ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 136
  • ಮರಿಯಳು ದೇವರ ತಾಯಿನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮರಿಯಳು ದೇವರ ತಾಯಿನಾ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • “ಇಗೋ, ನಾನು ಯೆಹೋವನ ದಾಸಿ!”
    ಅವರ ನಂಬಿಕೆಯನ್ನು ಅನುಕರಿಸಿ
  • ಮರಿಯಳು “ದೇವರ ಮಾತೆ”ಯೋ?
    ಎಚ್ಚರ!—1996
  • “ಇಗೋ, ಯೆಹೋವನ ದಾಸಿ!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಕತ್ತಿಯಿಂದ ಇರಿದಂಥ ನೋವನ್ನು ಅನುಭವಿಸಿದರೂ ಮುಂದೆ ಸಾಗಿದಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 136
ಮರಿಯ ಮತ್ತು ಪುಟ್ಟ ಯೇಸು

ಮರಿಯಳು ದೇವರ ತಾಯಿನಾ?

ಬೈಬಲ್‌ ಕೊಡೋ ಉತ್ತರ

ಅಲ್ಲ. ಬೈಬಲ್‌ನಲ್ಲಿ ಎಲ್ಲಿಯೂ ಮರಿಯಳು ದೇವರ ತಾಯಿ ಅಂತ ಹೇಳಲ್ಲ. ಅಷ್ಟೇ ಅಲ್ಲ ಕ್ರೈಸ್ತರು ಮರಿಯಳನ್ನ ಆರಾಧಿಸಬೇಕು, ಪೂಜೆ ಮಾಡಬೇಕು ಅಂತನೂ ಬೈಬಲ್‌ ಹೇಳಲ್ಲ.a ಈ ಮುಂದಿನ ವಿಷ್ಯಗಳನ್ನ ಗಮನಿಸಿ:

  • ಮರಿಯ ಯಾವತ್ತು ‘ನಾನು ದೇವರ ತಾಯಿ’ ಅಂತ ಹೇಳಿಕೊಳ್ಳಲಿಲ್ಲ. ಮರಿಯಳು ‘ದೇವರ ಮಗನನ್ನ’ ಹೆತ್ತಳು ಅಂತ ಬೈಬಲ್‌ನಲ್ಲಿ ಇದೇ ಹೊರತು ದೇವರನ್ನ ಹೆತ್ತಳು ಅಂತ ಇಲ್ಲ.—ಮಾರ್ಕ 1:1; ಲೂಕ 1:32.

  • ಯೇಸು ಯಾವತ್ತು ಮರಿಯಳು ದೇವರ ತಾಯಿ ಅಥವಾ ಅವಳನ್ನ ವಿಶೇಷವಾಗಿ ಆರಾಧನೆ ಮಾಡಬೇಕು ಅಂತ ಹೇಳಲಿಲ್ಲ. ಒಬ್ಬ ಸ್ತ್ರೀ ಯೇಸುವಿಗೆ ‘ಮರಿಯ ನಿನ್ನ ತಾಯಿಯಾಗಿ ಇರೋದ್ರಿಂದ ಖುಷಿಯಾಗಿ ಇರ್ತಾಳೆ’ ಅಂತ ಹೇಳಿದಾಗ ಯೇಸು ಅವಳನ್ನ ತಿದ್ದಿ “ಇಲ್ಲ, ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂದನು.—ಲೂಕ 11:27, 28.

  • “ದೇವರ ತಾಯಿ” ಮತ್ತು ತಿಯೋಟೊಕೊಸ್‌ (ದೇವರನ್ನು-ಹೊತ್ತವಳು) ಅನ್ನೋ ಪದಗಳು ಬೈಬಲ್‌ನಲ್ಲಿ ಇಲ್ಲ.

  • ಬೈಬಲ್‌ನಲ್ಲಿ “ಸ್ವರ್ಗದ ರಾಣಿ” ಅಂತ ಹೇಳಿರೋದು ಮರಿಯಳಿಗೆ ಅಲ್ಲ, ಬದಲಿಗೆ ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಸುಳ್ಳು ದೇವತೆಗಳಿಗೆ. (ಯೆರೆಮೀಯ 44:15-19) ಬಹುಶಃ ‘ಸ್ವರ್ಗದ ರಾಣಿಯನ್ನ’ ಬಾಬೆಲಿನ ದೇವತೆಯಾದ ಇಶಾರ್ಟ್‌ (ಅಸ್ಟಾರ್ಟೆ) ಅನ್ನು ಸೂಚಿಸುತ್ತಿರಬಹುದು.

