7 ಅವಳು ತುಂಬ ಜಂಬ ಕೊಚ್ಕೊಂಡಳು. ನಾಚಿಕೆ ಇಲ್ಲದೆ ಆಸ್ತಿಪಾಸ್ತಿಯನ್ನ ಅನುಭವಿಸಿದಳು. ಹಾಗಾಗಿ ಅವಳಿಗೆ ಅಷ್ಟೇ ಹಿಂಸೆ ಕೊಡಿ. ಅವಳು ಚೆನ್ನಾಗಿ ಅಳೋ ತರ ಮಾಡಿ. ಯಾಕಂದ್ರೆ ಅವಳು ಮನಸ್ಸಲ್ಲಿ ‘ನಾನು ಸಿಂಹಾಸನದಲ್ಲಿ ಕೂತಿರೋ ರಾಣಿ, ವಿಧವೆ ಅಲ್ಲ. ದುಃಖಪಡೋ ಪರಿಸ್ಥಿತಿ ನನಗೆ ಯಾವತ್ತೂ ಬರಲ್ಲ’+ ಅಂತ ಅಂದ್ಕೊಳ್ತಿದ್ದಾಳೆ.