ಪಾದಟಿಪ್ಪಣಿ
a ‘ಯೆಹೋವನ ಚಿಗುರು’ ಎಂಬ ಪದಸರಣಿಯು, ಯೆರೂಸಲೇಮಿನ ಪುನಸ್ಸ್ಥಾಪನೆಯಾಗಿ ಸಮಯಾನಂತರ ತೋರಿಬರಲಿದ್ದ ಮೆಸ್ಸೀಯನಿಗೆ ಪರೋಕ್ಷವಾಗಿ ಸೂಚಿಸುತ್ತದೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಆರಮೇಯಿಕ್ ಟಾರ್ಗುಮ್‌ಗಳಲ್ಲಿ ಈ ಪದಸರಣಿಯ ಅರ್ಥವಿಸ್ತರಣೆಯನ್ನು “ಯೆಹೋವನ ಮೆಸ್ಸೀಯ [ಕ್ರಿಸ್ತ]” ಎಂದು ಮಾಡಲಾಗಿದೆ. ಆಸಕ್ತಿಕರವಾಗಿ, ಯೆರೆಮೀಯನು ಆ ಬಳಿಕ, ಮೆಸ್ಸೀಯನು ದಾವೀದನೆಂಬ ಮೂಲದಿಂದ ಚಿಗುರುವ “ಸದ್ಧರ್ಮಿಯಾದ ಮೊಳಕೆ” ಎಂದು ತಿಳಿಸುವಾಗ ಅದೇ ಹೀಬ್ರು ನಾಮಪದವನ್ನು (ಟ್ಸೇಮಾಕ್) ಉಪಯೋಗಿಸುತ್ತಾನೆ.—ಯೆರೆಮೀಯ 23:5; 33:15.