  • ಒಂದನೇ ಶತಮಾನದ ಕ್ರೈಸ್ತರು ಮರಿಯಳನ್ನು ಆರಾಧಿಸಲೂ ಇಲ್ಲ, ಅವಳಿಗೆ ವಿಶೇಷ ಸ್ಥಾನಮಾನ ಕೊಡಲೂ ಇಲ್ಲ. ಒಂದನೇ ಶತಮಾನದ ಕ್ರೈಸ್ತರ ಬಗ್ಗೆ ಒಬ್ಬ ಇತಿಹಾಸಗಾರ ಹೀಗೆ ಹೇಳುತ್ತಾನೆ: “ಅವರು ವಿಧರ್ಮಿ ಆಚರಣೆಗಳನ್ನ ತಿರಸ್ಕರಿಸಿದರು. ಅಷ್ಟೇ ಅಲ್ಲ, ಅವರು ಮರಿಯಳಿಗೆ ವಿಶೇಷ ಸ್ಥಾನಮಾನ ಕೊಟ್ಟರೆ ಅದು ದೇವತೆಗಳ ಆರಾಧನೆ ಮಾಡಿದ ಹಾಗೆ ಆಗುತ್ತೆ ಅಂತ ತಿಳಿದು ಹೆದರಿರಬಹುದು.”—ಇನ್‌ ಕ್ವೇಷ್ಟ್‌ ಆಫ್‌ ದಿ ಜೂಯಿಷ್‌ ಮೇರಿ.

  • ದೇವರು ಯಾವಾಗಲೂ ಇದ್ದವನು ಮತ್ತು ಯಾವತ್ತೂ ಇರುವವನು ಆಗಿದ್ದಾನೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 90:1, 2; ಯೆಶಾಯ 40:28) ದೇವರಿಗೆ ಆರಂಭವೇ ಇಲ್ಲ ಅಂದಮೇಲೆ ಆತನಿಗೆ ತಾಯಿಯೂ ಇಲ್ಲ ಅಂತ ಅರ್ಥ. ಹಾಗಾಗಿ ಮರಿಯಳ ಗರ್ಭದಲ್ಲಿ ಇದದ್ದು ದೇವರಲ್ಲ. ಆತನಿಗೆ ವಿಶಾಲ ಆಕಾಶವೇ ಸಾಕಾಗಲ್ಲ ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ.—1 ಅರಸು 8:27.

ಮರಿಯ—ಯೇಸುವಿನ ತಾಯಿ ಹೊರತು “ದೇವರ ತಾಯಿ” ಅಲ್ಲ

ಮರಿಯಳು ಹುಟ್ಟಿನಿಂದ ಯೆಹೂದ್ಯಳಾಗಿದ್ದಳು. ಅವಳು ರಾಜ ದಾವೀದನ ವಂಶದವಳಾಗಿದ್ದಳು. (ಲೂಕ 3:23-31) ಅವಳಿಗೆ ದೇವರ ಮೇಲೆ ತುಂಬ ನಂಬಿಕೆ, ಭಯ ಭಕ್ತಿ ಇದಿದ್ರಿಂದ ಆತನಿಂದ ತುಂಬ ಆಶೀರ್ವಾದಗಳನ್ನ ಪಡೆದಳು. (ಲೂಕ 1:28) ಯೇಸುವಿನ ತಾಯಿ ಆಗೋಕೆ ದೇವರು ಮರಿಯಳನ್ನು ಆರಿಸಿಕೊಂಡನು. (ಲೂಕ 1:31, 35) ಮರಿಯ ಮತ್ತು ಅವಳ ಗಂಡ ಯೋಸೇಫನಿಗೆ ಬೇರೆ ಮಕ್ಕಳೂ ಇದ್ದರು.—ಮಾರ್ಕ 6:3.

ಅಷ್ಟೇ ಅಲ್ಲ, ಮರಿಯಳು ನಂತರ ಯೇಸುವಿನ ಶಿಷ್ಯಳಾದಳು ಅಂತ ಬೈಬಲ್‌ ಹೇಳುತ್ತೆ. ಅದನ್ನ ಬಿಟ್ಟು ಬೇರೆ ಹೆಚ್ಚಿನ ಮಾಹಿತಿ ಬೈಬಲ್‌ನಲ್ಲಿ ಇಲ್ಲ.—ಅಪೊಸ್ತಲರ ಕಾರ್ಯ 1:14.

ಕೆಲವರು ಮರಿಯಳನ್ನು ದೇವರ ತಾಯಿ ಅಂತ ಯಾಕೆ ನೆನಸುತ್ತಾರೆ?

ಕ್ರಿ.ಶ. ನಾಲ್ಕನೇ ಶತಮಾನದ ಕೊನೆಯಷ್ಟಕ್ಕೆ ಮರಿಯಳನ್ನ ಆರಾಧನೆ ಮಾಡೋಕೆ ಶುರುವಾಯ್ತು. ಆ ಸಮಯದಲ್ಲಿ ಕ್ಯಾಥೊಲಿಕ್‌ ಚರ್ಚ್‌ ರೋಮನ್‌ ಸಾಮ್ರಾಜ್ಯದ ರಾಷ್ಟ್ರೀಯ ಧರ್ಮ ಆಯ್ತು. ಅದರ ಫಲಿತಾಂಶವಾಗಿ ವಿಧರ್ಮಿ ಆಚರಣೆ ಮಾಡುತ್ತಿದ್ದ ತುಂಬ ಜನ ನಾಮಮಾತ್ರದ ಕ್ರೈಸ್ತರಾದರು. ಚರ್ಚ್‌ ಸಹ ಬೈಬಲ್‌ನಲ್ಲಿ ಇಲ್ಲದ ತ್ರಿಯೇಕ ಬೋಧನೆಯನ್ನು ಸ್ವೀಕರಿಸಿತು.

