ಪಾದಟಿಪ್ಪಣಿ
c ತ್ರಯೈಕ್ಯದ ಕಲ್ಪನೆಯು, ಎಲ್ಲಿ ಸೂರ್ಯ ದೇವತೆ ಶಮಾಷ್, ಚಂದ್ರ ದೇವತೆ ಸಿನ್ ಮತ್ತು ನಕ್ಷತ್ರ ದೇವತೆ ಇಷ್ಟಾರ್ —ಇವರು ತ್ರಯೈಕ್ಯವಾಗಿ ಆರಾಧಿಸಲ್ಪಡುತ್ತಿದ್ದರೋ ಆ ಪ್ರಾಚೀನ ಬಾಬೆಲಿನಿಂದ ಹೊರಚಿಗುರಿ ಬಂತು. ಐಗುಪ್ತವು ಅದೇ ನಮೂನೆಯನ್ನು ಹಿಂಬಾಲಿಸಿ, ಒಸೈರಿಸ್, ಐಸಿಸ್, ಮತ್ತು ಹೋರಸ್ ಇವರನ್ನು ಆರಾಧಿಸಿತು. ಅಶ್ಶೂರ್ಯದ ಪ್ರಧಾನ ದೇವರಾದ ಅಶ್ಶೂರನು ಮೂರು ತಲೆಗಳುಳ್ಳವನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಅದೇ ನಮೂನೆಯನ್ನು ಹಿಂಬಾಲಿಸುತ್ತಾ, ದೇವರನ್ನು ಮೂರು ತಲೆಗಳುಳ್ಳದ್ದಾಗಿ ಚಿತ್ರಿಸುವ ವಿಗ್ರಹಗಳನ್ನು ಕ್ಯಾತೊಲಿಕ್ ಚರ್ಚುಗಳಲ್ಲಿ ಕಂಡುಕೊಳ್ಳಬಹುದು.