ವಿಚ್ಛೇದನದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?
ಮದುವೆ ಹಾಗೂ ವಿಚ್ಛೇದನದ ಬಗ್ಗೆ ಬೈಬಲ್ ಏನ್ ಹೇಳುತ್ತೋ ನಾವು ಹಾಗೆ ಮಾಡ್ತೀವಿ. ಮದುವೆಯು ಒಂದು ಶಾಶ್ವತ ಬಂಧ. ಮದುವೆ ಅನ್ನೋದು ಒಂದು ಗಂಡು ಹಾಗೂ ಒಂದು ಹೆಣ್ಣಿನ ಮಧ್ಯೆ ಇರುವ ಶಾಶ್ವತ ಬಂಧವಾಗಿ ದೇವರು ಮಾಡಿದನು. ವಿವಾಹ ವಿಚ್ಛೇದನಕ್ಕೆ ಇರೋ ಒಂದೇ ಒಂದು ಬೈಬಲ್ ಆಧಾರಿತ ಕಾರಣ ವ್ಯಭಿಚಾರ.—ಮತ್ತಾಯ 19:5, 6, 9.
ಮದುವೆ ಜೀವನದಲ್ಲಿ ಸಮಸ್ಯೆಗಳನ್ನ ಅನುಭವಿಸುತ್ತಿರೋ ದಂಪತಿಗಳಿಗೆ ಯೆಹೋವನ ಸಾಕ್ಷಿಗಳು ಸಹಾಯ ಮಾಡ್ತಾರಾ?
ಹೌದು, ಅನೇಕ ವಿಧಗಳಲ್ಲಿ ಸಹಾಯ ಮಾಡ್ತಾರೆ:
ಪುಸ್ತಕ ಪತ್ರಿಕೆಗಳು. ಈ ಲೇಖನಗಳಲ್ಲಿರೋ ಸಲಹೆಗಳು ಮದುವೆಯನ್ನ ಬಲಪಡಿಸುತ್ತೆ. ಮುರಿದು ಬೀಳುವಂತೆ ತೋರುವ ಮದುವೆಗಳನ್ನ ಕೂಡ ಸರಿ ಮಾಡುತ್ತೆ. ಉದಾಹರಣೆಗೆ, ಈ ಲೇಖನಗಳನ್ನ ನೋಡಿ “ಮದುವೆಯ ಬದ್ಧತೆಗಳನ್ನು ಪಾಲಿಸಿರಿ,” “ಕ್ಷಮಿಸೋದು ಹೇಗೆ?,” ಹಾಗೂ “ನಂಬಿಕೆಯನ್ನು ಮತ್ತೆ ಕಟ್ಟುವುದು ಹೇಗೆ?.”
ಕೂಟಗಳು. ನಮ್ಮ ಕೂಟಗಳು, ಸಮ್ಮೇಳನ ಹಾಗೂ ಅಧಿವೇಶನಗಳಲ್ಲಿ ಮದುವೆಯ ಬಗ್ಗೆ ಬೈಬಲ್ನಲ್ಲಿರೋ ಪ್ರಾಯೋಗಿಕ ಸಲಹೆಗಳನ್ನ ಚರ್ಚಿಸಲಾಗುತ್ತೆ.
ಹಿರಿಯರು. ಸಭೆಯಲ್ಲಿರೋ ಹಿರಿಯರು ದಂಪತಿಗಳಿಗೆ ವೈಯಕ್ತಿಕವಾಗಿ ಸಹಾಯ ಮಾಡ್ತಾರೆ. ಅವರು ಬೈಬಲ್ ವಚನಗಳನ್ನ ಉದಾಹರಣೆಗೆ, ಎಫೆಸ 5:22-25 ಬಳಸ್ತಾ ಸಲಹೆ ಕೊಡ್ತಾರೆ.
ಒಬ್ಬ ಯೆಹೋವನ ಸಾಕ್ಷಿ ವಿಚ್ಛೇದನ ಪಡೆಯಲು ಬಯಸಿದರೆ, ಸಭೆಯಲ್ಲಿರೋ ಹಿರಿಯರಿಂದ ಒಪ್ಪಿಗೆ ಪಡೀಬೇಕಾ?
