ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwyp ಲೇಖನ 54
  • ಮನೇಲಿ ರೂಲ್ಸ್‌ ಎಲ್ಲ ಯಾಕೆ ಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನೇಲಿ ರೂಲ್ಸ್‌ ಎಲ್ಲ ಯಾಕೆ ಬೇಕು?
  • ಯುವಜನರ ಪ್ರಶ್ನೆಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರೂಲ್ಸ್‌ ಯಾಕೆ ಇಡ್ತಿದ್ದಾರೆ ಅಂತ ತಿಳ್ಕೊಳ್ಳಿ
  • ಸರಿಯಾಗಿರೋ ಸಮಯ ನೋಡಿ ಮಾತಾಡಿ
  • ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ನಂಗಿಷ್ಟ ಇಲ್ಲ...ಏನ್‌ ಮಾಡ್ಲಿ?
    ಯುವಜನರ ಪ್ರಶ್ನೆಗಳು
  • ನನಗೆ ಇಷ್ಟೊಂದು ರೂಲ್ಸ್‌ ಯಾಕೆ?
    ಎಚ್ಚರ!—2007
  • ನಮ್ಮ ಅಪ್ಪ-ಅಮ್ಮ ನಂಗೆ ಯಾಕೆ ಎಂಜಾಯ್‌ ಮಾಡೋಕೆ ಬಿಡಲ್ಲ?
    ಯುವಜನರ ಪ್ರಶ್ನೆಗಳು
  • ಮಕ್ಕಳಿಗೆ ರೂಲ್ಸ್‌ ಹೇಗೆ ಇಡೋದು?
    ಎಚ್ಚರ!—2013
ಇನ್ನಷ್ಟು
ಯುವಜನರ ಪ್ರಶ್ನೆಗಳು
ijwyp ಲೇಖನ 54
ಅಪ್ಪನ ಮಾತನ್ನ ಮಗ ಕೇಳಿಸ್ಕೊತಿದ್ದಾನೆ

ಯುವಜನರ ಪ್ರಶ್ನೆಗಳು

ಮನೇಲಿ ರೂಲ್ಸ್‌ ಎಲ್ಲ ಯಾಕೆ ಬೇಕು?

ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ಇಂದ ತಲೆ ಕೆಟ್ಟು ಹೋಗ್ತಿದ್ಯಾ? ಅದ್ರ ಬಗ್ಗೆ ಅಪ್ಪಅಮ್ಮ ಹತ್ರ ಸರಿಯಾಗಿ ಮಾತಾಡೋಕೆ ಈ ಆರ್ಟಿಕಲ್‌ ಮತ್ತು ಇದ್ರ ಬಗ್ಗೆ ಇರೋ ವರ್ಕ್‌ಶೀಟ್‌ ನಿಮಗೆ ಸಹಾಯ ಮಾಡುತ್ತೆ.

  • ರೂಲ್ಸ್‌ ಯಾಕೆ ಇಡ್ತಿದ್ದಾರೆ ಅಂತ ತಿಳ್ಕೊಳ್ಳಿ

  • ಸರಿಯಾಗಿರೋ ಸಮಯ ನೋಡಿ ಮಾತಾಡಿ

  • ನಿಮ್ಮ ವಯಸ್ಸಿನವರು ಏನಂತಾರೆ?

ರೂಲ್ಸ್‌ ಯಾಕೆ ಇಡ್ತಿದ್ದಾರೆ ಅಂತ ತಿಳ್ಕೊಳ್ಳಿ

ತಪ್ಪು ಅಭಿಪ್ರಾಯ: ‘ಒಂದ್ಸಲ ಮನೆ ಬಿಟ್ಟು ಹೋದ್ರೆ ಯಾವ ರೂಲ್ಸೂ ಇರಲ್ಲ, ನಾನು ಯಾರ ಮಾತನ್ನೂ ಕೇಳಬೇಕಾಗಿಲ್ಲ.’

