ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 160
  • ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ಯೇಸು ಭೂಮಿಯಲ್ಲಿ ಹುಟ್ಟೋದಕ್ಕಿಂತ ಮುಂಚೆ ಸ್ವರ್ಗದಲ್ಲಿದ್ನಾ?
  • ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಏನು ಮಾಡ್ತಿದ್ದ?
  • ಯೇಸು ಕ್ರಿಸ್ತನು ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೇಸು ಕ್ರಿಸ್ತನು ಯಾರು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೇಸು ಯಾರು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಯೇಸು ಕ್ರಿಸ್ತ ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 160
ಯೇಸು ಸ್ವರ್ಗದಲ್ಲಿರೋ ತನ್ನ ಅಪ್ಪನ ಹತ್ರ ಪ್ರಾರ್ಥನೆ ಮಾಡ್ತಿದ್ದಾನೆ

ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ?

ಬೈಬಲ್‌ ಕೊಡೋ ಉತ್ತರ

ಬೈಬಲ್‌ ಯೇಸುನ ತುಂಬ ಸಲ “ದೇವರ ಮಗ” ಅಂತ ಕರೆಯುತ್ತೆ. (ಯೋಹಾನ 1:49) ಅದರರ್ಥ ದೇವರೇ ಜೀವದ ಮೂಲ. ಯೇಸುನ, ಎಲ್ಲಾ ಜೀವಿಗಳನ್ನ ಆತನೇ ಸೃಷ್ಟಿ ಮಾಡಿದ. (ಕೀರ್ತನೆ 36:9; ಪ್ರಕಟನೆ 4:11) ಯೇಸು ದೇವರ ಮಗ ಅಂದ್ರೆ ಮನುಷ್ಯರಿಗೆ ಹೇಗೆ ಮಕ್ಕಳು ಹುಟ್ಟುತ್ತೋ ಆ ರೀತಿ ಹುಟ್ಟಿದ ಮಗ ಅಲ್ಲ ಅಂತ ಬೈಬಲ್‌ ಹೇಳುತ್ತೆ.

ಬೈಬಲ್‌ ದೇವದೂತರನ್ನ ಕೂಡ ‘ದೇವರ ಮಕ್ಕಳು’ ಅಂತ ಕರೆಯುತ್ತೆ. (ಯೋಬ 38:6, ಪಾದಟಿಪ್ಪಣಿ) ಮೊದಲ ಮನುಷ್ಯ ಆದಾಮನನ್ನು “ದೇವರ ಮಗ” ಅಂತ ಹೇಳುತ್ತೆ. (ಲೂಕ 3:38) ಯೇಸು ದೇವರ ಮೊದಲ ಸೃಷ್ಟಿ. ದೇವರ ಕೈಯಿಂದ ನೇರವಾಗಿ ಸೃಷ್ಟಿಯಾಗಿರೋದು ಆತನೊಬ್ಬನೇ ಆಗಿರೋದ್ರಿಂದ ಬೈಬಲ್‌ ಯೇಸುನ ದೇವರ ಮಗ ಅಂತ ಕರೆಯುತ್ತೆ.

  • ಯೇಸು ಭೂಮಿಯಲ್ಲಿ ಹುಟ್ಟೋದಕ್ಕಿಂತ ಮುಂಚೆ ಸ್ವರ್ಗದಲ್ಲಿದ್ನಾ?

  • ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಏನು ಮಾಡ್ತಿದ್ದ?

ಯೇಸು ಭೂಮಿಯಲ್ಲಿ ಹುಟ್ಟೋದಕ್ಕಿಂತ ಮುಂಚೆ ಸ್ವರ್ಗದಲ್ಲಿದ್ನಾ?

ಹೌದು, ಸ್ವರ್ಗದಲ್ಲಿದ್ದನು. ಯೇಸು ಮನುಷ್ಯನಾಗಿ ಭೂಮಿಯಲ್ಲಿ ಹುಟ್ಟೋದಕ್ಕಿಂತ ಮುಂಚೆ ಸ್ವರ್ಗದಲ್ಲಿ ಆತ್ಮಜೀವಿಯಾಗಿದ್ದನು. ನಾನು “ಸ್ವರ್ಗದಿಂದ” ಬಂದಿದ್ದೀನಿ ಅಂತ ಸ್ವತಃ ಆತನೇ ಹೇಳಿದ.— ಯೋಹಾನ 6:38; 8:23.

ದೇವರು ಎಲ್ಲವನ್ನ ಸೃಷ್ಟಿ ಮಾಡೋದಕ್ಕಿಂತ ಮುಂಚೆ ಯೇಸುನ ಸೃಷ್ಟಿ ಮಾಡಿದನು. ಯೇಸು ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ,

  • “ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು ಆತನೇ.”—ಕೊಲೊಸ್ಸೆ 1:15.

  • ಆತನು “ದೇವರು ಮೊದಲು ಸೃಷ್ಟಿ ಮಾಡಿದವನು” ಆಗಿದ್ದಾನೆ.—ಪ್ರಕಟನೆ 3:14.

“ಅವನ ಆರಂಭ ಪ್ರಾಚೀನ ಕಾಲದಲ್ಲಿ, ಲೆಕ್ಕ ಇಲ್ಲದಷ್ಟು ವರ್ಷಗಳ ಹಿಂದೆನೇ ಆಗಿತ್ತು” ಅನ್ನೋ ಪ್ರವಾದನೆಯನ್ನ ನೆರವೇರಿಸಿದನು.—ಮೀಕ 5:2; ಮತ್ತಾಯ 2:4-6.

ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಏನು ಮಾಡ್ತಿದ್ದ?

ಯೇಸುಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನ ಇತ್ತು. ಇದ್ರ ಬಗ್ಗೆ ಯೇಸು ಪ್ರಾರ್ಥನೆ ಮಾಡೋವಾಗ “ಅಪ್ಪಾ . . . ಲೋಕ ಹುಟ್ಟೋದಕ್ಕಿಂತ ಮುಂಚೆ ನಿನ್ನ ಪಕ್ಕದಲ್ಲಿದ್ದಾಗ ನನಗೆ ಯಾವ ಗೌರವ ಸಿಗ್ತಿತ್ತೋ ಆ ಗೌರವ ಮತ್ತೆ ಸಿಗೋ ತರ ಮಾಡು” ಅಂತ ಹೇಳಿದನು.—ಯೋಹಾನ 17:5.

ಎಲ್ಲವನ್ನು ಸೃಷ್ಟಿ ಮಾಡೋದ್ರಲ್ಲಿ ಯೇಸು ಯೆಹೋವ ದೇವ್ರಿಗೆ ಸಹಾಯ ಮಾಡಿದನು. ದೇವರ ಜೊತೆ “ನಿಪುಣ ಕೆಲಸಗಾರನ ತರ” ಕೆಲ್ಸ ಮಾಡಿದನು. (ಜ್ಞಾನೋಕ್ತಿ 8:30) ಯೇಸು ಬಗ್ಗೆ ಬೈಬಲ್‌, ‘ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು ಆತನಿಂದಾನೇ, ಆತನಿಗಾಗಿ ಸೃಷ್ಟಿ ಆಯ್ತು” ಅಂತ ಹೇಳುತ್ತೆ.—ಕೊಲೊಸ್ಸೆ 1:16.

ದೇವರು ಎಲ್ಲವನ್ನು ಸೃಷ್ಟಿ ಮಾಡೋಕೆ ಯೇಸುನ ಉಪಯೋಗಿಸಿದನು. ಅದ್ರಲ್ಲಿ ದೇವದೂತರು, ಇಡೀ ವಿಶ್ವ ಸೇರಿದೆ. (ಪ್ರಕಟನೆ 5:11) ಇವರಿಬ್ರ ಕೆಲ್ಸ ಇಂಜಿನೀಯರ್‌ ಮತ್ತು ಮೇಸ್ತ್ರಿ ಕೆಲ್ಸ ಮಾಡೋ ತರ ಇತ್ತು. ಇಂಜಿನೀಯರ್‌ ಮನೆನಾ ಹೇಗೆ ಕಟ್ಬೇಕು ಅಂತ ಡಿಸೈನ್‌ ಮಾಡ್ತಾನೆ, ಮೇಸ್ತ್ರಿ ಆ ಡಿಸೈನ್‌ ಪ್ರಕಾರ ಮನೆ ಕಟ್ತಾನೆ.

ಯೇಸು ವಾಕ್ಯವಾಗಿ ಕೆಲ್ಸ ಮಾಡಿದನು. ಬೈಬಲಿನಲ್ಲಿ ಯೇಸು ಮನುಷ್ಯನಾಗಿ ಹುಟ್ಟೋದಕ್ಕಿಂತ ಮುಂಚೆ ಆತನನ್ನ “ವಾಕ್ಯ” ಅಂತ ಕರೆಯಲಾಗಿದೆ. (ಯೋಹಾನ 1:1) ಅದರರ್ಥ ದೇವರು ಯೇಸುನ ಬೇರೆ ದೇವದೂತರಿಗೆ ಮಾಹಿತಿ ಮತ್ತು ಮಾರ್ಗದರ್ಶನೆಯನ್ನು ಕೊಡಲು ಉಪಯೋಗಿಸಿದನು.

ಯೇಸು ಮನುಷ್ಯರ ಹತ್ರ ಮಾತಾಡೋವಾಗ ದೇವರ ಪ್ರತಿನಿಧಿಯಾಗಿ ಮಾತಾಡಿದನು. ದೇವರು ಏದೆನ್‌ ತೋಟದಲ್ಲಿ ಆದಾಮ ಮತ್ತು ಹವ್ವಗೆ ಮಾರ್ಗದರ್ಶನ ಕೊಡೋವಾಗ ಯೇಸು ಮೂಲಕ ಮಾತಾಡಿದನು. (ಆದಿಕಾಂಡ 2:16, 17) ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಅವ್ರಿಗೆ ದಾರಿ ತೋರಿಸಿದ, ತನ್ನ ಮಾತನ್ನ ಕೇಳಬೇಕು ಅಂತ ಹೇಳಿದ ದೇವದೂತ ಯೇಸುನೇ ಆಗಿರಬೇಕು.—ವಿಮೋಚನಕಾಂಡ 23:20-23.a

a ದೇವರು ಯಾವಾಗ್ಲೂ ಯೇಸು ಮೂಲಕ ಮಾತ್ರ ಮಾತಾಡ್ಲಿಲ್ಲ. ಉದಾಹರಣೆಗೆ, ಇಸ್ರಾಯೇಲ್ಯರಿಗೆ ಮಾರ್ಗದರ್ಶನ ಕೊಡಲು ಬೇರೆ ದೇವದೂತರನ್ನ ಕೂಡ ಉಪಯೋಗಿಸಿದನು.—ಅಪೊಸ್ತಲರ ಕಾರ್ಯ 7:53; ಗಲಾತ್ಯ 3:19; ಇಬ್ರಿಯ 2:2, 3.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