ಪಾದಟಿಪ್ಪಣಿ
d ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಪುರುಷನು ಒಬ್ಬಾಕೆ ಕನ್ಯೆಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿದ್ದಲ್ಲಿ ಅವನು ಅವಳನ್ನೇ ಮದುವೆಯಾಗಬೇಕಿತ್ತು. (ಧರ್ಮೋಪದೇಶಕಾಂಡ 22:28, 29) ಹೀಗಿದ್ದರೂ, ಅವರಿಬ್ಬರೂ ಮದುವೆ ಆಗಲೇಬೇಕೆಂಬ ನಿರ್ಬಂಧ ಇರಲಿಲ್ಲ, ಯಾಕೆಂದರೆ ಹೆಣ್ಣಿನ ತಂದೆಯು ಮದುವೆಗೆ ಒಪ್ಪದೆ ಇರಬಹುದಿತ್ತು. (ವಿಮೋಚನಕಾಂಡ 22:16, 17) ಇಂದಿರುವ ಕ್ರೈಸ್ತರು ಧರ್ಮಶಾಸ್ತ್ರದ ಕೆಳಗೆ ಇಲ್ಲದಿರುವುದಾದರೂ, ಮದುವೆಯ ಮುಂಚೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವುದು ಎಷ್ಟೊಂದು ಗಂಭೀರವಾದ ಪಾಪವಾಗಿದೆಯೆಂಬುದನ್ನು ಆ ನಿಯಮವು ಒತ್ತಿಹೇಳುತ್ತದೆ.—ನವೆಂಬರ್ 15, 1989ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿರಿ.