ಸದಾ ಎಚ್ಚರವಾಗಿರಿ!
ಉಕ್ರೇನ್ನಲ್ಲಿ ನಡಿತಿರೋ ಯುದ್ಧಕ್ಕೂ ಧರ್ಮಗಳಿಗೂ ಸಂಬಂಧ ಇದೆಯಾ? ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಉಕ್ರೇನ್ನಲ್ಲಿ ನಡಿತಿರೋ ಯುದ್ಧದ ಬಗ್ಗೆ ಮತ್ತು ಧರ್ಮಗುರುಗಳ ಬಗ್ಗೆ ಇತ್ತೀಚೆಗೆ ಬಂದ ವರದಿಗಳನ್ನ ನೋಡಿ:
“ರಷ್ಯನ್ ಆರ್ಥೊಡಾಕ್ಸ್ ಚರ್ಚ್ನ ಮುಖ್ಯಸ್ಥನಾಗಿರೋ ಪ್ಯಾಟ್ರಿಯಾರ್ಕ್ ಕಿರಿಲ್, ರಷ್ಯಾದವರು ಮಾಡ್ತಿರೋ ಆಕ್ರಮಣದ ಬಗ್ಗೆ ಒಂದು ಮಾತೂ ಆಡಿಲ್ಲ. . . . ಪುಟಿನ್ ತಾನು ಮಾಡ್ತಿರೋ ಯುದ್ಧದ ಬಗ್ಗೆ ಸಮರ್ಥನೆ ಮಾಡಿಕೊಂಡಾಗ ಉಕ್ರೇನ್ ವಿರುದ್ಧ ಈ ಚರ್ಚಿನವರು ಮಾಡಿದ ಅಭಿಯಾನದ ಬಗ್ಗೆ ಹೇಳಿದ್ದಾನೆ.”—ಇಯುಅಬ್ಸರ್ವರ್, ಮಾರ್ಚ್ 7, 2022.
“ಪ್ಯಾಟ್ರಿಯಾರ್ಕ್ ಕಿರಿಲ್ ಉಕ್ರೇನ್ ಮೇಲೆ ತನ್ನ ದೇಶ ಯುದ್ಧ ಮಾಡೋ ವಿಷಯವನ್ನ ಸಮರ್ಥಿಸ್ತಾ ಇದು ಪಾಪವನ್ನ ಜಯಿಸೋಕೆ ಮಾಡ್ತಿರೋ ಯುದ್ಧ ಅಂತ ಹೇಳ್ತಿದ್ದಾನೆ.”—ಎಪಿ ನ್ಯೂಸ್, ಮಾರ್ಚ್ 8, 2022.
“ಸೋಮವಾರದಂದು ಉಕ್ರೇನ್ನ ಕೀವ್ ನಗರದ ಆರ್ಥೊಡಾಕ್ಸ್ ಚರ್ಚ್ನ ಮುಖ್ಯಸ್ಥ ಎಪಿಫಾನಿಯಸ್ I ತಮ್ಮ ದೇಶದ ಸೈನಿಕರಿಗೆ ‘ರಷ್ಯನ್ ಪಡೆಯ ವಿರುದ್ಧ ಹೋರಾಡಿ . . . ಅವರನ್ನ ಕೊಲ್ಲೋದು ಪಾಪವಲ್ಲ’ ಅಂತ ಹೇಳಿ ಅವರನ್ನ ಆಶೀರ್ವದಿಸಿದನು.”—ಜೆರೂಸಲೇಮ್ ಪೋಸ್ಟ್, ಮಾರ್ಚ್ 16, 2022.
“ತಾಯಿನಾಡನ್ನ ಕಾಪಾಡೋಕೆ ಆಯುಧಗಳನ್ನ ಹಿಡಿದುಕೊಂಡು ಹೋರಾಡ್ತಿರೋ ಉಕ್ರೇನಿನ ಸೈನಿಕರನ್ನ ಮತ್ತು ಪ್ರತಿಯೊಬ್ಬರನ್ನೂ ನಾವು [ಅಂದ್ರೆ ಯುಸಿಸಿಆರ್ಒ] ಬೆಂಬಲಿಸ್ತೀವಿ. ಅವರಿಗೋಸ್ಕರ ನಾವು ಪ್ರಾರ್ಥನೆ ಮಾಡ್ತೀವಿ.”—ಯುಸಿಸಿಆರ್ಒa ಹೇಳಿಕೆ, ಫೆಬ್ರವರಿ 24, 2022.
