ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwhf ಲೇಖನ 28
  • ಒಳ್ಳೇ ಅಪ್ಪ ಆಗೋಕೆ ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇ ಅಪ್ಪ ಆಗೋಕೆ ಏನು ಮಾಡಬೇಕು?
  • ಸುಖೀ ಸಂಸಾರಕ್ಕೆ ಸಲಹೆಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಪ್ಪನ ಪಾತ್ರ ಏನು?
  • ಅಪ್ಪ ಯಾಕೆ ವಿಶೇಷ?
  • ಅಪ್ಪ ಮತ್ತು ಮಗಳ ನಡುವಿನ ಬಾಂಧವ್ಯ
  • ಶಿಶುವಿನ ಆಗಮನ ದಂಪತಿಯ ಮೇಲೆ ಬೀರುವ ಪರಿಣಾಮ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ
    ಅನುಭವಗಳು
  • ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ನಿಜವಾಗಿಯೂ ತಪ್ಪಿಸಿಕೊಳ್ಳಬಲ್ಲರೋ?
    ಎಚ್ಚರ!—2000
  • ಅಪ್ಪಂದಿರಿಗೆ ಒಂದಿಷ್ಟು ಸಲಹೆಗಳು
    ಎಚ್ಚರ!—2013
ಇನ್ನಷ್ಟು
ಸುಖೀ ಸಂಸಾರಕ್ಕೆ ಸಲಹೆಗಳು
ijwhf ಲೇಖನ 28
ಅಪ್ಪ ಹದಿವಯಸ್ಸಿನ ತನ್ನ ಮಗಳ ಜೊತೆ ರಸ್ತೆಯಲ್ಲಿ ಸಂತೋಷದಿಂದ ನಡ್ಕೊಂಡು ಹೋಗ್ತಿದ್ದಾನೆ.

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಒಳ್ಳೇ ಅಪ್ಪ ಆಗೋಕೆ ಏನು ಮಾಡಬೇಕು?

ಈ ಲೇಖನದಲ್ಲಿ ಮುಂದಿನ ವಿಷಯಗಳ ಬಗ್ಗೆ ತಿಳ್ಕೊಬಹುದು.

  • ಅಪ್ಪನ ಪಾತ್ರ ಏನು?

  • ಅಪ್ಪ ಯಾಕೆ ವಿಶೇಷ?

  • ಅಪ್ಪ ಮತ್ತು ಮಗಳ ನಡುವಿನ ಬಾಂಧವ್ಯ

  • ಅಪ್ಪಂದಿರಿಗೆ ಒಂದಷ್ಟು ಸಲಹೆಗಳು

ಅಪ್ಪನ ಪಾತ್ರ ಏನು?

  • ಮಗು ಹುಟ್ಟೋಕೂ ಮುಂಚೆ ಅಪ್ಪನ ಪಾತ್ರ. ನೀವು ನಿಮ್ಮ ಹೆಂಡತಿ ಹತ್ರ ಈಗ ಹೇಗೆ ನಡ್ಕೊತೀರ ಅನ್ನೋದು ಮುಂದೆ ನೀವು ಅಪ್ಪ ಆದಾಗ ಹೇಗೆ ನಡ್ಕೊತೀರಿ ಅನ್ನೋದನ್ನ ತೋರಿಸುತ್ತೆ. ಡು ಫಾದರ್ಸ್‌ ಮ್ಯಾಟರ್‌? ಅನ್ನೋ ಪುಸ್ತಕದಲ್ಲಿ ಹೀಗಿದೆ:

