ಇದನ್ನ ಮಾಡಿ ನೋಡಿ!
ಬೇರೆಯವ್ರಿಗೂ ಹೇಳಿ
ನಾವೇನಾದ್ರೂ ಓದಿದಾಗ ಅಥವಾ ಕಲಿತಾಗ ನಮಗೆ ಖುಷಿ ಆಗುತ್ತೆ. ಆದ್ರೆ ನೀವು ಕಲ್ತಿರೋ ಮುತ್ತಿನಂಥ ವಿಷ್ಯನ ಬೇರೆಯವ್ರಿಗೆ ಹೇಳಿ ನೋಡಿ, ಆಗ ಆ ಖುಷಿ ಇನ್ನೂ ಜಾಸ್ತಿ ಆಗುತ್ತೆ. ಅದಕ್ಕೇ ಜ್ಞಾನೋಕ್ತಿ 11:25 “ಚೈತನ್ಯ ಕೊಡುವವನಿಗೆ ಚೈತನ್ಯ ಸಿಗುತ್ತೆ” ಅಂತ ಹೇಳುತ್ತೆ.
ಕಲ್ತಿದ್ದನ್ನ ನಾವು ಬೇರೆಯವ್ರಿಗೆ ಹೇಳಿದಾಗ ಆ ವಿಷ್ಯ ನಮಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ. ಅದನ್ನ ಚೆನ್ನಾಗಿ ನೆನಪಿಡೋಕೂ ಸುಲಭ ಆಗುತ್ತೆ. ಅಷ್ಟೇ ಅಲ್ಲ, ನಾವು ಹೇಳಿದ್ದನ್ನ ಕೇಳಿಸ್ಕೊಂಡವ್ರಿಗೂ ಅದ್ರಿಂದ ಪ್ರಯೋಜ್ನ ಸಿಗುತ್ತೆ. ಈ ಕಾರಣದಿಂದ ನಮ್ಮ ಖುಷಿ ಜಾಸ್ತಿ ಆಗುತ್ತೆ.—ಅ. ಕಾ. 20:35.
ಇದನ್ನ ಟ್ರೈ ಮಾಡಿ: ನೀವು ಕಲ್ತಿರೋದನ್ನ ಯಾರಿಗಾದ್ರೂ ಹೇಳೋಕೆ ಈ ವಾರ ಟ್ರೈ ಮಾಡಿ. ಕುಟುಂಬದಲ್ಲಿ, ಸಭೆಲಿ, ಕೆಲ್ಸದಲ್ಲಿ, ಸ್ಕೂಲಲ್ಲಿ, ಅಕ್ಕಪಕ್ಕದಲ್ಲಿ ಅಥವಾ ಸೇವೆಲಿ ಯಾರಿಗಾದ್ರೂ ನೀವು ಅದನ್ನ ಹೇಳಬಹುದು. ಅದನ್ನ ನಿಮ್ಮ ಸ್ವಂತ ಮಾತಲ್ಲಿ, ಸ್ಪಷ್ಟವಾಗಿ ಹೇಳೋಕೆ ಟ್ರೈ ಮಾಡಬೇಕು.
ನೆನಪಿಡಿ: ಇದನ್ನ ಜನ ನಿಮ್ಮನ್ನ ಮೆಚ್ಕೊಬೇಕು ಅಂತಲ್ಲ, ಬೇರೆಯವ್ರನ್ನ ಪ್ರೋತ್ಸಾಹಿಸಬೇಕು ಅಂತ ಮಾಡಬೇಕು.—1 ಕೊರಿಂ. 8:1.