ ಮೇಲೆ ಡಾಕ್ಟರ್‌ ನನಗೆ ತೀವ್ರವಾದ ಖಿನ್ನತೆ ಇದೆ ಅಂತ ಹೇಳಿದ್ರು. ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳು ಮತ್ತು ಅದ್ರ ಕಹಿ ನೆನಪುಗಳು ಈಗ ನನ್ನನ್ನ ಖಿನ್ನತೆಗೆ ತಳ್ಳಿದೆ ಅಂತ ಡಾಕ್ಟರ್‌ ವಿವರಿಸಿದ್ರು. ಔಷಧಿ ತಗೊಳ್ಳೋದ್ರ ಜೊತೆಗೆ ನಾನು ತಜ್ಞರ ಹತ್ರ ನನ್ನ ಸಮಸ್ಯೆ ಬಗ್ಗೆ ಮಾತಾಡಿದೆ. ಇದ್ರಿಂದ ನಾನು ಯಾಕೆ ಒಳ್ಳೇ ವಿಷ್ಯಗಳ ಬಗ್ಗೆ ಯೋಚನೆ ಮಾಡ್ತಿಲ್ಲ ಅಂತ ಕಂಡುಹಿಡಿದು ಅದನ್ನ ಸರಿ ಮಾಡೋಕೆ ಸಹಾಯ ಆಗಿದೆ.”

ಬೈಬಲ್‌ ನನಗೆ ಹೇಗೆ ಸಹಾಯ ಮಾಡ್ತಿದೆ

“ನನಗೆ ತುಂಬ ಖಿನ್ನತೆ ಆದಾಗ ಇದ್ದಕ್ಕಿದ್ದ ಹಾಗೆ ಭಯ, ಗಾಬರಿ ಆಗ್ತಿತ್ತು. ಆತಂಕ ಕಾಡ್ತಿತ್ತು, ಎಷ್ಟೋ ರಾತ್ರಿಗಳು ನಿದ್ದೆನೇ ಬರ್ತಾ ಇರಲಿಲ್ಲ. ಆಗೆಲ್ಲಾ ಏನೇನೋ ವಿಷ್ಯಗಳು ನೆನಪಾಗ್ತಾ ಇತ್ತು. ಅದನ್ನ ತಡಿಯೋಕೆ ನನ್ನಿಂದ ಆಗ್ತಾ ಇರಲಿಲ್ಲ. ಕೀರ್ತನೆ 94:19 ಹೇಳೋ ಪ್ರಕಾರ ಚಿಂತೆಗಳು ನಮ್ಮನ್ನ ಮುತ್ಕೊಂಡಾಗ ದೇವರು ನಮಗೆ ಸಾಂತ್ವನ, ಸಮಾಧಾನ ಕೊಡ್ತಾನೆ. ಹಾಗಾಗಿ, ನಾನು ವಚನಗಳನ್ನ ಬರೆದಿಟ್ಟಿದ್ದ ಪುಸ್ತಕನ ಮತ್ತು ಬೈಬಲ್‌ನ ನನ್ನ ಬೆಡ್‌ ಹತ್ರ ಇಟ್ಕೊಂಡೆ. ಯಾವಾಗೆಲ್ಲ ನಿದ್ದೆ ಬರ್ತಾ ಇರಲಿಲ್ಲವೋ ಆಗೆಲ್ಲಾ ನಾನು ಆ ವಚನಗಳನ್ನ ಓದ್ತಾ ಇದ್ದೆ. ಆಗ ದೇವರೇ ನನಗೆ ಸಾಂತ್ವನ ಕೊಡ್ತಾ ಇದ್ದಾನೆ ಅಂತ ಗೊತ್ತಾಗ್ತಿತ್ತು.