ನಿಜ ಏನು ಗೊತ್ತಾ? ಮನೆ ಬಿಟ್ಟು ಹೋದ ತಕ್ಷಣ ಯಾವ ರೂಲ್ಸನ್ನೂ ಫಾಲೋ ಮಾಡಬೇಕಾಗಿಲ್ಲ ಅನ್ನೋದೆಲ್ಲಾ ಸುಳ್ಳು! ಆಗ್ಲೂ ನೀವು ಕಂಪನಿ ರೂಲ್ಸ್‌ನ, ಮನೆ ಓನರ್‌ ಇಡೋ ರೂಲ್ಸ್‌ನ, ಸರ್ಕಾರ ಇಟ್ಟಿರೋ ರೂಲ್ಸ್‌ನ ಫಾಲೋ ಮಾಡ್ಲೇಬೇಕು. “ಯಾವ ಮಕ್ಕಳು ಮನೆಲಿ ಮಾತು ಕೇಳೋಕೆ ಕಷ್ಟಪಡ್ತಾರೋ, ಅವರು ದೊಡ್ಡವರಾದ ಮೇಲೂ ಈ ಎಲ್ಲ ವಿಷ್ಯಗಳಲ್ಲಿ ಕಷ್ಟಪಡ್ತಾರೆ” ಅಂತ 19 ವರ್ಷದ ಡ್ಯಾನಿಯಲ್‌ ಹೇಳ್ತಾನೆ.

ಬೈಬಲ್‌ ಹೀಗೆ ಹೇಳುತ್ತೆ: “ಸರ್ಕಾರಗಳ, ಅಧಿಕಾರಿಗಳ ಮಾತು ಕೇಳಬೇಕು.” (ತೀತ 3:1) ಚಿಕ್ಕವರಿದ್ದಾಗ ಅಪ್ಪಅಮ್ಮ ಇಡೋ ರೂಲ್ಸ್‌ನ ಫಾಲೋ ಮಾಡಿದ್ರೆ, ದೊಡ್ಡವರಾದ ಮೇಲೆ ಬೇರೆಯವರು ಇಡೋ ರೂಲ್ಸ್‌ನ ಫಾಲೋ ಮಾಡೋಕೆ ಸುಲಭ ಆಗುತ್ತೆ.

ಹೀಗೆ ಮಾಡಿ ನೋಡಿ: ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ಇಂದ ನಿಮಗೆ ಏನ್‌ ಒಳ್ಳೆದಾಗುತ್ತೆ ಅಂತ ಯೋಚನೆ ಮಾಡಿ. “ನಮ್ಮ ಅಪ್ಪಅಮ್ಮ ರೂಲ್ಸ್‌ ಇಟ್ಟಿದ್ರಿಂದ ನಾನು ಒಳ್ಳೇ ಫ್ರೆಂಡ್ಸ್‌ ಮಾಡ್ಕೋಳೋಕೆ, ನನ್ನ ಟೈಮ್‌ನ ಸರಿಯಾಗಿ ಉಪಯೋಗಿಸೋಕೆ ಆಯ್ತು. ಜಾಸ್ತಿ ಟಿವಿ ನೋಡ್ದೆ, ವಿಡಿಯೋ ಗೇಮ್ಸ್‌ ಆಡದೆ, ಒಳ್ಳೇ ಹವ್ಯಾಸ ಬೆಳೆಸ್ಕೊಳೋಕೆ ಸಹಾಯ ಆಯ್ತು. ಆ ಹವ್ಯಾಸಗಳನ್ನ ನಾನು ಇವತ್ತಿಗೂ ಎಂಜಾಯ್‌ ಮಾಡ್ತೀನಿ” ಅಂತ ಜೆರೆಮಿ ಹೇಳ್ತಾನೆ.

