ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 108
  • ಭವಿಷ್ಯವಾಣಿ ಅಂದ್ರೆ ಏನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭವಿಷ್ಯವಾಣಿ ಅಂದ್ರೆ ಏನು?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ಬೈಬಲನ್ನು—ದೇವರು ಹೇಗೆ ಪ್ರೇರೇಪಿಸಿದನು?
    ಕಾವಲಿನಬುರುಜು—1997
  • ದೇವರನ್ನ ಯಾರಾದ್ರೂ ನೋಡಿದ್ದಾರಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಮಹಾ ಮೋಶೆಯನ್ನು ಮಾನ್ಯಮಾಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 108
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ

ಭವಿಷ್ಯವಾಣಿ ಅಂದ್ರೆ ಏನು?

ಬೈಬಲ್‌ ಕೊಡೋ ಉತ್ತರ

ದೇವರಿಂದ ಬಂದಿರೋ ಸಂದೇಶ ಅಥವಾ ಪ್ರಕಟನೆನೇ ಭವಿಷ್ಯವಾಣಿ. ಈ ಭವಿಷ್ಯವಾಣಿಗಳನ್ನ ಹೇಳಿದ ಪ್ರವಾದಿಗಳು “ದೇವರು ಹೇಳಿದ್ದನ್ನೇ . . . ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು” ಅಂತ ಬೈಬಲ್‌ ಹೇಳುತ್ತೆ. (2 ಪೇತ್ರ 1:20, 21) ದೇವರಿಂದ ಬಂದ ಸಂದೇಶವನ್ನ ಪಡ್ಕೊಂಡು ಅದನ್ನ ಬೇರೆವ್ರಿಗೆ ತಿಳಿಸೋ ವ್ಯಕ್ತಿನೇ ಪ್ರವಾದಿ.—ಅಪೊಸ್ತಲರ ಕಾರ್ಯ 3:18.

ಪ್ರವಾದಿಗಳು ದೇವರಿಂದ ಮಾಹಿತಿಯನ್ನ ಹೇಗೆ ಪಡ್ಕೊತಿದ್ರು?

ದೇವರು ತನ್ನ ಯೋಚ್ನೆಯನ್ನ ಪ್ರವಾದಿಗಳಿಗೆ ತಿಳಿಸೋಕೆ ಬೇರೆ ಬೇರೆ ವಿಧಾನಗಳನ್ನ ಬಳಸಿದ್ದಾನೆ:

  • ಬರೆದು ಕೊಟ್ಟನು. ದೇವರು ಕೊನೇ ಪಕ್ಷ ಒಂದು ಸಂದರ್ಭದಲ್ಲಿ ಅಂದ್ರೆ ಹತ್ತು ಆಜ್ಞೆಗಳನ್ನ ಮೋಶೆಗೆ ಬರೆದು ಕೊಟ್ಟನು.—ವಿಮೋಚನಕಾಂಡ 31:18.

  • ದೇವದೂತರ ಮೂಲಕ ಮಾತಾಡಿದನು. ಉದಾಹರಣೆಗೆ, ಮೋಶೆ ಈಜಿಪ್ಟಿನ ರಾಜ ಫರೋಹನ ಹತ್ರ ಹೋಗಿ ಏನು ಹೇಳಬೇಕು ಅನ್ನೋದನ್ನ ದೇವರು ದೇವದೂತನ ಮೂಲಕ ಅವನಿಗೆ ತಿಳಿಸಿದನು. (ವಿಮೋಚನಕಾಂಡ 3:2-4, 10) ಆದ್ರೆ ದೇವರು ಕೆಲವು ಪ್ರಾಮುಖ್ಯ ಪದಗಳನ್ನ ಹೇಳಬೇಕು ಅಂತ ಅಂದ್ಕೊಂಡಾಗ ತನ್ನ ಸಂದೇಶವನ್ನ ನೇರವಾಗಿ ಹೇಳುವಂತೆ ದೇವದೂತರಿಗೆ ಹೇಳಿದನು. ಇದೇ ತರ ಮೋಶೆಗೂ ಮಾಡಿದನು. ಆತನು ಹೇಳಿದ್ದು, “ನಾನು ನಿನಗೆ ಹೇಳಿದ ಎಲ್ಲ ಮಾತುಗಳನ್ನ ನೀನು ಬರಿ. ಯಾಕಂದ್ರೆ ಆ ಮಾತುಗಳ ಪ್ರಕಾರ ನಾನು ನಿನ್ನ ಜೊತೆ, ಇಸ್ರಾಯೇಲ್ಯರ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ.”—ವಿಮೋಚನಕಾಂಡ 34:27.a

