ಪಾದಟಿಪ್ಪಣಿ
c ಸಿ. ಎಫ್. ಕೈಲ್ ಮತ್ತು ಎಫ್. ಡೆಲಿಟ್ಶ್ ಬರೆದ ಕಾಮೆಂಟರಿ ಆನ್ ದಿ ಓಲ್ಡ್ ಟೆಸ್ಟಮೆಂಟ್ ಹೇಳುವುದು: “ಪ್ರವಾದಿಯ ಪ್ರವಚನದ ಒಂದು ಭಾಗ ಇಲ್ಲಿ ಅಂತ್ಯಗೊಳ್ಳುತ್ತದೆ. ಈ ಸ್ಥಳದಲ್ಲಿ ಅದು ಎರಡು ವಿಭಾಗಗಳಾಗಿರುವ ನಿಜತ್ವವು, 9 ಮತ್ತು 10ನೆಯ ವಚನಗಳ ಮಧ್ಯೆ ಜಾಗ ಬಿಟ್ಟಿರುವುದರಿಂದ ಸೂಚಿತವಾಗುತ್ತದೆ. ದೊಡ್ಡ ಅಥವಾ ಚಿಕ್ಕ ವಿಭಾಗಗಳನ್ನು ಜಾಗ ಬಿಟ್ಟೊ ಗೆರೆ ಮುರಿದೊ ಗುರುತಿಸುವ ಈ ವಿಧಾನವು, ಸ್ವರಾಕ್ಷರ ಮತ್ತು ಸ್ವರಚಿಹ್ನೆಗಳಿಗಿಂತ ಹಳೆಯದಾಗಿದ್ದು ಪ್ರಾಚೀನತೆಯ ಅತಿ ಶ್ರೇಷ್ಠ ಸಂಪ್ರದಾಯದ ಮೇಲೆ ಆಧಾರಿತವಾಗಿದೆ.”