ಪಾದಟಿಪ್ಪಣಿ
b “ಗುರಾಣಿಗೆ ಎಣ್ಣೆಯನ್ನು ಬಳಿ” ಎಂಬ ಪದಗಳು, ಪುರಾತನ ಮಿಲಿಟರಿ ರೂಢಿಯನ್ನು ಸೂಚಿಸುತ್ತಿರಬಹುದೆಂದು ಅನೇಕ ಬೈಬಲ್ ವ್ಯಾಖ್ಯಾನಗಾರರು ನೆನಸುತ್ತಾರೆ. ಯುದ್ಧದ ಮೊದಲು ಸೈನಿಕರು ಚರ್ಮದಿಂದ ಮಾಡಿರುವ ಗುರಾಣಿಗಳಿಗೆ ಎಣ್ಣೆಯನ್ನು ಸವರುತ್ತಿದ್ದರು. ಹೀಗೆ ಗುರಾಣಿಗೆ ಬೀಳುವ ಹೊಡೆತಗಳು ಜಾರಿಬಿಡುತ್ತಿದ್ದವು. ಇದು ಒಂದು ವಿವರಣೆಯಾಗಿದೆ. ಆದರೆ ಅದೇ ಸಮಯದಲ್ಲಿ, ಬಾಬೆಲು ಬಿದ್ದಾಗ, ಅದರ ಸೈನಿಕರು ತಮ್ಮ ಗುರಾಣಿಗಳಿಗೆ ಎಣ್ಣೆ ಸವರಿ ಯುದ್ಧಕ್ಕೆ ಸಿದ್ಧರಾಗುವುದಂತೂ ಬಿಡಿ, ವೈರಿಗಳನ್ನು ಪ್ರತಿಭಟಿಸಲೂ ಅವರಿಗೆ ಸಮಯವಿರಲಿಲ್ಲ ಎಂಬುದನ್ನು ಗಮನಿಸಸಾಧ್ಯವಿದೆ!