ಇದನ್ನ ಮಾಡಿ!
ಚಿತ್ರ ಚಿಕ್ಕದಲ್ಲ!
ನಮ್ಮ ಪ್ರಕಾಶನಗಳಲ್ಲಿ ಬರೋ ಚಿತ್ರಗಳು ನಮಗೆ ಒಳ್ಳೊಳ್ಳೆ ಪಾಠಗಳನ್ನ ಕಲಿಸುತ್ತೆ. ಆ ಪಾಠಗಳನ್ನ ನಾವು ಹೇಗೆ ಕಲಿಬಹುದು ಅಂತ ನೋಡೋಣ.
ರುಚಿರುಚಿಯಾಗಿರೋ ಊಟನ ನೋಡಿದ ತಕ್ಷಣ ನಮಗೆ ಅದನ್ನ ತಿನ್ನಬೇಕು ಅನ್ನೋ ಆಸೆ ಬರುತ್ತೆ. ಅದೇ ತರ ಒಂದು ಲೇಖನವನ್ನ ಓದಬೇಕು ಅನ್ನೋ ಆಸೆ ಬರಬೇಕಂದ್ರೆ ಮೊದ್ಲು ಅದ್ರಲ್ಲಿರೋ ಚಿತ್ರಗಳನ್ನ ನೋಡಿ. ಆ ಚಿತ್ರದಲ್ಲಿ ಏನೆಲ್ಲಾ ಇದೆ ಅಂತ ಗಮನಿಸಿ.—ಆಮೋ. 7:7, 8.
ಆ ಲೇಖನವನ್ನ ಓದ್ತಾ ‘ಈ ಚಿತ್ರವನ್ನ ಯಾಕೆ ಕೊಟ್ಟಿದ್ದಾರೆ?’ ಅಂತ ಯೋಚ್ನೆ ಮಾಡಿ. ಆ ಚಿತ್ರದ ಕೆಳಗೆ ಏನಾದ್ರೂ ಬರೆದಿದ್ರೆ ಅಥವಾ ಆ ಚಿತ್ರಕ್ಕೆ ವಿವರಣೆ ಇದ್ರೆ ಅದನ್ನೂ ಓದಿ. ‘ಈ ಚಿತ್ರಕ್ಕೂ ಲೇಖನಕ್ಕೂ ಏನ್ ಸಂಬಂಧ? ಈ ಚಿತ್ರದಿಂದ ನಾನೇನ್ ಕಲಿಬಹುದು?’ ಅಂತ ಯೋಚ್ನೆ ಮಾಡಿ.
ಆ ಲೇಖನ ಓದಾದ್ಮೇಲೆ ಮತ್ತೆ ಚಿತ್ರಗಳನ್ನ ನೋಡ್ತಾ ನೀವು ಕಲಿತ ಮುಖ್ಯ ವಿಷ್ಯಗಳನ್ನ ನೆನಪಿಸ್ಕೊಳ್ಳಿ. ಆಮೇಲೆ ಕಣ್ಮುಚ್ಚಿ ‘ಯಾವ್ಯಾವ ಚಿತ್ರ ಇತ್ತು, ಅದ್ರಿಂದ ನಾನು ಏನೆಲ್ಲಾ ಕಲಿತೆ?’ ಅಂತ ನೆನಪಿಸ್ಕೊಳ್ಳಿ.
ಈಗ ನೀವು, ಈ ಪತ್ರಿಕೆಯಲ್ಲಿರೋ ಒಂದೊಂದು ಚಿತ್ರಾನೂ ನೋಡ್ತಾ ಕಲಿತ ವಿಷ್ಯಗಳನ್ನ ನೆನಪಿಸ್ಕೊಳ್ತೀರಾ?