ಇದನ್ನ ಮಾಡಿ ನೋಡಿ!
ತಪ್ಪದೇ ಬೈಬಲ್ ಓದಿ
‘ಪ್ರತಿ ದಿನ ಮಾಡೋಕೆ ನೂರಾರು ಕೆಲಸ ಇದೆ, ಅದ್ರ ಮಧ್ಯೆ ಹೇಗಪ್ಪಾ ತಪ್ಪದೇ ಬೈಬಲ್ ಓದೋದು’ ಅಂತ ನಿಮಗೆ ಅನಿಸ್ತಿದ್ಯಾ? (ಯೆಹೋ. 1:8) ಹಾಗಾದ್ರೆ ಈ ಕೆಳಗಿರೋ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ:
ರಿಮೈಂಡರ್ ಇಟ್ಕೊಳ್ಳಿ. ಬೈಬಲ್ ಓದೋಕೆ ನೆನಪಿಸೋ ತರ ನಿಮ್ಮ ಫೋನಲ್ಲಿ ಅಲಾರ್ಮ್ ಇಟ್ಕೊಳ್ಳಿ.
ನಿಮ್ಮ ಕಣ್ಣಿಗೆ ಬೇಗ ಕಾಣಿಸೋ ಕಡೆ ಬೈಬಲ್‌ನ ಇಡಿ. ನೀವು ಪ್ರಿಂಟೆಡ್ ಪ್ರತಿಯಲ್ಲಿ ಓದೋಕೆ ಇಷ್ಟಪಡೋದಾದ್ರೆ ಬೈಬಲನ್ನ ನಿಮ್ಮ ಕಣ್ಣಿಗೆ ಬೇಗ ಕಾಣಿಸೋ ಜಾಗದಲ್ಲಿಡಿ.—ಧರ್ಮೋ. 11:18.
ಆಡಿಯೋ ರೆಕಾರ್ಡಿಂಗ್ ಕೇಳಿಸ್ಕೊಳ್ಳಿ. ನೀವು ನಿಮ್ಮ ಕೆಲಸ ಮಾಡ್ತಾನೇ ಇದನ್ನ ಕೇಳಿಸ್ಕೊಬಹುದು. ತಾರಾ ಅನ್ನೋ ಸಹೋದರಿ ನೈಟ್ ಶಿಫ್ಟ್ ಕೆಲಸ ಮಾಡ್ತಾರೆ, ಪಯನೀಯರಾಗಿದ್ದಾರೆ ಮತ್ತು ಅವ್ರಿಗೆ ಮಕ್ಕಳೂ ಇದ್ದಾರೆ. ಸಹೋದರಿ ಹೇಳೋದು, “ನಾನು ಮನೆ ಕೆಲಸ ಮಾಡ್ತಾ ಆಡಿಯೋ ಬೈಬಲ್ ರೆಕಾರ್ಡಿಂಗ್ ಕೇಳಿಸ್ಕೊತ್ತೀನಿ. ಇದ್ರಿಂದ ನಾನು ತಪ್ಪದೇ ಬೈಬಲ್ ಓದೋಕೆ ಆಗ್ತಿದೆ.”
ತಪ್ಪಿಸಬೇಡಿ. ಏನೋ ಒಂದು ಕೆಲಸ ಬಂದು, ನೀವು ಅಂದ್ಕೊಳ್ಳೋ ಟೈಮಲ್ಲಿ ಬೈಬಲ್ ಓದೋಕೆ ಆಗಿಲ್ಲಾಂದ್ರೆ ಮಲಗೋ ಮುಂಚೆ ಕೆಲವು ಬೈಬಲ್ ವಚನಗಳನ್ನಾದ್ರೂ ಓದಿ. ಹೀಗೆ ಕೆಲವು ವಚನಗಳನ್ನಾದ್ರೂ ತಪ್ಪದೇ ಓದಿದ್ರೆ ನಿಮಗೆ ತುಂಬ ಪ್ರಯೋಜನ ಆಗುತ್ತೆ.—1 ಪೇತ್ರ 2:2.