ಪಾದಟಿಪ್ಪಣಿ
a “ನಪುಂಸಕ” ಎಂಬ ಪದವು, ಲೈಂಗಿಕ ಅಂಗಚ್ಛೇದನಕ್ಕೆ ಸೂಚಿತವಾಗಿರದೇ, ಅರಸನ ಆಸ್ಥಾನದ ಅಧಿಕಾರಿ (ಕಂಚುಕಿ)ಗೂ ಅನ್ವಯಿಸತೊಡಗಿತು. ಫಿಲಿಪ್ಪನು ದೀಕ್ಷಾಸ್ನಾನ ಮಾಡಿಸಿದ ಐಥಿಯೋಪ್ಯದ ವ್ಯಕ್ತಿಯು ಮತಾವಲಂಬಿಯಾಗಿದ್ದದರಿಂದ, ಅವನು ಈ ಅರ್ಥದಲ್ಲಿ ನಪುಂಸಕ (ಕಂಚುಕಿ)ನಾಗಿದ್ದಿರಬೇಕು. ಸುನ್ನತಿಯಾಗಿರದ ಯೆಹೂದ್ಯೇತರರಿಗೆ ದಾರಿಯು ತೆರೆಯಲ್ಪಡುವ ಮೊದಲೇ ಅವನು ದೀಕ್ಷಾಸ್ನಾನ ಪಡೆದನು.—ಅ. ಕೃತ್ಯಗಳು 8:27-39.