14 ಆದ್ರೆ ಇವರು ಯಾವುದನ್ನ ‘ಹೊಸ ಧರ್ಮ’ ಅಂತ ಕರಿತಾ ಇದ್ದಾರೋ ಆ ‘ದೇವ್ರ ಮಾರ್ಗಕ್ಕೆ’ ನಾನು ಸೇರಿದವನು ಅಂತ ನಿನ್ನ ಮುಂದೆ ಧೈರ್ಯವಾಗಿ ಒಪ್ಕೊಳ್ತೀನಿ. ಆ ಮಾರ್ಗದ ಪ್ರಕಾರ ನಾನು ನಮ್ಮ ಪೂರ್ವಜರ ದೇವ್ರಿಗೆ ಪವಿತ್ರ ಸೇವೆ ಸಲ್ಲಿಸ್ತಾ ಇದ್ದೀನಿ.+ ಯಾಕಂದ್ರೆ ನಿಯಮ ಪುಸ್ತಕದಲ್ಲಿ ಮತ್ತು ಪ್ರವಾದಿಗಳ ಗ್ರಂಥದಲ್ಲಿ ಬರೆದಿರೋ ಎಲ್ಲ ವಿಷ್ಯಗಳನ್ನ ನಾನು ನಂಬ್ತೀನಿ.+