ಪಾದಟಿಪ್ಪಣಿ
a ಸೀಸ ಮತ್ತು ಚಿನ್ನ ಮೂಲವಸ್ತುಗಳ ಆವರ್ತ ಕೋಷ್ಟಕದಲ್ಲಿ ಹತ್ತಿರ ಹತ್ತಿರ ಬರುತ್ತವೆ ಎಂಬುದು ರಸಾಯನಶಾಸ್ತ್ರದ ವಿದ್ಯಾರ್ಥಿಗಳಿಗೆ ಗೊತ್ತಿರುತ್ತದೆ. ಅವುಗಳ ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಚಿನ್ನಕ್ಕಿಂತ ಸೀಸದಲ್ಲಿ ಮೂರು ಪ್ರೋಟಾನ್‌ಗಳು ಹೆಚ್ಚಿವೆಯಷ್ಟೇ. ಆಧುನಿಕ ಕಾಲದ ಭೌತವಿಜ್ಞಾನಿಗಳು ಸ್ವಲ್ಪಪ್ರಮಾಣದಲ್ಲಿ ಸೀಸವನ್ನು ಚಿನ್ನವಾಗಿ ಪರಿವರ್ತಿಸಿದ್ದಾರೆ. ಆದರೆ ಅದಕ್ಕೆ ತಗಲಿದ ಶ್ರಮ ಹಾಗೂ ಖರ್ಚು ಅಷ್ಟಿಷ್ಟಲ್ಲ.