ಪಾದಟಿಪ್ಪಣಿ
a “ಯೆಹೋವ” ಎಂಬುದು ಯೆಹೋವನ ಸಾಕ್ಷಿಗಳೇ ಕಲ್ಪಿಸಿಕೊಂಡಿರುವ ಹೆಸರಲ್ಲ. ಬೈಬಲನ್ನು ಬರೆಯಲಾದ ಭಾಷೆಗಳಲ್ಲಿ ಅಲ್ಲದೆ ಬೇರೆ ಹಲವಾರು ಭಾಷೆಗಳಲ್ಲೂ ದೇವರ ಹೆಸರನ್ನು “ಯೆಹೋವ” ಎಂದು ಶತಮಾನಗಳ ಹಿಂದೆಯೇ ಭಾಷಾಂತರಿಸಲಾಗಿತ್ತು. ಉದಾಹರಣೆಗೆ, 1865ರ ‘ಹಳೆ ಹೊಸ ಒಡಂಬಡಿಕೆಗಳು ಅಡಗಿರುವ ದೇವರ ವಾಕ್ಯವು’ ಎಂಬ ಬೈಬಲ್ ಅನುವಾದದಲ್ಲೂ ಯೆಹೋವನ ಹೆಸರನ್ನು ಬಳಸಲಾಗಿದೆ. ದುಃಖದ ಸಂಗತಿಯೇನೆಂದರೆ, ಆಧುನಿಕ ಕಾಲದ ಕೆಲವೊಂದು ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನು ತೆಗೆಯಲಾಗಿದ್ದು, ಅದರ ಸ್ಥಾನದಲ್ಲಿ ಬರೀ “ದೇವರು,” “ಕರ್ತನು,” “ಸರ್ವೇಶ್ವರ” ಎಂಬ ಬಿರುದುಗಳನ್ನು ಹಾಕಲಾಗಿದೆ. ಹೀಗೆ, ಬೈಬಲಿನ ಗ್ರಂಥಕರ್ತನಿಗೆ ಘೋರ ಅಗೌರವವನ್ನು ತೋರಿಸಲಾಗಿದೆ.