    “ಯಾವ ತಂದೆ, ಗರ್ಭಿಣಿಯಾಗಿರೋ ತನ್ನ ಹೆಂಡತಿಗೆ ಬೇಕಾಗಿರೋದನ್ನ ತಂದು ಕೊಡ್ತಾನೋ, ಡಾಕ್ಟರ್‌ ಹತ್ರ ಹೋಗೋವಾಗ ಜೊತೆಯಲ್ಲಿ ಹೋಗ್ತಾನೋ, ಅಲ್ಟ್ರಾ ಸೌಂಡ್‌ ಮೂಲಕ ಮಗುವನ್ನ ನೋಡ್ತಾನೋ ಅಥವಾ ಅದರ ಹೃದಯ ಬಡಿತವನ್ನ ಕೇಳ್ತಾನೋ ಆ ತಂದೆ, ಹೆರಿಗೆ ಆದ ಮೇಲೂ ತನ್ನ ಹೆಂಡತಿ ಮತ್ತು ಮಗು ಚೆನ್ನಾಗಿ ನೋಡ್ಕೊಳ್ಳೋ ಸಾಧ್ಯತೆ ಜಾಸ್ತಿ.”

    “ಮಗುನ ಹೊತ್ತು, ಹೆರೋದು ನನ್ನ ಒಬ್ಬಳ ಕೆಲಸ ಅಂತ ನನ್ನ ಹೆಂಡ್ತಿ ತಿಳ್ಕೊಳ್ಳೋದು ನಂಗೆ ಇಷ್ಟ ಇರಲಿಲ್ಲ. ಅದಕ್ಕೆ ನಂಗೆ ಎಷ್ಟು ಆಗುತ್ತೋ ಅಷ್ಟು ಅವಳಿಗೆ ಸಹಾಯ ಮಾಡ್ದೆ. ಮಗು ಹುಟ್ಟೋಕೂ ಮುಂಚೆ ಇಬ್ರೂ ಸೇರಿ ಅದ್ರ ರೂಮ್‌ನ ರೆಡಿ ಮಾಡಿದ್ವಿ. ಆ ಸಮಯನ ನಾವು ತುಂಬಾ ಚೆನ್ನಾಗಿ ಎಂಜಾಯ್‌ ಮಾಡಿದ್ವಿ.”—ಜೇಮ್ಸ್‌ .

    ಬೈಬಲ್‌ ಹೇಳೋ ಮಾತು: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

  • ಮಗು ಹುಟ್ಟಿದ ಮೇಲೆ ಅಪ್ಪನ ಪಾತ್ರ. ಮಗುನ ಎತ್ತಿಕೊಳ್ಳಿ, ಅದ್ರ ಜೊತೆ ಆಟ ಆಡಿ. ಹೀಗೆ ಮಾಡಿದ್ರೆ ಅದ್ರ ಜೊತೆ ಬಾಂಧವ್ಯ ಬೆಳೆಸಿಕೊಳ್ಳೋಕಾಗುತ್ತೆ. ಅಷ್ಟೇ ಅಲ್ಲ, ಮಗುನ ಚೆನ್ನಾಗಿ ನೋಡ್ಕೊಳ್ಳಿ. ಅಪ್ಪನಾಗಿ ನೀವು ಮಾಡೋ ವಿಷ್ಯಗಳು ಮಗುವಿನ ಬೆಳವಣಿಗೆ ಮೇಲೆ ತುಂಬಾ ಪ್ರಭಾವ ಬೀರುತ್ತೆ. ನಿಮ್ಮ ಮತ್ತು ಮಗು ಮಧ್ಯೆ ಇರೋ ಬಾಂಧವ್ಯ ತಾನೇ ನೀವು ಮಗುನ ಎಷ್ಟು ಅಮೂಲ್ಯವಾಗಿ ನೋಡ್ತೀರಾ ಅನ್ನೋದನ್ನ ತೋರಿಸುತ್ತೆ.

    “ಮಗು ಜೊತೆ ಆಡುವಾಗ ನೀವೂ ಮಗು ಆಗಿ. ತಮಾಷೆ ಮಾಡಿ, ಯಾವಾಗ್ಲೂ ಸಿರೀಯಸ್‌ ಆಗಿರಬೇಡಿ. ಒಂದು ವಿಷಯ ನೆನಪಿಡಿ, ಪ್ರೀತಿ ಅಂದ್ರೆ ಏನು ಅಂತ ಮಕ್ಕಳು ಕಲಿಯೋದು ಅಪ್ಪ ಅಮ್ಮನಿಂದನೇ.”—ರಿಚರ್ಡ್‌.

    ಒಬ್ಬ ತಂದೆ ತನ್ನ ಪುಟ್ಟ ಮಗುನ ಎತ್ತುಕೊಂಡಿದ್ದಾನೆ.

    ಬೈಬಲ್‌ ಹೇಳೋ ಮಾತು: “ಮಕ್ಕಳು ಯೆಹೋವನಿಂದ ಸಿಗೋ ಆಸ್ತಿ, ಹೊಟ್ಟೆಯಲ್ಲಿರೋ ಮಗು ಆತನು ಕೊಡೋ ಬಹುಮಾನ.”—ಕೀರ್ತನೆ 127:3, ಪಾದಟಿಪ್ಪಣಿ.

  • ಮಕ್ಕಳು ಬೆಳೆಯುವಾಗ ನಿಮ್ಮ ಪಾತ್ರ. ಸಂಶೋಧನೆ ಪ್ರಕಾರ ಯಾವ ಮಕ್ಕಳು ಅಪ್ಪನಿಗೆ ತುಂಬಾ ಹತ್ರ ಆಗಿರ್ತಾರೋ ಅವರು ಸ್ಕೂಲಲ್ಲಿ ಚೆನ್ನಾಗಿ ಓದ್ತಾರೆ, ಅವರಿಗೆ ಭಾವನಾತ್ಮಕವಾಗಿ ಸಮಸ್ಯೆಗಳು ಕಮ್ಮಿ ಇರುತ್ತೆ. ಅವರು ಡ್ರಗ್ಸ್‌ ತಗೊಳಲ್ಲ ಮತ್ತು ಕೆಟ್ಟ ಕೆಲಸ ಮಾಡೋ ಸಾಧ್ಯತೆ ಕೂಡ ತುಂಬಾ ಕಮ್ಮಿ. ಹಾಗಾಗಿ ನಿಮ್ಮ ಮಕ್ಕಳ ಜೊತೆ ಒಳ್ಳೇ ಬಾಂಧವ್ಯ ಬೆಳೆಸಿಕೊಳ್ಳೋಕೆ ಸಮಯ ಮಾಡಿಕೊಳ್ಳಿ.

    “ನಾನು ನನ್ನ ಮಗನ ಹತ್ರ, ‘ನೀನು ದೂರ ಹೋದಾಗ ಯಾವುದನ್ನ ತುಂಬಾ ಮಿಸ್‌ ಮಾಡ್ಕೊತಿಯಾ’ ಅಂತ ಕೇಳ್ದೆ. ಆಗ ಅವನು ಲಾಂಗ್‌ ಡ್ರೈವ್‌ ಮಾಡುವಾಗ ಅಥವಾ ಊಟದ ಟೈಮ್‌ನಲ್ಲಿ ನಿಮ್ಮ ಜೊತೆ ಮಾತಾಡ್ತಿದ್ದನ್ನ ಮಿಸ್‌ ಮಾಡ್ಕೊತೀನಿ ಅಂತ ಹೇಳಿದ. ನಾನು ನನ್ನ ಮಗನ ಜೊತೆ ಜಾಸ್ತಿ ಟೈಮ್‌ ಕಳೆದಿದ್ರಿಂದ ಕೆಲವು ಪ್ರಾಮುಖ್ಯ ವಿಷಯಗಳ ಬಗ್ಗೆ ಚರ್ಚೆ ಮಾಡೋದಕ್ಕೆ ಆಯ್ತು. ಒಂದುವೇಳೆ ನಾನು ಟೈಮ್‌ ಕೊಟ್ಟಿರಲಿಲ್ಲ ಅಂದಿದ್ರೆ ಇದನ್ನೆಲ್ಲಾ ಮಾತಾಡೋಕೆ ಆಗ್ತಿರಲಿಲ್ಲ.”—ಡೆನ್ನಿಸ್‌.

