ಪಾದಟಿಪ್ಪಣಿ
a ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ “(ಒಬ್ಬ ಆಪ್ತಮಿತ್ರ ಅಥವಾ ಸಹೋದರನ ಬಗ್ಗೆ ಇರುವಂತೆ) ಮಮತೆಯಿರುವುದು, ಒಲುಮೆಯಿರುವುದು, ಇಲ್ಲವೆ ಇಷ್ಟಪಡುವುದು” ಎಂಬ ಅರ್ಥವುಳ್ಳ ಕ್ರಿಯಾಪದವಾದ ಫೀಲಿಯಾವನ್ನು ಅನೇಕವೇಳೆ ಉಪಯೋಗಿಸಲಾಗುತ್ತದೆ. ಆಪ್ತ ಕೌಟುಂಬಿಕ ಪ್ರೀತಿ ಅಥವಾ ಸ್ಟಾರ್ಘೀ ಎಂಬ ಪದದ ಒಂದು ರೂಪವು 2 ತಿಮೊಥೆಯ 3:3 ರಲ್ಲಿ ಉಪಯೋಗಿಸಲ್ಪಟ್ಟಿದ್ದು, ಕಡೇ ದಿವಸಗಳಲ್ಲಿ ಈ ರೀತಿಯ ಪ್ರೀತಿಯ ಕೊರತೆ ಬಹಳಷ್ಟಿರುವುದೆಂಬುದನ್ನು ಅದು ತೋರಿಸುತ್ತದೆ. ಈರಾಸ್ ಅಥವಾ ಗಂಡುಹೆಣ್ಣಿನ ನಡುವಣ ಪ್ರಣಯಪ್ರೇಮದ ಪದವು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಉಪಯೋಗಿಸಲ್ಪಟ್ಟಿಲ್ಲವಾದರೂ, ಆ ರೀತಿಯ ಪ್ರೇಮವು ಬೈಬಲಿನಲ್ಲಿ ಚರ್ಚಿಸಲ್ಪಟ್ಟಿದೆ.—ಜ್ಞಾನೋಕ್ತಿ 5:15-20.