ಪಾದಟಿಪ್ಪಣಿ
a ಕುಷ್ಠರೋಗಿಯ ಸಮೀಪ ನಾಲ್ಕು ಕ್ಯೂಬಿಟ್‌ಗಳ (ಸುಮಾರು ಆರು ಅಡಿ) ಅಂತರದೊಳಗೆ ಯಾರೂ ಬರಬಾರದೆಂದು ಯೆಹೂದಿ ರಬ್ಬಿಗಳ ನಿಯಮಗಳು ವಿಧಿಸಿದ್ದವು. ಆದರೆ ಜೋರಾಗಿ ಗಾಳಿ ಬೀಸುತ್ತಿದ್ದಲ್ಲಿ, ಕುಷ್ಠರೋಗಿಯಿಂದ ಕಡಿಮೆಪಕ್ಷ 100 ಕ್ಯೂಬಿಟ್‌ಗಳು (ಸುಮಾರು 150 ಅಡಿ) ದೂರವಿರಬೇಕಿತ್ತು. ಕುಷ್ಠರೋಗಿಗಳನ್ನು ಕಂಡು ಅಡಗಿಕೊಳ್ಳುತ್ತಿದ್ದ ಒಬ್ಬ ರಬ್ಬಿಯ ಕುರಿತು ಮತ್ತು ಅವರನ್ನು ದೂರವಿಡಲು ಅವರಿಗೆ ಕಲ್ಲುಗಳನ್ನೆಸೆಯುತ್ತಿದ್ದ ಇನ್ನೊಬ್ಬನ ಕುರಿತು ಮಿದ್ರಾಶ್ ರಾಬ್ಬಾ ತಿಳಿಸುತ್ತದೆ. ಹೀಗೆ ತಿರಸ್ಕರಿಸಲ್ಪಟ್ಟಿರುವುದರ ನೋವು ಏನೆಂಬುದು ಕುಷ್ಠರೋಗಿಗಳಿಗೆ ತಿಳಿದಿತ್ತು, ಮತ್ತು ತುಚ್ಛೀಕರಿಸಲ್ಪಟ್ಟು, ತಾವು ಯಾರಿಗೂ ಬೇಡದವರಾಗಿದ್ದೇವೆಂಬ ಭಾವನೆಯನ್ನು ಅವರು ಅನುಭವಿಸಿದ್ದರು.