ಇಲ್ಲ. ಮದುವೆ ಜೀವನದಲ್ಲಿ ಸಮಸ್ಯೆಗಳನ್ನ ಅನುಭವಿಸುತ್ತಿರೋ ದಂಪತಿಗಳಿಗೆ ಸಹಾಯ ಮಾಡಲು ಹಿರಿಯರನ್ನ ಕರೆದಾಗಲೂ, ದಂಪತಿಗಳು ಯಾವ ನಿರ್ಧಾರವನ್ನ ತೆಗೆದುಕೊಳ್ಳಬೇಕಂತ ಹೇಳೋ ಅಧಿಕಾರ ಹಿರಿಯರಿಗೆ ಇರುವುದಿಲ್ಲ. (ಗಲಾತ್ಯ 6:5) ಬೈಬಲ್ನಲ್ಲಿ ಹೇಳಿರೋ ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕಾಗಿ ಒಬ್ಬ ವ್ಯಕ್ತಿ ವಿಚ್ಛೇದನ ನೀಡಲು ನಿರ್ಧಾರ ಮಾಡಿದ್ರೆ ಅವರಿಗೆ ಬೇರೆಯವರನ್ನ ಮತ್ತೆ ಮದುವೆಯಾಗೋ ಸ್ವಾತಂತ್ರ್ಯ ಇಲ್ಲ.—1 ತಿಮೊತಿ 3:1, 5, 12.
ಗಂಡ ಹೆಂಡತಿ ಬೇರೆ ಬೇರೆಯಾಗಿ ಜೀವನ ಮಾಡೋದರ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?
ಮದುವೆ ಜೀವನ ಅಷ್ಟೇನೂ ಚೆನ್ನಾಗಿಲ್ಲ ಅಂದ್ರೂ ಮದುವೆ ಆಗಿರೋ ದಂಪತಿಗಳು ಯಾವಾಗ್ಲೂ ಜೊತೆಜೊತೆಯಾಗಿ ಇರಬೇಕು ಅಂತ ಬೈಬಲ್ ಉತ್ತೇಜಿಸುತ್ತೆ. (1 ಕೊರಿಂಥ 7:10-16) ಪಟ್ಟು ಹಿಡಿದು ಪ್ರಾರ್ಥನೆ ಮಾಡಿದಾಗ, ಬೈಬಲ್ ತತ್ವಗಳನ್ನ ಜೀವನದಲ್ಲಿ ಅನ್ವಯಿಸಿದಾಗ ಹಾಗೂ ಪ್ರೀತಿ ತೋರಿಸುವಾಗ ಎಷ್ಟೋ ಸಮಸ್ಯೆಗಳನ್ನ ಬಗೆಹರಿಸಬಹುದು.—1 ಕೊರಿಂಥ 13:4-8; ಗಲಾತ್ಯ 5:22.
ಆದ್ರೆ, ಕೆಲವು ಕ್ರೈಸ್ತರು ಕೆಳಗೆ ತಿಳಿಸಿರೋ ಸಂದರ್ಭಗಳಲ್ಲಿ ಸನ್ನಿವೇಶ ತುಂಬಾ ಹದಗೆಟ್ಟಾಗ ತಮ್ಮ ಸಂಗಾತಿಯಿಂದ ದೂರ ಇರಲು ಅಥವಾ ಬೇರೆ ಆಗಿ ಜೀವನ ಮಾಡಲು ನಿರ್ಧರಿಸಿದ್ದಾರೆ:
ಬೇಕು ಬೇಕಂತಾನೆ ಅಗತ್ಯ ಇರೋದನ್ನ ಕೊಡದಿದ್ರೆ.—1 ತಿಮೊತಿ 5:8.
ವಿಪರೀತ ಶಾರೀರಿಕ ದೌರ್ಜನ್ಯ.—ಕೀರ್ತನೆ 11:5.
ಯೆಹೋವ ದೇವರನ್ನ ಆರಾಧಿಸಲು ತುಂಬಾ ಅಡ್ಡಿ ಬರುವಾಗ. ಉದಾಹರಣೆಗೆ, ಒಬ್ಬ ಸಂಗಾತಿಯು ಯಾವುದಾದರೂ ರೀತಿಯಲ್ಲಿ ದೇವರ ಆಜ್ಞೆಗಳನ್ನ ಮುರಿಯುವಂತೆ ಸಾಕ್ಷಿಯನ್ನ ಒತ್ತಾಯಿಸಲು ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಬೆದರಿಕೆಗೆ ಒಳಗಾದ ಸಂಗಾತಿಯು “ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” ಅನ್ನೋ ಆಜ್ಞೆಯನ್ನ ಪಾಲಿಸಲು, ಸಂಗಾತಿಯಿಂದ ದೂರ ಇರಲು ಅಥವಾ ಬೇರೆ ಆಗಿ ಜೀವನ ಮಾಡಲು ನಿರ್ಧಾರ ಮಾಡಬಹುದು.—ಅಪೊಸ್ತಲರ ಕಾರ್ಯ 5:29.