ಪಾದಟಿಪ್ಪಣಿ
a ಯೆಶಾಯ 9:8–10:4ರಲ್ಲಿ ನಾಲ್ಕು ಚರಣಗಳಿವೆ (ಲಯಬದ್ಧ ಭಾಗದ ಬೇರೆ ಬೇರೆ ವರ್ಗಗಳು). ಪ್ರತಿಯೊಂದು ಚರಣದ ಕೊನೆಯಲ್ಲಿ, “ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ” ಎಂಬ ಪುನರಾವರ್ತನವಾಗುವ ಭಯಸೂಚಕ ಹೇಳಿಕೆಯಿದೆ. (ಯೆಶಾಯ 9:12, 17, 21; 10:4) ಈ ರೀತಿಯ ಶೈಲಿಯು, ಯೆಶಾಯ 9:8–10:4ನ್ನು ಒಂದು ಸಂಯುಕ್ತ ‘ಮಾತಾಗಿ’ ಕೂಡಿಸಿದೆ. (ಯೆಶಾಯ 9:8) ಯೆಹೋವನ ‘ಕೈ ಎತ್ತಿಯೇ ಇರುವುದು’ ರಾಜಿಮಾಡಿಕೊಳ್ಳಲಿಕ್ಕಾಗಿ ಅಲ್ಲ, ನ್ಯಾಯತೀರಿಸಲಿಕ್ಕಾಗಿಯೇ ಎಂಬುದನ್ನು ಸಹ ಗಮನಿಸಿರಿ.—ಯೆಶಾಯ 9:13.