12 ಇವರು ಸ್ನೇಹಿತರ ಹಾಗೆ ನಿಮ್ಮ ಜೊತೆ ಕೂತು ಊಟ ಮಾಡ್ತಾರೆ.+ ಆದ್ರೆ ಅವರು ನೀರಿನ ಒಳಗೆ ಕಾಣಿಸ್ದೇ ಇರೋ ಬಂಡೆಗಳು. ತಮ್ಮ ಹೊಟ್ಟೆ ತುಂಬಿದ್ರೆ ಸಾಕು ಅಂದ್ಕೊಳ್ಳೋ ನಾಚಿಕೆ ಇಲ್ಲದ ಕುರುಬರು.+ ಗಾಳಿಗೆ ಆಕಡೆ ಈಕಡೆ ತೇಲಿಹೋಗೋ ನೀರಿಲ್ಲದ ಮೋಡಗಳು.+ ಹಣ್ಣುಬಿಡೋ ಕಾಲದಲ್ಲಿ ಹಣ್ಣುಬಿಡದೆ ಪೂರ್ತಿ ಸತ್ತು ಬೇರುಸಮೇತ ಬಿದ್ದುಹೋಗಿರೋ ಮರಗಳು.