    ತಂದೆ ಹದಿವಯಸ್ಸಿನ ತನ್ನ ಮಗನ ಜೊತೆ ಬೋಟ್‌ನಲ್ಲಿ ಕೂತು ಸಂತೋಷದಿಂದ ಮಾತಾಡ್ತಿದ್ದಾನೆ.

    ಬೈಬಲ್‌ ಹೇಳೋ ಮಾತು: “ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ . . . ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:15, 16.

ಅಪ್ಪ ಯಾಕೆ ವಿಶೇಷ?

ತುಂಬಾ ಜನ, ಅಪ್ಪ ಕುಟುಂಬಕ್ಕೋಸ್ಕರ ದುಡೀಬೇಕು, ಕುಟುಂಬನ ಚೆನ್ನಾಗಿ ನೋಡ್ಕೊಬೇಕು, ಅಮ್ಮ ಮಕ್ಕಳ ಭಾವನೆಗಳನ್ನ ಅರ್ಥ ಮಾಡ್ಕೊಬೇಕು ಅಂತ ಅಂದ್ಕೊತಾರೆ. (ಧರ್ಮೋಪದೇಶಕಾಂಡ 1:31; ಯೆಶಾಯ 49:15) ಕೆಲವು ಕುಟುಂಬದಲ್ಲಿ ಈ ಪಾತ್ರ ಉಲ್ಟಾ ಆಗಿರಬಹುದು. ಅದೇನೇ ಆದ್ರೂ, ಮಕ್ಕಳನ್ನ ಬೆಳೆಸೋದ್ರಲ್ಲಿ ಅಪ್ಪ ಅಮ್ಮ ಇಬ್ಬರ ಪಾತ್ರನೂ ತುಂಬಾ ಪ್ರಾಮುಖ್ಯ ಅಂತ ಸಂಶೋಧನೆ ಮಾಡೋರು ಹೇಳ್ತಾರೆ.a

ಕುಟುಂಬದ ಬಗ್ಗೆ ಸಂಶೋಧನೆ ಮಾಡುವ ಜುಡೆತ್‌ ವಾಲರ್‌ಸ್ಟಿನ್‌ ಅವರ ಸ್ವಂತ ಅನುಭವದಿಂದ ಹೀಗೆ ಹೇಳ್ತಾರೆ: “ನನ್ನ ಹನ್ನೆರಡು ವರ್ಷದ ಮಗಳಿಗೆ ಆ್ಯಕ್ಸಿಡೆಂಟ್‌ ಆದಾಗ ಆ್ಯಂಬುಲೆನ್ಸ್‌ ಅವರ ಅಪ್ಪ ಓಡಿಸಿದ್ರೆ ಚೆನ್ನಾಗಿರುತ್ತೆ, ಯಾಕಂದ್ರೆ ಅವರು ಓಡಿಸಿದ್ರೆ ಖಂಡಿತ ನನ್ನನ್ನ ಕಾಪಾಡೇ ಕಾಪಾಡ್ತಾರೆ ಅಂತ ಅವಳಿಗೆ ಅನಿಸ್ತು. ಆದ್ರೆ ಹಾಸ್ಪಿಟಲ್‌ನಲ್ಲಿ ಇರಬೇಕಾದ್ರೆ ಇಡೀ ದಿನ ನಾನು ಅವಳ ಪಕ್ಕದಲ್ಲಿ ಕೂತುಕೊಂಡು ಅವಳಿಗೆ ಸಮಾಧಾನ ಮಾಡಬೇಕು ಅಂತ ಅನಿಸ್ತು.” b