ಸರಿಯಾಗಿರೋ ಸಮಯ ನೋಡಿ ಮಾತಾಡಿ

ಇಟ್ಟಿರೋ ರೂಲ್ಸ್‌ ಅಷ್ಟು ಸರಿಯಿಲ್ಲ ಅಂತ ಅನಿಸಿದ್ರೆ ಏನು ಮಾಡೋದು? ಉದಾಹರಣೆಗೆ, ತಾಮರ ಅನ್ನೋ ಹುಡುಗಿ ಏನ್‌ ಹೇಳ್ತಾನೆ ನೋಡಿ. “ನಮ್ಮ ಅಪ್ಪಅಮ್ಮ ಈ ಮುಂಚೆ ನನ್ನನ್ನ ಬೇರೆ ದೇಶಕ್ಕೆ ಹೋಗೋಕೆ ಬಿಟ್ರು. ಆದ್ರೆ ನಾನು ವಾಪಾಸ್‌ ಬಂದ್ಮೇಲೆ ಮನೆಯಿಂದ 20 ನಿಮಿಷ ದೂರದಲ್ಲಿರೋ ಜಾಗಕ್ಕೆ ಗಾಡೀಲಿ ಹೋಗಕೂ ಬಿಡ್ತಿಲ್ಲ.”

ನಿಮಗೂ ಯಾವುದಾದ್ರೂ ರೂಲ್ಸ್‌ ಸರಿ ಇಲ್ಲ ಅಂತ ಅನಿಸ್ತಿದ್ರೆ, ಅದರ ಬಗ್ಗೆ ನಿಮ್ಮ ಅಪ್ಪಅಮ್ಮ ಹತ್ರ ಮಾತಾಡೋದು ತಪ್ಪಾ? ಖಂಡಿತ ಇಲ್ಲ! ಆದ್ರೆ, ಅದರ ಬಗ್ಗೆ ಯಾವಾಗ ಮತ್ತೆ ಹೇಗೆ ಮಾತಾಡಬೇಕು ಅನ್ನೋದನ್ನ ಕಲಿಬೇಕು ಅಷ್ಟೇ.

ಯಾವಾಗ ಮಾತಾಡಬೇಕು? “ನಿಮ್ಮ ಮಾತು ಕೇಳಿ ಅಪ್ಪಅಮ್ಮ ಅವ್ರ ರೂಲ್ಸ್‌ನ ಅಡ್ಜಸ್ಟ್‌ ಮಾಡಬೇಕಂದ್ರೆ ನೀವು ಈಗಾಗ್ಲೇ ಅವ್ರು ಇಟ್ಟಿರೋ ರೂಲ್ಸ್‌ನ ಫಾಲೋ ಮಾಡಿ, ಅವ್ರ ನಂಬಿಕೆ ಗಳಿಸಿರಬೇಕು” ಅಂತ ಅಮಾಂಡ ಅನ್ನೋ ಹುಡುಗಿ ಹೇಳ್ತಾಳೆ.

ಡಾರ್ಯ ಕೂಡ ಈ ಮಾತನ್ನ ನಿಜ ಅಂತಾಳೆ. “ಇಟ್ಟಿರೋ ರೂಲ್ಸ್‌ನ ನಾನು ಫಾಲೋ ಮಾಡೋವರೆಗೂ ನಮ್ಮಮ್ಮ ಅವ್ರ ರೂಲ್ಸ್‌ನ ಬದಲಾಯಿಸೋಕೆ ಒಪ್ತಿರಲಿಲ್ಲ” ಅಂತ ಅವಳು ಹೇಳ್ತಾಳೆ. ನೆನಪಿಡಿ, ನಂಬಿಕೆ ಅನ್ನೋದು ನಾವು ಗಳಿಸಬೇಕಾಗಿರೋದು, ಕೇಳಿ ಪಡ್ಕೊಳೋದಲ್ಲ.

