ಪಾದಟಿಪ್ಪಣಿ
c ಅನೇಕ ಭಾಷಾಂತರಗಳು ಈ ಪದಗುಚ್ಛವನ್ನು “ಜಯಿಸಲು” (ರಿವೈಸ್ಡ್ ಸ್ಟ್ಯಾಂಡರ್ಡ್, ದ ನ್ಯೂ ಇಂಗ್ಲಿಷ್ ಬೈಬಲ್, ಕಿಂಗ್ ಜೇಮ್ಸ್ ವರ್ಷನ್) ಅಥವಾ “ಜಯಿಸಲು ಪಟ್ಟು ಹಿಡಿ” (ಫಿಲಿಪ್ಸ್, ನ್ಯೂ ಇಂಟರ್‌ನ್ಯಾಷನಲ್ ವರ್ಷನ್) ಎಂದು ಭಾಷಾಂತರಿಸಿದರೂ, ಇಲ್ಲಿ ಮೂಲ ಗ್ರೀಕಿನ ಅನಿಶ್ಚಿತ ಭೂತಕಾಲದ ಸಂಭಾವನಾ ರೂಪದ ಉಪಯೋಗವು ಪೂರ್ಣತೆ ಯಾ ಕೊನೆ ಎಂಬ ಅರ್ಥವನ್ನು ಕೊಡುತ್ತದೆ. ಆದಕಾರಣ, ರೋಬರ್ಟ್‌ಸನ್‌ರ ವರ್ಡ್ ಪಿಕ್ಜರ್ಸ್ ಇನ್ ದ ನ್ಯೂ ಟೆಸ್ಟಮೆಂಟ್ ಹೇಳಿಕೆ ನೀಡುವುದು: “ಇಲ್ಲಿ ಅನಿಶ್ಚಿತ ಭೂತಕಾಲದ ರೂಪವು ಕಟ್ಟಕಡೆಯ ವಿಜಯವನ್ನು ಸೂಚಿಸುತ್ತದೆ.”