ಪಾದಟಿಪ್ಪಣಿ
c ಬಾಬೆಲಿನ ಪತನದ ಬಗ್ಗೆ ಯೆಶಾಯನ ಪ್ರವಾದನೆಯು ಎಷ್ಟು ನಿಖರವಾಗಿದೆಯೆಂದರೆ, ಆ ಘಟನೆಯು ಸಂಭವಿಸಿದ ನಂತರವೇ ಅದು ಬರೆಯಲ್ಪಟ್ಟಿರಬೇಕೆಂದು ಕೆಲವು ಬೈಬಲ್ ವಿಮರ್ಶಕರು ನೆನಸುತ್ತಾರೆ. ಆದರೆ ಹೀಬ್ರು ಪಂಡಿತನಾದ ಎಫ್. ಡೆಲಿಟ್ಷ್ ಹೇಳುವುದೇನೆಂದರೆ, ಘಟನೆಗಳನ್ನು ನೂರಾರು ವರ್ಷಗಳ ಮುಂಚಿತವಾಗಿಯೇ ತಿಳಿಸುವಂತೆ ಒಬ್ಬ ಪ್ರವಾದಿಯು ಪ್ರೇರಿಸಲ್ಪಡಬಹುದು ಎಂಬ ನಿಜತ್ವವನ್ನು ನಾವು ಅಂಗೀಕರಿಸಿದರೆ, ಇಂತಹ ಊಹೆಗಳನ್ನು ಮಾಡುವ ಅಗತ್ಯವೇ ಇರುವುದಿಲ್ಲ.