ಪಾದಟಿಪ್ಪಣಿ
b ಇತರ ಶಾಸ್ತ್ರೀಯ ಹೇಳಿಕೆಗಳಲ್ಲಿಯೂ ಇದಕ್ಕೆ ಹೋಲುವಂಥ ಪದರಚನೆಯಿದೆ. ಉದಾಹರಣೆಗೆ, “ದೇವರು ಬೆಳಕಾಗಿದ್ದಾನೆ” ಮತ್ತು “ದೇವರು . . . ದಹಿಸುವ ಅಗ್ನಿಯಾಗಿದ್ದಾನೆ.” (1 ಯೋಹಾನ 1:5; ಇಬ್ರಿಯ 12:29) ಆದರೆ ಇವನ್ನು ರೂಪಕಾಲಂಕಾರಗಳಾಗಿ ಅರ್ಥಮಾಡಿಕೊಳ್ಳಬೇಕು, ಯಾಕಂದರೆ ಅವು ಯೆಹೋವನನ್ನು ಭೌತಿಕ ವಸ್ತುಗಳಿಗೆ ಹೋಲಿಸುತ್ತವೆ. ಯೆಹೋವನು ಬೆಳಕಿನ ಹಾಗೆ ಇದ್ದಾನೆ ಯಾಕೆಂದರೆ ಆತನು ಪವಿತ್ರನೂ ಶುದ್ಧನೂ ಆಗಿದ್ದಾನೆ. ಆತನಲ್ಲಿ ಯಾವ “ಕತ್ತಲೆ” ಅಥವಾ ಅಶುದ್ಧತೆಯೂ ಇಲ್ಲ. ಮತ್ತು ಆತನು ನಾಶಕಾರಕ ಶಕ್ತಿಯನ್ನು ಉಪಯೋಗಿಸುವುದರಿಂದ ಆತನನ್ನು ಅಗ್ನಿಗೆ ಹೋಲಿಸಬಹುದಾಗಿದೆ.