ಪಾದಟಿಪ್ಪಣಿ
a ಈ ರೆಜಿಸ್ಟ್ರೇಶನ್, ರೋಮನ್ ಸಾಮ್ರಾಜ್ಯವು ಕಂದಾಯ ವಸೂಲಿಯನ್ನು ಹೆಚ್ಚು ಉತ್ತಮವಾಗಿ ಮಾಡುವಂತೆ ಸಾಧ್ಯಮಾಡಿತು. ಹೀಗೆ ಔಗುಸ್ತನು, ‘ರಾಜ್ಯವನ್ನು ದೋಚಿಕೊಳ್ಳುವ’ ಒಬ್ಬ ಪ್ರಭುವಿನ ಕುರಿತ ಪ್ರವಾದನೆ ನೆರವೇರುವಂತೆ ಅರಿವಿಲ್ಲದೆ ಸಹಾಯ ಮಾಡಿದನು. ಅದೇ ಪ್ರವಾದನೆಯು, “ನಿಬಂಧನಾಧಿಪತಿ,” ಅಥವಾ ಮೆಸ್ಸೀಯನು, ಆ ಪ್ರಭುವಿನ ಉತ್ತರಾಧಿಕಾರಿಯ ದಿನಗಳಲ್ಲಿ “ಭಂಗ” ವಾಗುವನೆಂದೂ ಮುಂತಿಳಿಸಿತು. ಯೇಸುವು ಔಗುಸ್ತನ ಉತ್ತರಾಧಿಕಾರಿ ತಿಬೇರಿಯನ ಆಳಿಕೆಯ ಸಮಯದಲ್ಲಿ ಕೊಲ್ಲಲ್ಪಟ್ಟನು.—ದಾನಿಯೇಲ 11:20-22.