3 ಪ್ರೀತಿಯ ಸಹೋದರ ಸಹೋದರಿಯರೇ, ನಮ್ಮೆಲ್ಲರಿಗೂ ಸಿಗೋ ರಕ್ಷಣೆ+ ಬಗ್ಗೆ ಬರಿಬೇಕು ಅಂತ ಮೊದ್ಲು ಅಂದ್ಕೊಂಡೆ. ಆದ್ರೆ ಅದನ್ನ ಹೇಳೋ ಮುಂಚೆ ಇನ್ನೊಂದು ವಿಷ್ಯ ಹೇಳಬೇಕು. ಅದೇನಂದ್ರೆ ನಿಮಗೆ ಸಿಕ್ಕಿರೋ ನಂಬಿಕೆಗೋಸ್ಕರ ನೀವು ತುಂಬ ಕಷ್ಟಪಟ್ಟು ಹೋರಾಟ ಮಾಡ್ತಾ ಇರಿ.+ ಯಾಕಂದ್ರೆ ಆ ನಂಬಿಕೆ ಪವಿತ್ರ ಜನ್ರಿಗೆ ಒಂದೇ ಒಂದು ಸಾರಿ ಸಿಕ್ಕಿದ್ರೂ ಶಾಶ್ವತವಾಗಿ ಉಳಿಯುತ್ತೆ.