“ಅಪ್ಪ ಕುಟುಂಬಕ್ಕೆ ಬೇಕಾಗಿದ್ದನ್ನ ತಂದು ಹಾಕ್ತಾರೆ, ಕುಟುಂಬಕ್ಕೆ ಯಾವ ತೊಂದ್ರೆನೂ ಆಗದೇ ಇರೋ ತರ ನೋಡ್ಕೊತಾರೆ. ಈ ಕೆಲ್ಸಗಳನ್ನ ತಾಯಿಗೆ ಮಾಡೋಕೆ ಕಷ್ಟ ಆಗಬಹುದು. ಅದೇ ಸಮಯದಲ್ಲಿ ಮಕ್ಕಳು ಹೇಳೋದನ್ನ ಕೇಳಿಸಿಕೊಳ್ಳೋದು, ಅವರನ್ನ ಪ್ರೀತಿಯಿಂದ ನೋಡ್ಕೊಳ್ಳೋ ವಿಚಾರದಲ್ಲಿ ತಾಯಿ ಎತ್ತಿದ ಕೈ. ಒಟ್ಟಾರೆ ಹೇಳೋದಾದ್ರೆ ಅಪ್ಪ ಅಮ್ಮ ಇಬ್ರೂ ಒಂದೇ ಟೀಮ್‌ ಆಗಿ ಕೆಲಸ ಮಾಡ್ತಾರೆ.”—ಡ್ಯಾನಿಯೆಲ್‌.

ಬೈಬಲ್‌ ಹೇಳೋ ಮಾತು: “ನನ್ನ ಮಗನೇ, ಅಪ್ಪ ಕೊಡೋ ತರಬೇತಿಯನ್ನ ತಗೋ, ಅಮ್ಮ ಕಲಿಸುವಾಗ ಕೇಳಿಸ್ಕೊ.”—ಜ್ಞಾನೋಕ್ತಿ 1:8.

ಅಪ್ಪ ಮತ್ತು ಮಗಳ ನಡುವಿನ ಬಾಂಧವ್ಯ

ಪುರುಷರು ತನ್ನ ಜೊತೆ ಹೇಗೆ ನಡ್ಕೊಬೇಕು ಅಂತ ನಿಮ್ಮ ಮಗಳು ನಿಮ್ಮನ್ನ ನೋಡಿ ಕಲಿತಾಳೆ. ಅವಳು ಈ ಮುಂದಿನ ಎರಡು ವಿಷಯಗಳನ್ನ ಗಮನಿಸ್ತಾಳೆ:

  • ನೀವು ಅವಳ ತಾಯಿಯನ್ನ ಹೇಗೆ ನೋಡ್ಕೊತೀರ ಅಂತ ಅವಳು ಗಮನಿಸ್ತಾಳೆ. ನೀವು ನಿಮ್ಮ ಹೆಂಡ್ತಿ ಜೊತೆ ಗೌರವದಿಂದ, ಪ್ರೀತಿಯಿಂದ ನಡ್ಕೊಂಡ್ರೆ ನಿಮ್ಮ ಮಗಳು ಮುಂದೆ ಸಂಗಾತಿಯನ್ನ ಆರಿಸಿಕೊಳ್ಳುವಾಗ ಆ ವ್ಯಕ್ತಿಯಲ್ಲೂ ಇದೇ ಗುಣಗಳನ್ನ ನೋಡ್ತಾಳೆ.—1 ಪೇತ್ರ 3:7.

    ಯುವ ಪ್ರಾಯದ ಹುಡುಗಿ ಡೈನಿಂಗ್‌ ಟೇಬಲ್‌ ಹತ್ರ ತನ್ನ ತಂದೆ ತಾಯಿಯನ್ನ ಸಂತೋಷದಿಂದ ಗಮನಿಸ್ತಾ ಇದ್ದಾಳೆ. ಅವಳ ತಂದೆ ಅವಳ ತಾಯಿಯ ಕೈಯನ್ನ ಹಿಡ್ಕೊಂಡು ನಗಾಡ್ತಿದ್ದಾರೆ.
  • ನೀವು ಅವಳ ಜೊತೆ ಹೇಗೆ ನಡ್ಕೊತೀರ ಅಂತ ಗಮನಿಸ್ತಾಳೆ. ನೀವು ನಿಮ್ಮ ಮಗಳಿಗೆ ಗೌರವ ಕೊಟ್ಟರೆ, ಅವಳಿಗೂ ತನ್ನ ಮೇಲೆ ಗೌರವ ಬರುತ್ತೆ. ಬೇರೆ ಪುರುಷರೂ ತನ್ನನ್ನ ಹೀಗೆ ಗೌರವಿಸಬೇಕು ಅಂತ ಅವಳು ಕಲಿತಾಳೆ.

