ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwwd ಅಧ್ಯಾ. 16
  • ಕತ್ತಲಲ್ಲಿ ಕಣ್ಣಾಗಿರೋ ಬಾವಲಿಯ ಕಿವಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕತ್ತಲಲ್ಲಿ ಕಣ್ಣಾಗಿರೋ ಬಾವಲಿಯ ಕಿವಿ!
  • ವಿಕಾಸವೇ? ವಿನ್ಯಾಸವೇ?
  • ಅನುರೂಪ ಮಾಹಿತಿ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1991
  • ಪರಿವಿಡಿ
    ಎಚ್ಚರ!—2010
ವಿಕಾಸವೇ? ವಿನ್ಯಾಸವೇ?
ijwwd ಅಧ್ಯಾ. 16
ಗುಹೆಯೊಳಗೆ ಹಾರಾಡುತ್ತಿರೋ ಬಾವಲಿ.

ವಿಕಾಸವೇ? ವಿನ್ಯಾಸವೇ?

ಕತ್ತಲಲ್ಲಿ ಕಣ್ಣಾಗಿರೋ ಬಾವಲಿಯ ಕಿವಿ!

ಬಾವಲಿಗಳಿಗೆ ಕಣ್ಣು ಕಾಣುತ್ತೆ ನಿಜ. ಆದ್ರೆ ಕತ್ತಲಲ್ಲಿ ತನ್ನ ಸುತ್ತಮುತ್ತ ಏನಿದೆ ಅಂತ ತಿಳಿದುಕೊಳ್ಳಲಿಕ್ಕಾಗಿ ಹೆಚ್ಚಿನ ಜಾತಿಯ ಬಾವಲಿಗಳು ಪ್ರತಿಧ್ವನಿಯ (ಎಕೋಲೊಕೇಶನ್‌) ಸಹಾಯ ಪಡೆಯುತ್ತವೆ. ಬಾವಲಿ ಶಬ್ಧವನ್ನ ಹೊರಪಡಿಸಿದಾಗ ಅದು ಸುತ್ತಮುತ್ತ ಇರೋ ವಸ್ತುಗಳ ಮೇಲೆ ಬಡಿಯುತ್ತೆ. ಆ ಶಬ್ಧ ವಾಪಸ್‌ ಬಂದಾಗ ಆ ವಸ್ತು ಎಷ್ಟು ದೂರದಲ್ಲಿದೆ ಅಂತ ಬಾವಲಿ ಗುರುತಿಸುತ್ತೆ. ಉದಾಹರಣೆಗೆ, ಕೆಲವು ಬಾವಲಿಗಳು ಸೊಳ್ಳೆಯ ಮತ್ತು ಜೀರುಂಡೆಯ ರೆಕ್ಕೆ ಬಡಿತವನ್ನ ಗಮನಿಸಿ ಅದು ಯಾವ ಜೀವಿ ಅಂತ ಗುರುತಿಸುತ್ತೆ.

ಯೋಚಿಸಿ ನೋಡಿ: ಹೆಚ್ಚಿನ ಬಾವಲಿಗಳು ತನ್ನ ಧ್ವನಿ ಪೆಟ್ಟಿಗೆಯಿಂದ ಬರೋ ಶಬ್ಧವನ್ನ ಬಾಯಿ ಅಥವಾ ಮೂಗಿನಿಂದ ಹೊರಪಡಿಸುತ್ತವೆ. ಆ ಶಬ್ಧ ವಾಪಸ್‌ ಬಂದಾಗ ತನ್ನ ದೊಡ್ಡ ಕಿವಿಗಳನ್ನ ಬಳಸಿ ಆ ಶಬ್ಧಗಳನ್ನ ಗ್ರಹಿಸುತ್ತವೆ. ಇಂಥ ಪ್ರತಿಧ್ವನಿಗಳ ಸಹಾಯದಿಂದ ಬಾವಲಿಗಳು ಮನಸ್ಸಿನಲ್ಲಿ ತಮ್ಮ ಸುತ್ತಮುತ್ತಲಿರೋ ವಸ್ತುಗಳ 3D ಚಿತ್ರಣವನ್ನ ಕಲ್ಪಿಸಿಕೊಳ್ಳುತ್ತವೆ. ತಮ್ಮ ಸುತ್ತಲಿರೋ ಒಂದು ವಸ್ತು ಯಾವ ಜಾಗದಲ್ಲಿದೆ, ಅದರ ಆಕಾರ ಹೇಗಿದೆ, ಎಷ್ಟು ದೂರದಲ್ಲಿದೆ ಅಂತ ಅವು ಸ್ಪಷ್ಟವಾಗಿ ಕಂಡುಹಿಡಿಯುತ್ತೆ. ತುಂಬ ಬಾವಲಿಗಳು ಒಟ್ಟಿಗೆ ಶಬ್ಧ ಮಾಡ್ತಿದ್ರೂ ಒಂದು ಬಾವಲಿಗೆ ಸುತ್ತಮುತ್ತ ಏನೆಲ್ಲಾ ಇದೆ ಅಂತ ಚೆನ್ನಾಗಿ ಗುರುತಿಸೋಕಾಗುತ್ತೆ.

