ಪಾದಟಿಪ್ಪಣಿ
c “ಬಾಧಿತನು” ಎಂದು ಭಾಷಾಂತರಿಸಲ್ಪಟ್ಟಿರುವ ಪದವು, ಕುಷ್ಠರೋಗದ ವಿಷಯದಲ್ಲಿಯೂ ಉಪಯೋಗಿಸಲ್ಪಟ್ಟಿದೆ. (2 ಅರಸುಗಳು 15:5) ಕೆಲವು ವಿದ್ವಾಂಸರಿಗನುಸಾರ, ಕೆಲವು ಮಂದಿ ಯೆಹೂದ್ಯರು ಯೆಶಾಯ 53:4ರಿಂದ ಮೆಸ್ಸೀಯನು ಕುಷ್ಠರೋಗಿಯಾಗಿರುವನೆಂಬ ವಿಚಾರವನ್ನು ಗ್ರಹಿಸಿದರು. ಬ್ಯಾಬಿಲೋನ್ಯನ್ ಟಾಲ್ಮುಡ್ ಈ ವಚನವನ್ನು ಮೆಸ್ಸೀಯನಿಗೆ ಅನ್ವಯಿಸಿ, ಅವನನ್ನು “ಕುಷ್ಠರೋಗಿ ಪಂಡಿತ”ನೆಂದು ಕರೆಯುತ್ತದೆ. ಕ್ಯಾಥಲಿಕ್ ಡೂಏ ವರ್ಷನ್ ಬೈಬಲ್, ಲ್ಯಾಟಿನ್ ವಲ್ಗೇಟ್ ತರ್ಜುಮೆಯನ್ನು ಅನುಸರಿಸಿ ಈ ವಚನವನ್ನು, “ನಾವು ಅವನನ್ನು ಕುಷ್ಠರೋಗಿಯಾಗಿ ಪರಿಗಣಿಸಿದ್ದೇವೆ” ಎಂದು ಭಾಷಾಂತರಿಸಿದೆ.