    ಒಂದುವೇಳೆ ಮಗಳನ್ನ ಯಾವಾಗ್ಲೂ ಬೈಯ್ತಾ ಇದ್ರೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅನ್ನೋ ಭಾವನೆ ಅವಳಿಗೆ ಬಂದುಬಿಡುತ್ತೆ. ಆಗ ಅವಳು ಪ್ರೀತಿ ಗೌರವವನ್ನ ಬೇರೆ ಪುರುಷರಿಂದ ಬಯಸ್ತಾಳೆ. ಒಂದುವೇಳೆ ಆ ಪುರುಷರ ಮನಸ್ಸಲ್ಲಿ ಕೆಟ್ಟ ಉದ್ದೇಶ ಇದ್ರೆ ಅದ್ರಿಂದ ಅವಳಿಗೆ ತೊಂದ್ರೆನೂ ಆಗಬಹುದು.

    “ಯಾವ ಹುಡುಗಿಗೆ ತನ್ನ ತಂದೆಯಿಂದ ಪ್ರೀತಿ ಮತ್ತು ಬೆಂಬಲ ಸಿಗುತ್ತೋ ಅಂಥಾ ಹುಡುಗಿ ಒಳ್ಳೇ ಗಂಡನಾಗೋಕೆ ಯೋಗ್ಯತೆ ಇಲ್ಲದ ಹುಡುಗನ ಪ್ರೀತಿಯ ಬಲೆಗೆ ಬೀಳಲ್ಲ.”—ವಾನ್‌.

a ಗಂಡನ ಸಹಾಯ ಇಲ್ಲದೇ ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನ ತುಂಬಾ ಚೆನ್ನಾಗಿ ಬೆಳೆಸಿದ್ದಾರೆ.

b ದಿ ಅನ್‌ಎಕ್ಸ್‌ಪೆಕ್ಟೆಡ್‌ ಲೆಗಸಿ ಆಫ್‌ ಡಿವೋರ್ಸ್‌ ಅನ್ನೋ ಪುಸ್ತಕದಿಂದ ತೆಗೆಯಲಾಗಿದೆ.

ಅಪ್ಪಂದಿರಿಗೆ ಒಂದಷ್ಟು ಸಲಹೆಗಳು

ಗ್ರೆಗರಿ; ಅವರ ಮಗಳು ಒಲಿವಿಯ; ಮತ್ತು ಅವರ ಹೆಂಡತಿ ಆಡ್ರೆ.