ಬೇರೆಬೇರೆ ಕಡೆಯಿಂದ ವಿಮಾನಗಳು ಏರ್‌ಪೋರ್ಟಿಗೆ ಬರ್ತಿವೆ

ರೂಲ್ಸ್‌ ಇಲ್ಲದಿರೋ ಮನೆಲಿ ಜೀವನ ಮಾಡೋದು ರೂಲ್ಸ್‌ ಫಾಲೋ ಮಾಡದಿರೋ ಏರ್‌ಪೋರ್ಟಲ್ಲಿ ವಿಮಾನ ಲ್ಯಾಂಡ್‌ ಮಾಡೋಕೆ ಹೋದಂತೆ.

ಬೈಬಲ್‌ ಹೀಗೆ ಹೇಳುತ್ತೆ: “ನನ್ನ ಮಗನೇ, ನಿನ್ನ ಅಪ್ಪನ ಆಜ್ಞೆಯನ್ನ ಪಾಲಿಸು, ನಿನ್ನ ಅಮ್ಮ ಕಲಿಸುವಾಗ ಕೇಳಿಸ್ಕೊ.” (ಜ್ಞಾನೋಕ್ತಿ 6:20) ಈ ಬುದ್ಧಿಮಾತನ್ನ ಪಾಲಿಸಿದ್ರೆ ನಿಮ್ಮ ಅಪ್ಪಅಮ್ಮನ ನಂಬಿಕೆ ಗಳಿಸ್ತೀರ, ಆಗ ಅವರತ್ರ ಮಾತಾಡೋಕೆ ಸುಲಭ ಆಗುತ್ತೆ.

ಹೇಗೆ ಮಾತಾಡ್ಬೇಕು? “ಕೂಗಾಡಿ ಕಿರಿಚಾಡೋಕಿಂತ ಅಪ್ಪಅಮ್ಮನಿಗೆ ಗೌರವ ಕೊಟ್ಟು, ತಾಳ್ಮೆಯಿಂದ ಮಾತಾಡೋದು ಒಳ್ಳೇದು” ಅಂತ ಸ್ಟೀವನ್‌ ಅನ್ನೋ ಹುಡುಗ ಹೇಳ್ತಾನೆ.

ಈ ಹಿಂದೆ ಹೇಳಿದ ಡಾರ್ಯ ಕೂಡ ಈ ಮಾತನ್ನ ಒಪ್ಪುತ್ತಾ ಹೀಗೆ ಹೇಳ್ತಾಳೆ, “ನಾನು ಅಮ್ಮ ಹತ್ರ ಎಷ್ಟು ಕೂಗಾಡಿ ಕಿರಿಚಾಡಿದ್ರೂ ಏನೂ ಉಪಯೋಗ ಇಲ್ಲ. ನಾನು ಈ ತರ ಮಾಡಿದ್ರೆ ಅವರು ಇರೋ ರೂಲ್‌ನ ಇನ್ನೂ ಸ್ಟ್ರಿಕ್ಟ್‌ ಮಾಡ್ತಾರೆ ಅಷ್ಟೇ.”

ಬೈಬಲ್‌ ಹೀಗೆ ಹೇಳುತ್ತೆ: “ಮೂರ್ಖ ತನ್ನ ಕೋಪವನ್ನೆಲ್ಲ ತೋರಿಸ್ತಾನೆ, ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.” (ಜ್ಞಾನೋಕ್ತಿ 29:11) ನಮ್ಮನ್ನ ನಾವೇ ಕಂಟ್ರೋಲಲ್ಲಿ ಇಟ್ಕೊಳ್ಳೋದನ್ನ ಕಲಿತ್ರೆ, ಮನೆಲಿ ಮಾತ್ರ ಅಲ್ಲ ಸ್ಕೂಲಲ್ಲಿ, ಕೆಲಸದ ಜಾಗದಲ್ಲಿ, ನಾವು ಎಲ್ಲಿ ಹೋದ್ರೂ ಅದ್ರಿಂದ ನಮಗೆ ತುಂಬಾ ಪ್ರಯೋಜನ ಆಗುತ್ತೆ.

