ಪಾದಟಿಪ್ಪಣಿ
b ಕೆಲವು ಪುರಾತನ ಹಸ್ತಪ್ರತಿಗಳಲ್ಲಿ ಲೂಕ 23:34 ರ ಮೊದಲ ಭಾಗವು ಬಿಟ್ಟುಬಿಡಲ್ಪಟ್ಟಿದೆ. ಆದರೂ, ಈ ಮಾತುಗಳು ಬೇರೆ ಅನೇಕ ಅಧಿಕೃತ ಹಸ್ತಪ್ರತಿಗಳಲ್ಲಿ ಕಂಡುಬರುವುದರಿಂದ, ಅವುಗಳನ್ನು ನೂತನ ಲೋಕ ಭಾಷಾಂತರದಲ್ಲಿ (ಇಂಗ್ಲಿಷ್) ಮತ್ತು ಇತರ ಹಲವಾರು ಭಾಷಾಂತರಗಳಲ್ಲಿ ಒಳಗೂಡಿಸಲಾಗಿದೆ. ಯೇಸು ಅಲ್ಲಿ ತನ್ನನ್ನು ಕಂಬಕ್ಕೆ ಜಡಿದಿದ್ದ ರೋಮನ್ ಸೈನಿಕರ ಕುರಿತು ಮಾತಾಡುತ್ತಿದ್ದನೆಂಬುದು ವ್ಯಕ್ತ. ಯೇಸು ನಿಜವಾಗಿ ಯಾರು ಎಂಬ ಅರಿವು ಇಲ್ಲದಿದ್ದ ಅವರಿಗೆ ತಾವೇನು ಮಾಡುತ್ತಿದ್ದೇವೆಂಬುದು ತಿಳಿದಿರಲಿಲ್ಲ. ಆ ವಧೆಯನ್ನು ಚಿತಾಯಿಸಿದ್ದ ಧಾರ್ಮಿಕ ಮುಖಂಡರು ಎಷ್ಟೋ ಹೆಚ್ಚು ದೋಷಪಾತ್ರರಾಗಿದ್ದರು, ಯಾಕಂದರೆ ಅವರು ಬುದ್ಧಿಪೂರ್ವಕವಾಗಿ ಮತ್ತು ಹಗೆಸಾಧನೆಯಿಂದ ಆ ಕೃತ್ಯವೆಸಗಿದ್ದರು. ಅವರಲ್ಲಿ ಹೆಚ್ಚಿನವರಿಗೆ ಕ್ಷಮಾಪಣೆ ನೀಡುವುದು ಅಶಕ್ಯವಾಗಿತ್ತು.—ಯೋಹಾನ 11:45-53.