ಪಾದಟಿಪ್ಪಣಿ
a ಪೋರ್ಚುಗೀಸರು ಮತ್ತು ಸ್ಪೇನಿನವರು ಇಸವಿ 1494ರಲ್ಲಿ, ಟೋರ್‌ಡಿಸಿಲಾಸ್ ಒಪ್ಪಂದಕ್ಕೆ ಸಹಿಹಾಕಿದಾಗ, ಇವರಿಬ್ಬರು ದಕ್ಷಿಣ ಅಟ್ಲಾಂಟಿಕ್‌ನ ಪಶ್ಚಿಮಭಾಗದಲ್ಲಿರುವ ಭೂಮಿಯನ್ನು ಹಂಚಿಕೊಂಡರು. ಆದುದರಿಂದ, ಈಗಾಗಲೇ ಪೋರ್ಚುಗಲ್‌ಗೆ ಗೊತ್ತುಪಡಿಸಲಾಗಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಶ್ಚಿತ ಉದ್ದೇಶದಿಂದ ಕಬ್ರಾಲ್‌ನು ಅಲ್ಲಿಗೆ ಹೊರಟನೆಂಬುದಾಗಿಯೂ ಕೆಲವರು ಹೇಳುತ್ತಾರೆ.