18 ಇದನ್ನೆಲ್ಲ ನಾನು ದೇವಾಲಯದಲ್ಲಿ ಮಾಡ್ತಿದ್ದಾಗ ಅವರು ನನ್ನನ್ನ ನೋಡಿದ್ರು. ನಾನು ದೇವಾಲಯದ ಒಳಗೆ ಬರೋ ಮುಂಚೆನೇ ಪದ್ಧತಿ ಪ್ರಕಾರ ಶುದ್ಧ ಮಾಡ್ಕೊಂಡಿದ್ದೆ.+ ನನ್ನ ಜೊತೆ ದೊಡ್ಡ ಗುಂಪೇನೂ ಇರಲಿಲ್ಲ. ನಾನು ಅಲ್ಲಿ ಏನೂ ತೊಂದ್ರೆ ಮಾಡಿಲ್ಲ. ಆದ್ರೆ ನನ್ನ ಜೊತೆ ಏಷ್ಯಾ ಪ್ರದೇಶದಿಂದ ಬಂದ ಕೆಲವು ಯೆಹೂದ್ಯರು ಇದ್ರು.