ನಿಮಗೇನು ಅನಿಸುತ್ತೆ? ಯೇಸು ಕ್ರಿಸ್ತನ ತರ ನಡಕೊಳ್ತೀವಿ ಅಂತ ಹೇಳಿಕೊಳ್ಳೋ ಧರ್ಮದವರು ಈ ತರ ಜನರಿಗೆ ಯುದ್ಧ ಮಾಡೋಕೆ ಹೇಳ್ತಾರಾ? ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಯುದ್ಧದಲ್ಲಿ ಧರ್ಮಗಳು ಕೈಜೋಡಿಸಿವೆ ಅಂತ ಇತಿಹಾಸ ತೋರಿಸುತ್ತೆ
ಎಷ್ಟೋ ಧರ್ಮಗಳು, ಜನರು ಶಾಂತಿ ಸಮಾಧಾನದಿಂದ ಇರೋಕೆ ಸಹಾಯ ಮಾಡ್ತಿದ್ದೀವಿ ಅಂತ ಬರಿ ಹೇಳಿಕೊಳ್ಳುತ್ತಿವೆ ಅಷ್ಟೇ, ಆದ್ರೆ ಅವು ಯುದ್ಧಕ್ಕೆ ಬೆಂಬಲ ಕೊಡುತ್ತಿವೆ, ಯುದ್ಧ ಮಾಡೋದು ತಪ್ಪಲ್ಲ ಅಂತ ಹೇಳುತ್ತಿವೆ ಮತ್ತು ಜನರಿಗೆ ಯುದ್ಧ ಮಾಡೋಕೆ ಕುಮ್ಮಕ್ಕು ಕೊಡುತ್ತಿವೆ ಅಂತ ಇತಿಹಾಸ ತೋರಿಸುತ್ತೆ. ಆದ್ರೆ ಧರ್ಮಗಳು ಹಾಕಿಕೊಂಡಿರೋ ಈ ಮುಖವಾಡವನ್ನ ಹತ್ತಾರು ವರ್ಷಗಳಿಂದ ಯೆಹೋವನ ಸಾಕ್ಷಿಗಳು ಬಯಲಿಗೆ ಎಳೆದಿದ್ದಾರೆ. ಅದಕ್ಕೆ ನಮ್ಮ ಪ್ರಕಾಶನಗಳಲ್ಲಿ ಕೊಟ್ಟಿರೋ ಕೆಲವು ಆಧಾರಗಳನ್ನ ನೋಡಿ.
“ಧರ್ಮಗಳ ಹೊಡೆದಾಟದಿಂದ ಆದ ದುರಂತ” ಅನ್ನೋ ಲೇಖನದಲ್ಲಿ ದೇವರ ಮತ್ತು ಕ್ರಿಸ್ತನ ಹೆಸರಿನಲ್ಲಿ ನಡೆದ ಹತ್ಯಾಕಾಂಡಕ್ಕೆ ರೋಮನ್ ಕ್ಯಾಥೊಲಿಕ್ ಚರ್ಚಿನವರು ಹೇಗೆ ಕಾರಣರಾಗಿದ್ದರು ಅಂತ ಹೇಳಿದೆ.
“ಆಫ್ರಿಕಾದ ಕಾಥ್ಯೊಲಿಕ್ ಚರ್ಚ್“ ಅನ್ನೋ ಲೇಖನದಲ್ಲಿ ಜಾತಿಗಳ ನಡುವೆ ಆದ ಹೊಡೆದಾಟ ಅಥವಾ ಸಮೂಹಿಕ ಹತ್ಯೆಯನ್ನ ತಡಿಯೋಕೆ ಧರ್ಮಗಳಿಂದ ಆಗಲಿಲ್ಲ ಅಂತ ಹೇಳಿದೆ.