ಬಾವಲಿ ಪ್ರತಿಧ್ವನಿಯನ್ನ ನಿಖರವಾಗಿ ಗುರುತಿಸಲಿಲ್ಲ ಅಂದ್ರೆ ಅದಕ್ಕೆ ತನ್ನ ಸುತ್ತಮುತ್ತ ಇರೋ ವಸ್ತುಗಳನ್ನ ಕಂಡುಹಿಡಿಯೋಕೆ ಕಷ್ಟವಾಗುತ್ತೆ. ಶಬ್ಧವನ್ನ ಗುರುತಿಸೋದ್ರಲ್ಲಿ ಕೇವಲ 1 ಮಿಲಿ ಸೆಕೆಂಡಷ್ಟು ಚಿಕ್ಕ (1 ಸೆಕೆಂಡಿನ 1000 ಪಾಲಿನಲ್ಲಿ ಒಂದು) ವ್ಯತ್ಯಾಸವಾದ್ರೂ ಬಾವಲಿಗೆ ವಸ್ತುವನ್ನ ಕಂಡುಹಿಡಿಯೋದ್ರಲ್ಲಿ 17 ಸೆಂಟಿಮೀಟರ್‌ನಷ್ಟು (6.7 ಇಂಚು) ಗುರಿ ತಪ್ಪಿಹೋಗಬಹುದು. 1 ಮಿಲಿ ಸೆಕೆಂಡಿಗಿಂತ ಹೆಚ್ಚು ನಿಖರತೆಯನ್ನ ಗುರುತಿಸೋದು “ಅಸಾಧ್ಯ” ಅಂತ ಕೆಲವು ಸಂಶೋಧಕರು ಹೇಳ್ತಾರೆ. ಆಶ್ಚರ್ಯಕರ ವಿಷಯವೇನಂದ್ರೆ , 10 ನ್ಯಾನೋ ಸೆಕೆಂಡ್‌ನಷ್ಟು (1 ಸೆಕೆಂಡಿನ 10 ಕೋಟಿ ಪಾಲಿನಲ್ಲಿ ಒಂದು) ಚಿಕ್ಕ ವ್ಯತ್ಯಾಸ ಇದ್ರೂ ಆ ವಸ್ತುವಿನ ದೂರ ಎಷ್ಟು ಅಂತ ಬಾವಲಿಗಳು ಸ್ಪಷ್ಟವಾಗಿ, ಚಾಚೂತಪ್ಪದೆ ಗುರುತಿಸುತ್ತವೆ ಅಂತ ಸಂಶೋಧಕರು ತಿಳಿಸಿದ್ದಾರೆ!

ಕಣ್ಣು ಕಾಣದವ್ರಿಗೆ ಸಹಾಯ ಮಾಡಲಿಕ್ಕಾಗಿ ಸಂಶೋಧಕರು ಒಂದು ಎಲೆಕ್ಟ್ರಾನಿಕ್‌ ಕೇನ್‌ (ಕೋಲು) ಅನ್ನು ಕಂಡುಹಿಡಿದಿದ್ದಾರೆ. ಈ ಕೋಲು ಪ್ರತಿಧ್ವನಿಯ ಸಹಾಯದಿಂದ ಸುತ್ತಲಿರೋ ವಸ್ತುಗಳನ್ನ ಗುರುತಿಸೋಕೆ ಅಂಧರಿಗೆ ಸಹಾಯ ಮಾಡುತ್ತೆ. ಅದು ತಲೆ ಎತ್ತರದಲ್ಲಿರೋ ವಸ್ತುಗಳನ್ನ ಅಂದ್ರೆ ಮರದ ಕೊಂಬೆಗಳನ್ನೂ ಗುರುತಿಸಬಲ್ಲದು. “ಬಾವಲಿಯ ಪ್ರತಿಧ್ವನಿಯನ್ನ ಗ್ರಹಿಸೋ ಸಾಮರ್ಥ್ಯನೇ ಈ ರೀತಿಯ ಕೋಲುಗಳನ್ನ ನಿರ್ಮಿಸೋಕೆ ಪ್ರೇರಣೆ” ಅಂತ ಇದರ ನಿರ್ಮಾಪಕರಾದ ಬ್ರೈಯನ್‌ ಹೊಯಲ್‌ ಮತ್ತು ಡೀನ್‌ ವೊಟರ್ಸ್‌ ಹೇಳ್ತಾರೆ. ಈ ಕೋಲಿನ ಹೆಸರು ಬ್ಯಾಟ್‌ಕೇನ್‌ ಅಂದ್ರೆ ಬಾವಲಿಕೋಲು!

ಒಬ್ಬ ಕುರುಡ ಎಲೆಕ್ಟ್ರಾನಿಕ್‌ ಕೇನ್‌ನ ಸಹಾಯದಿಂದ ನಡೆಯುತ್ತಿದ್ದಾನೆ. ಪ್ರತಿಧ್ವನಿಯ ಸಹಾಯದಿಂದ ಕೆಲಸ ಮಾಡುವ ಕೇನ್‌ ಅವನ ಮುಂದಿರುವ ಬೆಂಕಿಯನ್ನ ನಂದಿಸುವ ಸಾಧನವನ್ನ ಗುರುತಿಸಿ ಅವನಿಗೆ ಎಚ್ಚರಿಕೆಯನ್ನ ಕೊಡ್ತಿದೆ.

ನಿಮಗೇನು ಅನಿಸುತ್ತೆ? ಬಾವಲಿಯ ಪ್ರತಿಧ್ವನಿಯನ್ನ ಗ್ರಹಿಸೋ ಸಾಮರ್ಥ್ಯ ಇದ್ದಕ್ಕಿದ್ದ ಹಾಗೆ ಬಂತಾ? ಅಥವಾ ದೇವರು ಸೃಷ್ಟಿ ಮಾಡಿದ್ರಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