ಪಾದಟಿಪ್ಪಣಿ
a ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರುವುದು ಮಾತ್ರವೇ ಯಾವಾಗಲೂ ಸಾಕಾಗುವುದಿಲ್ಲ ಎಂದು ಬೈಬಲ್ ತೋರಿಸುತ್ತದೆ. ಉದಾಹರಣೆಗೆ ಪೌಲನು ಹೇಳಿದ್ದು: “ನನಗೇ ವಿರುದ್ಧವಾಗಿರುವ ಯಾವುದರ ಪ್ರಜ್ಞೆಯೂ ನನಗಿಲ್ಲ. ಆದರೂ ಇದರಿಂದ ನಾನು ನೀತಿವಂತನೆಂದು ರುಜುವಾಗುವುದಿಲ್ಲ; ನನ್ನನ್ನು ಪರೀಕ್ಷಿಸುವವನು ಯೆಹೋವನೇ ಆಗಿದ್ದಾನೆ.” (1 ಕೊರಿಂಥ 4:4) ಪೌಲನು ಈ ಮುಂಚೆ ಮಾಡುತ್ತಿದ್ದಂತೆಯೇ ಕ್ರೈಸ್ತರನ್ನು ಹಿಂಸಿಸುವವರು ಸಹ ಶುದ್ಧ ಮನಸ್ಸಾಕ್ಷಿಯಿಂದ ಅದನ್ನು ಮಾಡಬಹುದು; ಏಕೆಂದರೆ ತಮ್ಮ ಮಾರ್ಗಕ್ರಮವನ್ನು ದೇವರು ಒಪ್ಪುತ್ತಾನೆ ಎಂದು ಅವರು ನೆನಸಬಹುದು. ಆದುದರಿಂದ ನಮ್ಮ ಮನಸ್ಸಾಕ್ಷಿ ನಮ್ಮ ದೃಷ್ಟಿಯಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಶುದ್ಧವಾಗಿರುವುದು ಅತಿ ಪ್ರಾಮುಖ್ಯ.—ಅಪೊಸ್ತಲರ ಕಾರ್ಯಗಳು 23:1; 2 ತಿಮೊಥೆಯ 1:3.