ಪಾದಟಿಪ್ಪಣಿ
c ಯೆಹೋವನ ಸಾಕ್ಷಿಗಳಾಗಿರುವ ದಂಪತಿಗಳು ಮಗು ಹುಟ್ಟುವ ಮುಂಚೆಯೇ ಸ್ಥಳೀಯ ‘ಹಾಸ್ಪಿಟಲ್ ಲಿಏಸಾನ್ ಕಮಿಟಿ’ (ಏಚ್.ಎಲ್.ಸಿ.) ಅನ್ನು ಸಂಪರ್ಕಿಸಬೇಕು. ಇದು ಯೆಹೋವನ ಸಾಕ್ಷಿಗಳಿಗಾಗಿರುವ ಒಂದು ಏರ್ಪಾಡು. ಈ ಕಮಿಟಿಯ ಸದಸ್ಯರು ಆಸ್ಪತ್ರೆಗಳನ್ನೂ ಡಾಕ್ಟರರನ್ನೂ ಭೇಟಿಯಾಗಿ ತಮ್ಮವರಿಗೆ ಕೊಡಬೇಕಾದ ರಕ್ತರಹಿತ ಔಷಧೋಪಚಾರದ ಬಗ್ಗೆ ವೈದ್ಯಕೀಯ ಮಾಹಿತಿಯನ್ನು ಒದಗಿಸುತ್ತಾರೆ. ಮಾತ್ರವಲ್ಲ, ರೋಗಿಯ ನಂಬಿಕೆಗಳನ್ನು ಮಾನ್ಯಮಾಡಿ ರಕ್ತರಹಿತ ಔಷಧೋಪಚಾರವನ್ನು ಕೊಡುವುದರಲ್ಲಿ ಅನುಭವೀ ವೈದ್ಯರನ್ನು ಕಂಡುಹಿಡಿಯಲು ನೆರವಾಗುತ್ತಾರೆ.