ಪಾದಟಿಪ್ಪಣಿ
a ಯೇಸು ತನ್ನನ್ನು ಹಿಂಬಾಲಿಸಿದ ಪ್ರತಿಯೊಬ್ಬರಿಗೂ ಸ್ವತ್ತುಗಳನ್ನು ಮಾರಿಬನ್ನಿ ಎಂದು ಹೇಳಲಿಲ್ಲ. ದೇವರ ರಾಜ್ಯವನ್ನು ಹಣವಂತರು ಸೇರುವುದು ಕಷ್ಟಕರವೆಂದು ಹೇಳಿದರೂ, “ದೇವರಿಗೆ ಎಲ್ಲವೂ ಸಾಧ್ಯ” ಎಂದು ಸಹ ಅವನು ಹೇಳಿದನು. (ಮಾರ್ಕ 10:23, 27) ಅಷ್ಟೇ ಅಲ್ಲ, ಕೆಲವು ಐಶ್ವರ್ಯವಂತ ಜನರು ಕ್ರಿಸ್ತನ ಹಿಂಬಾಲಕರಾದರು. ಕ್ರೈಸ್ತ ಸಭೆಯಲ್ಲಿ ಅಂಥವರಿಗೆ ಐಶ್ವರ್ಯದ ಕುರಿತು ನಿರ್ದಿಷ್ಟ ಸಲಹೆಗಳನ್ನು ಕೊಡಲಾಯಿತಾದರೂ ತಮ್ಮ ಎಲ್ಲ ಸಂಪತ್ತನ್ನು ಬಡವರಿಗೆ ದಾನಮಾಡಿ ಎಂಬುದಾಗಿ ಹೇಳಲಾಗಿಲ್ಲ.—1 ತಿಮೊಥೆಯ 6:17.