ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ / ಪ್ರಾರ್ಥನೆ / ಯೇಸುವಿನ ಹೆಸ್ರಲ್ಲಿ ಯಾಕೆ ಪ್ರಾರ್ಥಿಸಬೇಕು?
ಬೈಬಲ್ ಕೊಡೋ ಉತ್ತರ
ನಾವು ಯೇಸುವಿನ ಹೆಸ್ರಲ್ಲಿ ದೇವರಿಗೆ ಪ್ರಾರ್ಥಿಸಬೇಕು ಯಾಕೆಂದರೆ ದೇವರಿಗೆ ಹತ್ತಿರ ಆಗಲು ದೇವರು ನಮಗೆ ಕೊಟ್ಟ ಒಂದೇ ಒಂದು ದಾರಿ ಇದಾಗಿದೆ. ಅದಕ್ಕೆ ಯೇಸು ಹೀಗೆ ಹೇಳಿದನು: “ನಾನೇ ಆ ದಾರಿ, ಸತ್ಯ, ಜೀವ ಆಗಿದ್ದೀನಿ. ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ.” (ಯೋಹಾನ 14:6) ಅಷ್ಟೇ ಅಲ್ಲ, ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ್ದು: “ನಿಜ ಹೇಳ್ತೀನಿ, ನೀವು ನನ್ನ ಅಪ್ಪನ ಹತ್ರ ನನ್ನ ಹೆಸ್ರಲ್ಲಿ ಏನೇ ಬೇಡ್ಕೊಂಡ್ರೂ ಅದನ್ನ ಕೊಡ್ತಾನೆ.”—ಯೋಹಾನ 16:23.
ಯೇಸುವಿನ ಹೆಸ್ರಲ್ಲಿ ಪ್ರಾರ್ಥಿಸೋಕೆ ಇನ್ನಷ್ಟು ಕಾರಣಗಳು ಇಲ್ಲಿದೆ
ನಾವು ಯೇಸು ಮತ್ತು ಆತನ ತಂದೆ ಯೆಹೋವ ದೇವರನ್ನ ಗೌರವಿಸ್ತೀವಿ.—ಫಿಲಿಪ್ಪಿ 2:9-11.
ಯೇಸುವಿನ ಮರಣ, ನಮ್ಮ ಬಿಡುಗಡೆಗಾಗಿ ದೇವರು ಮಾಡಿದ ಏರ್ಪಾಡಾಗಿದೆ. ಇದನ್ನ ನಾವು ತುಂಬ ಅಮೂಲ್ಯವಾಗಿ ನೋಡ್ತೀವಿ ಅಂತ ತೋರಿಸ್ತೀವಿ.—ಮತ್ತಾಯ 20:28; ಅಪೊಸ್ತಲರ ಕಾರ್ಯ 4:12.
ದೇವರು ಮತ್ತು ಮನುಷ್ಯರ ನಡುವೆ ಮಧ್ಯಸ್ಥನಾಗಿ ಯೇಸುಗೆ ಇರೋ ವಿಶೇಷ ಪಾತ್ರವನ್ನ ನಾವು ಒಪ್ಪಿಕೊಳ್ತೀವಿ.—ಇಬ್ರಿಯ 7:25.
ನಾವು ದೇವರ ಹತ್ತಿರ ಒಳ್ಳೇ ಹೆಸರನ್ನ ಪಡೆಯಲು ಯೇಸು ಮಹಾ ಪುರೋಹಿತನಾಗಿ ನಮಗೆ ಸಹಾಯ ಮಾಡುತ್ತಿದ್ದಾನೆ. ಯೇಸು ಮಾಡ್ತಿರೋ ಈ ಸೇವೆಯನ್ನ ನಾವು ಗೌರವಿಸ್ತೀವಿ.—ಇಬ್ರಿಯ 4:14-16.