Comstock Images/Stockbyte via Getty Images
ಸದಾ ಎಚ್ಚರವಾಗಿರಿ!
ನೀವು ಯಾವ ನಾಯಕನನ್ನ ಆಯ್ಕೆ ಮಾಡ್ತೀರಾ?—ಬೈಬಲ್ ಏನು ಹೇಳುತ್ತೆ?
ಜನರು ಇವತ್ತು ಯಾರನ್ನ ತಮ್ಮ ನಾಯಕನಾಗಿ ಆರಿಸಿಕೊಳ್ಳಬೇಕು ಅನ್ನೋ ಪ್ರಾಮುಖ್ಯ ನಿರ್ಣಯವನ್ನ ಮಾಡ್ತಿದ್ದಾರೆ.
ಬೈಬಲ್ ಏನು ಹೇಳುತ್ತೆ?
ಮಾನವ ನಾಯಕರಿಗೆ ಇತಿಮಿತಿ ಇದೆ
ಎಲ್ಲಾ ಮಾನವ ನಾಯಕರಿಗೆ ಇರೋ ಒಂದು ಇತಿಮಿತಿಯ ಬಗ್ಗೆ ಬೈಬಲ್ ಹೇಳುತ್ತೆ.
“ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ. ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ. ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.”—ಕೀರ್ತನೆ 146:3, 4, ಪಾದಟಿಪ್ಪಣಿ.
ಒಬ್ಬ ನಾಯಕನಿಗೆ ಎಷ್ಟೇ ಒಳ್ಳೇ ಗುಣಗಳು ಇದ್ರೂ ಒಂದಲ್ಲ ಒಂದು ದಿನ ಅವನು ಸತ್ತು ಹೋಗ್ತಾನೆ. ಅವನು ಮಾಡಿದ ಒಳ್ಳೇ ಕೆಲಸಗಳನ್ನ ನಂತ್ರ ಬರೋ ನಾಯಕನು ಮುಂದುವರಿಸ್ತಾನೆ ಅನ್ನೋ ಗ್ಯಾರಂಟಿ ಇಲ್ಲ.—ಪ್ರಸಂಗಿ 2:18, 19.
ತಮ್ಮನ್ನೇ ತಾವು ಆಳ್ವಿಕೆ ಮಾಡೋ ರೀತಿಯಲ್ಲಿ ದೇವರು ಮನುಷ್ಯರನ್ನ ಸೃಷ್ಟಿ ಮಾಡಿಲ್ಲ.
“ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.”—ಯೆರೆಮೀಯ 10:23.
ನಾವಿರೋ ಸಮಯದಲ್ಲಿ ಯಾರನ್ನ ಒಳ್ಳೇ ನಾಯಕ ಅಂತ ಹೇಳಬಹುದು?
ದೇವರೇ ನೇಮಿಸಿದ ನಾಯಕ
ನಾವು ಕಣ್ಣುಮುಚ್ಚಿ ನಂಬಬಹುದಾದ ನಾಯಕನನ್ನ ದೇವರೇ ನೇಮಿಸಿದ್ದಾನೆ ಅಂತ ಬೈಬಲ್ ಹೇಳುತ್ತೆ. ಅವನೇ ಯೇಸು ಕ್ರಿಸ್ತ. (ಕೀರ್ತನೆ 2:6) ದೇವರ ಸರ್ಕಾರದ ರಾಜ ಯೇಸು ಆಗಿದ್ದಾನೆ. ಈ ಸರ್ಕಾರ ಸ್ವರ್ಗದಿಂದ ಆಳುತ್ತೆ.—ಮತ್ತಾಯ 6:10.
ನೀವು ಯೇಸುವಿನ ಆಳ್ವಿಕೆಯನ್ನ ಸ್ವೀಕರಿಸ್ತೀರಾ? ಈ ಪ್ರಶ್ನೆ ಯಾಕಷ್ಟು ಮುಖ್ಯ ಅಂತ ಬೈಬಲ್ ಹೇಳುತ್ತೆ:
“ದೇವರ ಮಗನಿಗೆ [ಯೇಸು ಕ್ರಿಸ್ತನಿಗೆ] ಗೌರವಕೊಡಿ, ಇಲ್ಲದಿದ್ರೆ ದೇವರಿಗೆ ಕೋಪ ಬಂದು, ನೀವು ನಿಮ್ಮ ಪ್ರಾಣ ಕಳ್ಕೊಳ್ತೀರ. ಯಾಕಂದ್ರೆ ಆತನ ಕೋಪ ಯಾವಾಗ ಬೇಕಾದ್ರೂ ಹೊತ್ತಿ ಉರಿಬಹುದು. ಆತನಲ್ಲಿ ಆಶ್ರಯ ಪಡ್ಕೊಳ್ಳೋ ಜನ ಖುಷಿಯಾಗಿ ಇರ್ತಾರೆ.”—ಕೀರ್ತನೆ 2:12.
ನಿರ್ಣಯ ಮಾಡಬೇಕಾದ ಸಮಯ ಈಗಲೇ ಆಗಿದೆ. ಬೈಬಲ್ ಭವಿಷ್ಯವಾಣಿ ತಿಳಿಸೋ ಹಾಗೇ ಯೇಸು ತನ್ನ ಆಳ್ವಿಕೆಯನ್ನ 1914ರಿಂದ ಶುರು ಮಾಡಿದ್ದಾನೆ. ಬೇಗನೇ ದೇವರ ಸರ್ಕಾರ ಮಾನವ ಸರ್ಕಾರಗಳನ್ನ ತೆಗೆದುಹಾಕುತ್ತೆ.—ದಾನಿಯೇಲ 2:44.
ನೀವು ಯೇಸುವಿನ ನಾಯಕತ್ವವನ್ನ ಹೇಗೆ ಬೆಂಬಲಿಸೋದು ಅಂತ ತಿಳಿಯಲು “ದೇವರ ಸರ್ಕಾರನಾ ಬೆಂಬಲಿಸಿ” ಅನ್ನೋ ಲೇಖನ ನೋಡಿ.