21 ಆ ಕ್ಷಣದಲ್ಲೇ ದೇವರು ಆತನಿಗೆ ಪವಿತ್ರಶಕ್ತಿ ಕೊಟ್ಟಿದ್ರಿಂದ ಯೇಸುಗೆ ತುಂಬ ಖುಷಿ ಆಯ್ತು. ಹಾಗಾಗಿ ಯೇಸು “ಅಪ್ಪಾ, ಭೂಮಿ ಆಕಾಶದ ಒಡೆಯನೇ, ನಿನ್ನನ್ನ ಎಲ್ರ ಮುಂದೆ ಹೊಗಳ್ತೀನಿ. ಯಾಕಂದ್ರೆ ನೀನು ಈ ವಿಷ್ಯಗಳನ್ನ ವಿದ್ಯಾವಂತರಿಗೆ+ ಹೇಳದೆ ಚಿಕ್ಕ ಮಕ್ಕಳಿಗೆ ಹೇಳಿದ್ದೀಯ. ಅಪ್ಪಾ, ಅದೇ ನಿನ್ನ ಇಷ್ಟ ಆಗಿತ್ತು”+ ಅಂದನು.