ದೇವರು ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸ್ತಾನಾ?
ಬೈಬಲ್ ಕೊಡೋ ಉತ್ತರ
ಹೌದು. ದೇವರು ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸ್ತಾನೆ. ಅದು ಸ್ವರ್ಗ. ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡಿ:
ರಾಜ ಸೊಲೊಮೋನ, ಅವನು ಮಾಡಿದ ಒಂದು ಪ್ರಾರ್ಥನೆಯಲ್ಲಿ ಹೀಗೆ ಹೇಳಿದ: ‘ನಿನ್ನ ವಾಸಸ್ಥಳವಾದ ಸ್ವರ್ಗದಿಂದ ನೀನು ಅದನ್ನ ಕೇಳಿಸ್ಕೊ.’—1 ಅರಸು 8:43.
ಯೇಸು ಕೂಡ ತನ್ನ ಶಿಷ್ಯರಿಗೆ “ಸ್ವರ್ಗದಲ್ಲಿರೋ ಅಪ್ಪಾ” ಅಂತ ಹೇಳಿ ಆತನಿಗೆ ಪ್ರಾರ್ಥನೆ ಮಾಡೋಕೆ ಕಲಿಸಿದ.—ಮತ್ತಾಯ 6:9.
ಯೇಸು ಸತ್ತು ಮತ್ತೆ ಎದ್ದು ಬಂದಾಗ “ಆತನು ಸ್ವರ್ಗಕ್ಕೆ ಹೋದ. ನಮಗಾಗಿ ಆತನೀಗ ದೇವರ ಮುಂದೆ ಇದ್ದಾನೆ.”—ಇಬ್ರಿಯ 9:24.
ಈ ಎಲ್ಲಾ ವಚನಗಳನ್ನ ಓದುವಾಗ, ಯೆಹೋವ ದೇವರು ನಿಜವಾಗ್ಲೂ ಇದ್ದಾನೆ ಹಾಗೂ ಆತನು ಎಲ್ಲಾ ಕಡೆ ವಾಸಿಸಲ್ಲ, ಸ್ವರ್ಗದಲ್ಲಿ ವಾಸಿಸ್ತಾನೆ ಅಂತ ಗೊತ್ತಾಗುತ್ತೆ.