ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwfq ಲೇಖನ 10
  • ನಿಮ್ಮ ಸ್ಥಾಪಕ ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಸ್ಥಾಪಕ ಯಾರು?
  • ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಅನುರೂಪ ಮಾಹಿತಿ
  • ರಸ್ಸಲ್‌ರ ಬರಹಗಳನ್ನು ಗಣ್ಯಮಾಡಿದ ಇಬ್ಬರು ಪಾಸ್ಟರ್‌ಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ‘ಓ ದೇವರೇ, ನಿನ್ನ ಬೆಳಕನ್ನು ಕಳುಹಿಸು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ijwfq ಲೇಖನ 10
ಯೇಸು ತನ್ನ ಶಿಷ್ಯರಿಗೆ ಬೋಧಿಸುತ್ತಿರುವುದು

ನಿಮ್ಮ ಸಂಘಟನೆಯ ಸ್ಥಾಪಕ ಯಾರು?

ಆಧುನಿಕ ದಿನದ ಯೆಹೋವನ ಸಾಕ್ಷಿಗಳ ಸಂಘಟನೆ ಆರಂಭವಾದದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ. ಆ ದಿನಗಳಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದ ಪಿಟ್ಸಬರ್ಗ್‌ನ ಹತ್ತಿರ ವಾಸಿಸುತ್ತಿದ್ದ ಬೈಬಲ್‌ ವಿದ್ಯಾರ್ಥಿಗಳ ಸಣ್ಣ ಗುಂಪೊಂದು ಬೈಬಲನ್ನು ಕ್ರಮಬದ್ಧವಾಗಿ ಅಧ್ಯಯನಮಾಡಲು ಆರಂಭಿಸಿತು. ಚರ್ಚ್‌ಗಳು ಬೋಧಿಸುತ್ತಿದ್ದ ಸಿದ್ಧಾಂತಗಳನ್ನು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೋ ಅದರೊಂದಿಗೆ ಹೋಲಿಸಿನೋಡಲು ಪ್ರಾರಂಭಿಸಿದರು. ಅವರು ಕಲಿಯುತ್ತಿದ್ದ ವಿಷಯಗಳನ್ನು ಪುಸ್ತಕಗಳಲ್ಲಿ, ವಾರ್ತಾಪತ್ರಿಕೆಗಳಲ್ಲಿ ಮತ್ತು ಈಗ ಕಾವಲಿನಬುರುಜು-ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಹೆಸರಿರುವ ಪತ್ರಿಕೆಯಲ್ಲಿ ಪ್ರಕಟಿಸಲು ಶುರುಮಾಡಿದರು.

ಬೈಬಲ್‌ ಅಧ್ಯಯನ ಮಾಡುತ್ತಿದ್ದ ಆ ಪ್ರಾಮಾಣಿಕ ವಿದ್ಯಾರ್ಥಿಗಳ ಗುಂಪಿನಲ್ಲಿ ಚಾರ್ಲ್ಸ್‌ ಟೇಸ್‌ ರಸಲ್‌ ಎಂಬ ಹೆಸರಿನ ವ್ಯಕ್ತಿ ಇದ್ದರು. ಅವರು ಬೈಬಲ್‌ ಶಿಕ್ಷಣ ಕೆಲಸದಲ್ಲಿ ಮುಂದಾಳತ್ವ ವಹಿಸಿದರು ಮತ್ತು ಕಾವಲಿನಬುರುಜು ಪತ್ರಿಕೆಯ ಮೊದಲ ಸಂಪಾದಕರಾಗಿ ಕೆಲಸಮಾಡಿದರು. ಆದರೆ ಅವರು ಒಂದು ಹೊಸ ಧರ್ಮವನ್ನು ಹುಟ್ಟುಹಾಕಲಿಲ್ಲ. ಬದಲಾಗಿ, ಯೇಸು ಕ್ರಿಸ್ತನ ಬೋಧನೆಗಳನ್ನು ಪ್ರಚಾರಮಾಡುವುದು ಮತ್ತು ಮೊದಲ ಶತಮಾನದಲ್ಲಿದ್ದ ಕ್ರೈಸ್ತ ಮಾದರಿಯನ್ನು ಅನುಸರಿಸುವುದು ರಸಲ್‌ ಮತ್ತು ಇತರ ಬೈಬಲ್‌ ವಿದ್ಯಾರ್ಥಿಗಳ (ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು) ಮುಖ್ಯ ಉದ್ದೇಶವಾಗಿತ್ತು. ಕ್ರೈಸ್ತ ಧರ್ಮದ ಸ್ಥಾಪಕನು ಯೇಸು ಆಗಿರುವುದರಿಂದ ಆತನೇ ನಮ್ಮ ಸಂಘಟನೆಯ ಸ್ಥಾಪಕನಾಗಿದ್ದಾನೆ.—ಕೊಲೊಸ್ಸೆ 1:18-20

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