  • ದರ್ಶನಗಳ ಮೂಲಕ ಹೇಳಿದನು. ಈ ದರ್ಶನಗಳು ಪ್ರವಾದಿಗಳು ಎಚ್ಚರವಾಗಿದ್ದಾಗ ಮತ್ತು ಅವ್ರಿಗೆ ಸಂಪೂರ್ಣವಾಗಿ ಪ್ರಜ್ಞೆ ಇದ್ದಾಗ ಸಿಕ್ಕಿದವು. (ಯೆಶಾಯ 1:1; ಹಬಕ್ಕೂಕ 1:1) ಇನ್ನೂ ಕೆಲವು ದರ್ಶನಗಳಲ್ಲಿ ಅದನ್ನ ಪಡ್ಕೊಳ್ತಿದ್ದವರು ಕೂಡ ಆ ದರ್ಶನದಲ್ಲಿ ಭಾಗವಹಿಸಿದ್ರು. (ಲೂಕ 9:28-36; ಪ್ರಕಟನೆ 1:10-17) ಬೇರೆ ಸಮಯಗಳಲ್ಲಿ ಪ್ರವಾದಿಗಳು ಭಾವಪರವಶವಾಗಿದ್ದಾಗ ಅಥವಾ ಗುಂಗಿನಲ್ಲಿದ್ದಾಗ ದರ್ಶನಗಳು ಸಿಕ್ಕಿದವು. (ಅಪೊಸ್ತಲರ ಕಾರ್ಯ 10:10, 11; 22:17-21) ದೇವರು ತನ್ನ ಸಂದೇಶವನ್ನ ಪ್ರವಾದಿಗಳು ಮಲಗಿದ್ದಾಗ ಅವರಿಗೆ ಕನಸಿನ ಮೂಲಕ ಕೂಡ ತಿಳಿಸಿದನು.—ದಾನಿಯೇಲ 7:1; ಅಪೊಸ್ತಲರ ಕಾರ್ಯ 16:9, 10.

  • ಮನಸ್ಸಲ್ಲಿ ಹಾಕಿದನು. ದೇವರು ತನ್ನ ಯೋಚನೆಗಳನ್ನ ಪ್ರವಾದಿಗಳ ಮನಸ್ಸಲ್ಲಿ ಹಾಕೋ ಮೂಲಕ ತನ್ನ ಸಂದೇಶವನ್ನ ತಿಳಿಸಿದನು. ಅದಕ್ಕೆ ಬೈಬಲಿನಲ್ಲಿ ಹೀಗಿದೆ, “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” (2 ತಿಮೊತಿ 3:16) ದೇವರು ಪವಿತ್ರಶಕ್ತಿ ಬಳಸಿ ತನ್ನ ಯೋಚನೆಗಳನ್ನ ತನ್ನ ಸೇವಕರ ಮನಸ್ಸಿಗೆ ಹಾಕಿದನು. ಸಂದೇಶ ದೇವರದ್ದಾಗಿದ್ರೂ ಪ್ರವಾದಿಗಳು ಅವ್ರಿಗೆ ಇಷ್ಟವಾದ ಪದಗಳ ಮೂಲಕ ಅದನ್ನ ವ್ಯಕ್ತಪಡಿಸಿದ್ರು.—2 ಸಮುವೇಲ 23:1, 2.

ಭವಿಷ್ಯವಾಣಿಗಳು ಯಾವಾಗ್ಲೂ ಮುಂದೆ ಆಗೋ ವಿಷ್ಯಗಳ ಬಗ್ಗೆ ಮಾತ್ರ ಇರುತ್ತಾ?

ಭವಿಷ್ಯವಾಣಿಗಳು ಬರೀ ಭವಿಷ್ಯದ ಬಗ್ಗೆ ಮಾತ್ರ ಇರಲ್ಲ. ಆದ್ರೆ ಜಾಸ್ತಿ ಭವಿಷ್ಯವಾಣಿಗಳು ನೇರವಾಗಿಲ್ಲಾಂದ್ರೂ ಪರೋಕ್ಷವಾಗಿ ಭವಿಷ್ಯತ್ತಿನ ಬಗ್ಗೆನೇ ಹೇಳುತ್ತೆ. ಉದಾಹರಣೆಗೆ, ಹಿಂದಿನ ಕಾಲದಲ್ಲಿದ್ದ ಇಸ್ರಾಯೇಲ್ಯರಿಗೆ ಅವರು ಮಾಡ್ತಿದ್ದ ಕೆಟ್ಟ ಕೆಲಸಗಳನ್ನ ಬಿಟ್ಟು ಬಿಡೋಕೆ ಪ್ರವಾದಿಗಳು ಪದೇ ಪದೇ ಎಚ್ಚರಿಕೆ ಕೊಟ್ಟರು. ಆ ಎಚ್ಚರಿಕೆಯನ್ನ ಪಾಲಿಸಿದ್ರೆ ಅವ್ರಿಗೆ ಆಶೀರ್ವಾದ ಸಿಗ್ತಿತ್ತು, ಪಾಲಿಸಿಲ್ಲ ಅಂದ್ರೆ ಕಷ್ಟಗಳನ್ನ ಅನುಭವಿಸಬೇಕಾಗ್ತಿತ್ತು. (ಯೆರೆಮೀಯ 25:4-6) ಅವ್ರಿಗೆ ಆಶೀರ್ವಾದ ಸಿಗುತ್ತಾ ಇಲ್ವಾ ಅನ್ನೋದು ಅವರು ಮಾಡೋ ಆಯ್ಕೆ ಮೇಲೆ ನಿರ್ಧಾರ ಆಗ್ತಿತ್ತು.—ಧರ್ಮೋಪದೇಶಕಾಂಡ 30:19, 20