ಹೀಗೆ ಮಾಡಿ ನೋಡಿ: ಮಾತಾಡೋ ಮುಂಚೆ ಯೋಚನೆ ಮಾಡಿ. ಕಟ್ಟೋಕೆ ವರುಷ ಕೆಡವೋಕೆ ನಿಮಿಷ ಅನ್ನೋ ತರ ಕೋಪದಿಂದ ನೀವು ಆಡೋ ಒಂದು ಮಾತು ನೀವು ಕಷ್ಟಪಟ್ಟು ಗಳಿಸಿರೋ ನಂಬಿಕೆನ ನೀರು ಪಾಲು ಮಾಡುತ್ತೆ. ಅದಕ್ಕೇ “ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 14:29.

ಇದನ್ನ ಮಾಡಿ: ರೂಲ್ಸ್‌ ಬಗ್ಗೆ ನಿಮಗೆ ಹೇಗೆ ಅನಿಸುತ್ತೆ ಅಂತ ತಿಳ್ಕೊಳ್ಳೋಕೆ ಇದ್ರ ಬಗ್ಗೆ ಇರೋ ವರ್ಕ್‌ಶೀಟ್‌ (ಇಂಗ್ಲೀಷ್‌) ತುಂಬಿ, ಅಗತ್ಯ ಇದ್ರೆ ಇದ್ರ ಬಗ್ಗೆ ನಿಮ್ಮ ಅಪ್ಪಅಮ್ಮ ಹತ್ರನೂ ಮಾತಾಡಿ.

ನಿಮ್ಮ ವಯಸ್ಸಿನವರು ಏನಂತಾರೆ?

ಕಿಂಬರ್ಲೀ

“ಚಿಕ್ಕವರು ಇರುವಾಗ ರೂಲ್ಸ್‌ ಫಾಲೋ ಮಾಡೋದ್ರಿಂದ ಮುಂದೆ ಗೌರವ ಸಿಗುತ್ತೆ, ನಮ್ಮನ್ನ ನಾವೇ ಕಂಟ್ರೋಲ್‌ ಮಾಡ್ಕೊಳ್ಳೋಕೆ ಕಲಿತೀವಿ. ಈ ಗುಣಗಳು ದೊಡ್ಡವರು ಆದ್ಮೇಲೆ ನಮಗೆ ತುಂಬಾನೇ ಸಹಾಯ ಮಾಡುತ್ತೆ. ಒಂದುವೇಳೆ ನನಗೆ ರೂಲ್ಸ್‌ ಇಟ್ಟಿರಲಿಲ್ಲ ಅಂದಿದ್ರೆ ನಾನು ಇಷ್ಟೊತ್ತಿಗೆ ಏನಾಗ್ತಿದ್ದೆ ಅಂತ ನನಗೇ ಗೊತ್ತಿಲ್ಲ!”—ಕಿಂಬರ್ಲೀ

ಕ್ಯಾಲೀ

“ಅಪ್ಪಅಮ್ಮ ಇಟ್ಟ ರೂಲ್ಸ್‌ ನಂಗೆ ಸರಿ ಇಲ್ಲ ಅಂತ ಅನಿಸಿದಾಗೆಲ್ಲ ನನ್ನ ಮನಸ್ಸಿಗೆ ಬಂದಂಗೆ ನಡ್ಕೊತಿದ್ದೆ. ಇದ್ರಿಂದ ಅವರ ನಂಬಿಕೆ ಕಳ್ಕೊಳ್ತಿದ್ದೆ, ನಂಗೇ ತೊಂದರೆ ಆಗ್ತಿತ್ತು. ಅಪ್ಪಅಮ್ಮ ಇಡೋ ರೂಲ್ಸ್‌ ನಮ್ಮ ಒಳ್ಳೆದಕ್ಕೇ ಅಂತ ಈಗ ನಂಗೆ ಅರ್ಥ ಆಗಿದೆ.”—ಕ್ಯಾಲೀ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