“ಧರ್ಮಗಳೇ ಇದಕ್ಕೆ ಕಾರಣನಾ?,” “ಮಾನವನ ಯುದ್ಧಗಳಲ್ಲಿ ಧರ್ಮದ ಪಾತ್ರ” ಮತ್ತು “ಧರ್ಮವು ಪಕ್ಷ ವಹಿಸುತ್ತದೆ” ಅನ್ನೋ ಲೇಖನಗಳು ಕ್ಯಾಥೊಲಿಕ್, ಆರ್ಥೊಡಾಕ್ಸ್ ಮತ್ತು ಪ್ರೊಟೆಸ್ಟೆಂಟ್ ಪಾದ್ರಿಗಳು ಹೇಗೆ ಎರಡೂ ದೇಶದ ಸೈನಿಕರಿಗೆ ಬೆಂಬಲ ಕೊಟ್ಟರು ಅಂತ ವಿವರಿಸಿದೆ.
ಕ್ರೈಸ್ತರು ಯುದ್ಧಕ್ಕೆ ಬೆಂಬಲ ಕೊಡಬೇಕಾ?
ಯೇಸು ಏನು ಕಲಿಸಿದನು: “ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು.” (ಮತ್ತಾಯ 22:39) “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.”—ಮತ್ತಾಯ 5:44-47.
ಯೋಚಿಸಿ: ಯಾವುದಾದರೂ ಒಂದು ಧರ್ಮ, ಪ್ರೀತಿ ಬಗ್ಗೆ ಯೇಸು ಕೊಟ್ಟ ಆಜ್ಞೆಯನ್ನ ಪಾಲಿಸ್ತೀವಿ ಅಂತ ಹೇಳಿಕೊಂಡು ಇನ್ನೊಂದು ಕಡೆ ಜನರಿಗೆ ಯುದ್ಧ ಮಾಡಿ ಅಂತ ಹೇಳೋದು ಸರಿನಾ? ಉತ್ತರಕ್ಕಾಗಿ “ನಿಜ ಕ್ರೈಸ್ತರು ಮತ್ತು ಯುದ್ಧ” ಮತ್ತು “ನಮ್ಮ ವೈರಿಗಳನ್ನು ಪ್ರೀತಿಸಲು ಸಾಧ್ಯವೇ?” ಅನ್ನೋ ಲೇಖನಗಳನ್ನ ಓದಿ.
ಯೇಸು ಏನು ಹೇಳಿದನು: “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ. ಆ ತರ ಇದ್ದಿದ್ರೆ ನಾನು ಯೆಹೂದ್ಯರ ಕೈಗೆ ಸಿಗದ ಹಾಗೆ ನನ್ನ ಸೇವಕರು ಯುದ್ಧ ಮಾಡ್ತಿದ್ರು.” (ಯೋಹಾನ 18:36) “ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ.”—ಮತ್ತಾಯ 26:47-52.
ಯೋಚಿಸಿ: ಯೇಸುವಿನ ಪ್ರಾಣವನ್ನ ಕಾಪಾಡೋಕೆ ಕ್ರೈಸ್ತರು ಆಯುಧಗಳನ್ನ ಹಿಡಿಯಬಾರದು ಅಂದ್ಮೇಲೆ ಬೇರೆ ಕಾರಣಗಳಿಗೆ ಆಯುಧಗಳನ್ನ ಹಿಡಿಯಬಹುದಾ? ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಯೇಸು ಹೇಳಿಕೊಟ್ಟಿದ್ದನ್ನ ಹೇಗೆ ಪಾಲಿಸಿದರು ಮತ್ತು ಹೇಗೆ ಯೇಸು ತರಾನೇ ನಡೆದುಕೊಂಡ್ರು ಅಂತ ತಿಳಿದುಕೊಳ್ಳೋಕೆ “ಕ್ರೈಸ್ತರು ಯುದ್ಧ ಮಾಡಬಹುದಾ?” ಅನ್ನೋ ಲೇಖನವನ್ನ ಓದಿ.
ಯುದ್ಧಕ್ಕೆ ಬೆಂಬಲ ಕೊಡ್ತಿರೋ ಧರ್ಮಗಳಿಗೆ ಏನಾಗುತ್ತೆ?