ಭವಿಷ್ಯವಾಣಿಗಳು ಯಾವಾಗ್ಲೂ ಭವಿಷ್ಯದ ಬಗ್ಗೆನೇ ಹೇಳೋದಿಲ್ಲ ಅನ್ನೋದಕ್ಕೆ ಕೆಲವು ಉದಾಹರಣೆಗಳು:

  • ಒಂದು ಸಂದರ್ಭದಲ್ಲಿ ಇಸ್ರಾಯೇಲ್ಯರು ಸಹಾಯಕ್ಕಾಗಿ ದೇವರ ಹತ್ರ ಬೇಡಿಕೊಂಡ್ರು. ಆಗ ಆತನು ಒಬ್ಬ ಪ್ರವಾದಿಯನ್ನ ಕಳಿಸಿ ‘ನೀವು ನನ್ನ ಆಜ್ಞೆಗಳನ್ನ ಪಾಲಿಸಲಿಲ್ಲ, ಅದಕ್ಕೆ ನಾನು ನಿಮಗೆ ಸಹಾಯ ಮಾಡಿಲ್ಲ’ ಅಂತ ಹೇಳಿದನು.—ನ್ಯಾಯಸ್ಥಾಪಕರು 6:6-10.

  • ಯೇಸು ಸಮಾರ್ಯದ ಸ್ತ್ರೀ ಹತ್ರ ಮಾತಾಡೋವಾಗ ಅವಳ ಹಿಂದಿನ ಜೀವನದ ಬಗ್ಗೆ ಕೆಲವು ವಿಷಯಗಳನ್ನ ಹೇಳಿದನು. ಹೀಗೆ ಹೇಳೋದಕ್ಕೆ ದೇವರ ಶಕ್ತಿ ಆತನಿಗೆ ಸಹಾಯ ಮಾಡ್ತು. ಯೇಸು ಅವಳ ಹತ್ರ ಭವಿಷ್ಯತ್ತಿನ ಬಗ್ಗೆ ಮಾತಾಡಿಲ್ಲ ಅಂದ್ರೂ ಅವಳು ಅವನನ್ನ ಪ್ರವಾದಿ ಅಂತ ಕರೆದಳು.—ಯೋಹಾನ 4:17-19.

  • ಒಂದು ಸಮಯದಲ್ಲಿ ಯೇಸುವಿನ ವೈರಿಗಳು ಆತನ ಮುಖಕ್ಕೆ ಮುಸುಕು ಹಾಕಿ ಗುದ್ದಿ “ನೀನು ಪ್ರವಾದಿ ಆಗಿದ್ರೆ ನಿಂಗೆ ಗುದ್ದಿದ್ದು ಯಾರಂತ ಹೇಳು ನೋಡೋಣ?” ಅಂತ ಕೇಳಿದ್ರು. ಇಲ್ಲಿ ಯೇಸುವಿನ ವೈರಿಗಳು ಭವಿಷ್ಯದಲ್ಲಿ ನಡೆಯೋ ವಿಷ್ಯನಾ ಹೇಳು ಅಂತ ಹೇಳ್ಲಿಲ್ಲ, ಬದಲಿಗೆ ದೇವರ ಶಕ್ತಿನ ಉಪಯೋಗಿಸಿ ತನ್ನನ್ನ ಗುದ್ದಿದ್ದು ಯಾರು ಅಂತ ಕಂಡು ಹಿಡಿಯೋಕೆ ಹೇಳಿದ್ರು.—ಲೂಕ 22:63, 64

a ಈ ಸಂದರ್ಭದಲ್ಲಿ ದೇವರು ಸ್ವತಃ ಮೋಶೆ ಜೊತೆ ಮಾತಾಡಿದ ಅಂತ ನಮಗೆ ಅನಿಸಬಹುದು. ಆದ್ರೆ ದೇವರು ಮೋಶೆಯ ನಿಯಮ ಪುಸ್ತಕವನ್ನ ದೇವದೂತರ ಮೂಲಕ ಕೊಟ್ಟನು ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ.—ಅಪೊಸ್ತಲರ ಕಾರ್ಯ 7:53; ಗಲಾತ್ಯ 3:19.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