ಈ ತ್ರಿಯೇಕ ಬೋಧನೆಯಿಂದ ಚರ್ಚ್‌ನಲ್ಲಿರೋ ಅನೇಕರು ಯೇಸು ದೇವರಾಗಿದ್ದರೆ ಮರಿಯ ದೇವರ ತಾಯಿ ಆಗಿರಲೇಬೇಕು ಅನ್ನೋ ನಿರ್ಣಯಕ್ಕೆ ಬಂದರು. ಕ್ರಿ.ಶ. 431 ರಲ್ಲಿ ಎಫೆಸದಲ್ಲಿರೋ ಚರ್ಚ್‌ನ ಸದಸ್ಯರು ಮರಿಯ “ದೇವರ ತಾಯಿ” ಅಂತ ಪ್ರಕಟಿಸಿದರು. ಈ ಪ್ರಕಟನೆಯ ನಂತರ ಮರಿಯಳ ಆರಾಧನೆ ಅಂದರೆ ಅವಳನ್ನ ದೇವತೆಯಾಗಿ ಆರಾಧಿಸೋದು ಹೆಚ್ಚಾಯ್ತು. ವಿಧರ್ಮಿ ಆಚರಣೆ ಮಾಡುತ್ತಿದ್ದ ಜನರು ಚರ್ಚಿಗೆ ಸೇರಿದ ನಂತರ ಹೋಗ್ತಾಹೋಗ್ತಾ ಸಂತಾನೋತ್ಪತಿ ದೇವದತೆಯಾದ ಅರ್ತೆಮೀ (ರೋಮ್‌ನ ಡಯಾನಾ) ಮತ್ತು ಐಸಿಸ್‌ ದೇವತೆಯ ಮೂರ್ತಿಗಳ ಬದಲು ಕನ್ಯೆ ಮರಿಯಳ ಮೂರ್ತಿ ಮತ್ತು ಚಿತ್ರಗಳನ್ನ ಆರಾಧಿಸೋಕೆ ಶುರು ಮಾಡಿದ್ದರು.

ಕ್ರಿ.ಶ. 432 ರಲ್ಲಿ IIIನೆಯ ಪೋಪ್‌ ಸಿಕ್ಸ್‌ಟಸ್‌ ರೋಮ್‌ನಲ್ಲಿ ‘ದೇವರ ತಾಯಿಗೆ’ ಗೌರವ ಕೊಡಲು ಒಂದು ಚರ್ಚ್‌ ಕಟ್ಟುವಂತೆ ಆಜ್ಞೆ ಕೊಟ್ಟನು. ಈ ಚರ್ಚ್‌ ಅನ್ನು ರೋಮ್‌ನ ಸಂತಾನೋತ್ಪತಿ ದೇವತೆಯಾದ ಲೂಸಿನಾ ಆಲಯದ ಹತ್ತಿರ ಕಟ್ಟಲಾಯಿತು. ಈ ಚರ್ಚ್‌ ಬಗ್ಗೆ ಒಬ್ಬ ಲೇಖಕಿ ಹೀಗೆ ಹೇಳ್ತಾಳೆ, “ರೋಮ್‌ ಪಟ್ಟಣ ಕ್ರೈಸ್ತೀಕರಣವಾದ ನಂತರ, ಈ ಚರ್ಚಿನ ವಿಧರ್ಮಿ ಗುಂಪುಗಳು ಮಹಾನ್‌ ತಾಯಿ ಆರಾಧನೆಯನ್ನು ಮರಿಯ ಆರಾಧನೆಯಾಗಿ ಬದಲಾಯಿಸಿದವು.”—ಮೇರಿ—ದಿ ಕಂಪ್ಲೀಟ್‌ ರಿಸೋರ್ಸ್‌.

a ಅನೇಕ ಕ್ರೈಸ್ತ ಪಂಗಡದವರು ಮರಿಯಳು ದೇವರ ತಾಯಿ ಅಂತ ಕಲಿಸ್ತಾರೆ. ಅವರು ಮರಿಯಳನ್ನ “ಸ್ವರ್ಗದ ರಾಣಿ” ಅಥವಾ ತಿಯೋಟೊಕೊಸ್‌ ಅಂತ ಕರಿತಾರೆ. ಗ್ರೀಕ್‌ನಲ್ಲಿ ತಿಯೋಟೊಕೊಸ್‌ಗೆ ಇರೋ ಅರ್ಥ “ದೇವರನ್ನು-ಹೊತ್ತವಳು” ಎಂದಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