“ನಿಮ್ಮ ಮಗಳು ಹದಿವಯಸ್ಸಿಗೆ ಬಂದಾಗಂತೂ ಅವಳ ಜೊತೆ ಜಾಸ್ತಿ ಸಮಯ ಕಳೀರಿ. ನೀವು ಚಿಕ್ಕವಳಿದ್ದಾಗ ಅವಳನ್ನ ಎಷ್ಟು ಪ್ರೀತಿಸ್ತಿದ್ರೊ ಈಗ್ಲೂ ಅಷ್ಟೇ ಪ್ರೀತಿಸ್ತಿರಾ ಅಂತ ಅವಳಿಗೆ ಗೊತ್ತಾಗೋ ತರ ನಡ್ಕೊಳ್ಳಿ. ಹೀಗೆ ಮಾಡಿದ್ರೆ ‘ನಾನು ಸೇಫಾಗಿದ್ದೀನಿ, ನಾನು ಯಾವ ವಿಷ್ಯ ಬೇಕಾದ್ರೂ ಅಪ್ಪನ ಹತ್ರ ಮಾತಾಡಬಹುದು’ ಅಂತ ಅವಳಿಗೆ ಅನಿಸುತ್ತೆ. ಒಂದುವೇಳೆ ನೀವು ಸಮಯ ಕೊಡದೇ ಬಿಜ಼ಿಯಾಗಿಬಿಟ್ರೆ ಅದು ಅವಳಿಗೆ ಬೇಗ ಗೊತ್ತಾಗಿ ಬಿಡುತ್ತೆ. ಆಗ ಅವಳು ಬೇರೆಯವ್ರಿಗೆ ಹತ್ರ ಆಗೋಕೆ ಪ್ರಯತ್ನಪಡ್ತಾಳೆ.”—ಗ್ರೆಗರಿ ತನ್ನ ಮಗಳು ಒಲಿವಿಯ ಮತ್ತು ಹೆಂಡತಿ ಆಡ್ರೆ ಜೊತೆ ಇದ್ದಾರೆ.

ನೆನಪಿಡಿ: ಒಳ್ಳೇ ಅಪ್ಪನಾಗೋಕೆ ನಾನು ಏನು ಮಾಡಬೇಕು?

  • ಮಗು ಹೊಟ್ಟೆಯಲ್ಲಿ ಇರುವಾಗಿಂದಲೇ ತಂದೆ ಪಾತ್ರ ಶುರುವಾಗುತ್ತೆ. ಗರ್ಭಿಣಿಯಾಗಿರುವ ನಿಮ್ಮ ಹೆಂಡ್ತಿ ಜೊತೆ ನೀವು ಹೇಗೆ ನಡ್ಕೊತೀರಿ ಅನ್ನೋದು ತಾನೇ ಮಗು ಹುಟ್ಟಿದ ಮೇಲೆ ನೀವು ಎಂಥಾ ಅಪ್ಪ ಆಗ್ತೀರ ಅನ್ನೋದನ್ನ ತೋರಿಸುತ್ತೆ.

  • ಮಗು ಬೆಳಿತಾ ಬೆಳಿತಾ ಅದರೊಟ್ಟಿಗಿನ ಬಾಂಧವ್ಯವನ್ನ ಗಟ್ಟಿ ಮಾಡ್ಕೊಳ್ಳಿ. ಯಾವ ಮಕ್ಕಳು ತಮ್ಮ ತಂದೆ ಜೊತೆ ಕ್ಲೋಸ್‌ ಆಗಿರುತ್ತಾರೋ ಅವರು ಸ್ಕೂಲಲ್ಲಿ ಚೆನ್ನಾಗಿ ಓದ್ತಾರೆ. ಅವ್ರಿಗೆ ಭಾವನಾತ್ಮಕವಾಗಿ ಸಮಸ್ಯೆಗಳು ಕಮ್ಮಿ ಇರುತ್ತೆ. ಅಂಥಾ ಮಕ್ಕಳು ಡ್ರಗ್ಸ್‌ ಮತ್ತು ಮದ್ಯಪಾನದ ಚಟಕ್ಕೆ ಅಷ್ಟು ಸುಲಭವಾಗಿ ಬಲಿ ಬೀಳಲ್ಲ.

  • ಒಳ್ಳೇ ಗಂಡನಾಗಿ. ನೀವು ನಿಮ್ಮ ಹೆಂಡತಿ ಜೊತೆ ಪ್ರೀತಿ ಮತ್ತು ಗೌರವದಿಂದ ನಡ್ಕೊಂಡ್ರೆ ನಿಮ್ಮ ಮಗಳು ಅದನ್ನ ನೋಡಿ ಬೇರೆ ಪುರುಷರು ತನ್ನ ಜೊತೆ ಹೇಗೆ ನಡ್ಕೊಬೇಕು ಅನ್ನೋದನ್ನ ಕಲಿತಾಳೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