ಬೈಬಲ್‌ನಲ್ಲಿರೋ ವಿಷ್ಯಗಳಿಗೆ ವಿರುದ್ಧವಾದ ಯೋಚನೆಗಳು ನಮ್ಮ ಮನಸ್ಸಲ್ಲಿದ್ರೆ ಅದನ್ನ ತೆಗೆದುಹಾಕಬೇಕು ಅಂತ ಬೈಬಲ್‌ ಪ್ರೋತ್ಸಾಹಿಸುತ್ತೆ. ಒಂದು ಸಮಯದಲ್ಲಿ, ‘ನಾನು ಯಾವುದಕ್ಕೂ, ಯಾರ ಪ್ರೀತಿ ಪಡೆಯಕ್ಕೂ ಯೋಗ್ಯತೆ ಇಲ್ಲದವಳು, ಯಾವ ಕೆಲಸಕ್ಕೂ ಬಾರದವಳು’ ಅಂತ ನನ್ನ ಬಗ್ಗೆ ನಾನೇ ಅಂದ್ಕೊಳ್ತಿದ್ದೆ. ಆದ್ರೆ ಹೀಗೆ ಯೋಚಿಸೋದು ತಪ್ಪು ಅಂತ ನನಗೆ ಅರ್ಥ ಆಯ್ತು. ಯಾಕಂದ್ರೆ ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ, ಕಾಳಜಿವಹಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. ಹೋಗ್ತಾ ಹೋಗ್ತಾ ನಿಧಾನವಾಗಿ ನನ್ನ ಭಾವನೆಗಳನ್ನ ನಿಯಂತ್ರಿಸೋಕೆ ನಾನು ಕಲಿತೆ. ಹೀಗೆ ಮಾಡಿದ್ರಿಂದ ನನ್ನ ಭಾವನೆಗಳು ನನ್ನನ್ನ ನಿಯಂತ್ರಿಸೋಕೆ ಬಿಟ್ಟುಕೊಡದೇ ಇರೋಕೆ ಆಗಿದೆ. ನಾನು ನನ್ನ ಬಗ್ಗೆ ಯೋಚಿಸ್ತಾ ಇದ್ದ ರೀತಿಯನ್ನ ಬದಲಾಯಿಸೋಕೆ ಒಂದು ವಿಷ್ಯ ಸಹಾಯ ಮಾಡ್ತು. ಅದೇನಂದ್ರೆ, ದೇವರು ನನ್ನನ್ನ ಹೇಗೆ ನೋಡ್ತಾನೋ ನಾನು ಅದೇ ತರ ನನ್ನನ್ನ ನೋಡಬೇಕು ಅಂತ ಕಲಿತೆ.

ಮುಂದೆ ಒಂದಿನ ಯಾವ ಕಹಿ ನೆನಪುಗಳೂ ನಮ್ಮ ಮನಸ್ಸಿಗೆ ಬರಲ್ಲ. ಕಳವಳ ತರೋ ಯೋಚನೆಗಳೂ ಕೂಡ ನೆನಪಿಗೆ ಬರಲ್ಲ. ಯಾವ ತರದ ಮಾನಸಿಕ ಆರೋಗ್ಯದ ಸಮಸ್ಯೆನೂ ಇರಲ್ಲ. ಆ ದಿನಕ್ಕಾಗಿ ಕಾಯ್ತಾ ಇದ್ದೀನಿ. ಈ ನಿರೀಕ್ಷೆ ಇರೋದ್ರಿಂದನೇ ಈಗ ಇರೋ ಖಿನ್ನತೆಯನ್ನ ನಿಭಾಯಿಸೋಕೆ ನನ್ನಿಂದ ಆಗ್ತಾ ಇದೆ.”

ಹೆಚ್ಚಿನ ಸಹಾಯಕ್ಕಾಗಿ:

“ಸಹಾಯ ‘ಸಾಂತ್ವನದ ದೇವರಿಂದ’” ಅನ್ನೋ ಅಕ್ಟೋಬರ್‌ 2009ರ ಎಚ್ಚರ! ಪತ್ರಿಕೆಯ ಲೇಖನವನ್ನ jw.orgನಲ್ಲಿ ನೋಡಿ.

jw.orgನಲ್ಲಿ ಕೀರ್ತನೆ ಪುಸ್ತಕದ ಆಡಿಯೋ ರೆಕಾರ್ಡಿಂಗ್‌ ಕೇಳಿಸ್ಕೊಳ್ಳಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