ಯೇಸುವಿನ ಶಿಷ್ಯರು ಅಂತ ಬರಿ ಹೇಳಿಕೊಂಡು ಆತನ ಹೇಳಿದ ತರ ಜೀವನ ಮಾಡದೆ ಇರೋ ಧರ್ಮಗಳನ್ನ ದೇವರು ಇಷ್ಟಪಡಲ್ಲ ಅಂತ ಬೈಬಲ್ ಹೇಳುತ್ತೆ.—ಮತ್ತಾಯ 7:21-23; ತೀತ 1:16.
‘ಭೂಮಿ ಮೇಲೆ ಕ್ರೂರವಾಗಿ ಜನರು ಸಾಯೋಕೆ’ ಈ ಧರ್ಮಗಳೇ ಕಾರಣ ಆಗಿರೋದ್ರಿಂದ ಅವರ ಹತ್ರ ದೇವರು ಲೆಕ್ಕ ಕೇಳ್ತಾನೆ ಅಂತ ಪ್ರಕಟನೆ ಪುಸ್ತಕದಲ್ಲಿದೆ. (ಪ್ರಕಟನೆ 18:21, 24) ಯಾಕೆ ಅಂತ ತಿಳಿದುಕೊಳ್ಳೋಕೆ “ಮಹಾ ಬಾಬೆಲ್ ಯಾವುದನ್ನ ಸೂಚಿಸುತ್ತೆ?” ಅನ್ನೋ ಲೇಖನ ಓದಿ.
ಕೆಟ್ಟ ಹಣ್ಣು ಕೊಡೋ ಕೆಟ್ಟ ‘ಮರಗಳನ್ನ ಕಡಿದು ಬೆಂಕಿಗೆ ಹಾಕೋ’ ತರ ದೇವರಿಗೆ ಇಷ್ಟ ಇಲ್ಲದೆ ಇರೋ ಧರ್ಮಗಳು ಕೆಟ್ಟ ಕೆಲಸಗಳನ್ನ ಮಾಡಿದ್ರಿಂದ ದೇವರು ಅವುಗಳನ್ನೆಲ್ಲ ನಾಶ ಮಾಡ್ತಾನೆ ಅಂತ ಯೇಸು ಹೇಳಿದನು. (ಮತ್ತಾಯ 7:15-20) ಹೇಗೆ ನಾಶ ಮಾಡ್ತಾನೆ ಅಂತ ತಿಳಿದುಕೊಳ್ಳೋಕೆ “ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?” ಅನ್ನೋ ಲೇಖನ ಓದಿ.
ಚಿತ್ರಕೃಪೆ, ಎಡದಿಂದ ಬಲಕ್ಕೆ: Photo by Sefa Karacan/Anadolu Agency/Getty Images; Maxym Marusenko/NurPhoto via Getty Images
a ಯುಸಿಸಿಆರ್ಒ ಅಂದ್ರೆ ಉಕ್ರೇನಿಯನ್ ಕೌನ್ಸಿಲ್ ಆಫ್ ಚರ್ಚಸ್ ಆ್ಯಂಡ್ ರಿಲೀಜಿಯಸ್ ಆರ್ಗನೈಸೇಶನ್. ಈ ಕೌನ್ಸಿಲ್ನಲ್ಲಿ ಆರ್ಥೊಡಾಕ್ಸ್, ಗ್ರೀಕ್ ಮತ್ತು ರೋಮನ್ ಕ್ಯಾಥೊಲಿಕ್, ಪ್ರೊಟೆಸ್ಟೆಂಟ್ ಮತ್ತು ಇವ್ಯಾಂಜೆಲಿಕಲ್ ಪಂಗಡಗಳನ್ನ ಪ್ರತಿನಿಧಿಸೋ 15 ಚರ್ಚುಗಳಿವೆ. ಅದರಲ್ಲಿ ಯೆಹೂದ್ಯರು ಮತ್ತು ಮುಸ್ಲಿಮ್ ಧರ್ಮದವರೂ ಇದ್ದಾರೆ.