ಪಾದಟಿಪ್ಪಣಿ
g ಈ ಘಟನೆ ಆದಮೇಲಿಂದ ಸೌಲನಿಗೆ ಪೌಲ ಅನ್ನೋ ಹೆಸ್ರು ಬಂತು. ಕೆಲವರು ಈ ರೋಮನ್ ಹೆಸ್ರನ್ನ ಸೆರ್ಗ್ಯ ಪೌಲನ ಸ್ಮರಣೆಗಾಗಿ ಸೌಲ ಸ್ವೀಕರಿಸಿದ ಅಂತ ಹೇಳ್ತಾರೆ. ಆದ್ರೆ ಸೈಪ್ರಸ್‌ನಿಂದ ಬಂದ ಮೇಲೂ ಅವನು ತನ್ನನ್ನ ಸೌಲ ಅಂತ ಕರೆಸ್ಕೊಳ್ತಿದ್ದ. ಇದ್ರಿಂದ ಅವನು ಸೆರ್ಗ್ಯನಿಗೆ ಗೌರವ ಕೊಡಬೇಕು ಅಂತ ಅವನು ಇದನ್ನ ಬಳಸಿಲ್ಲ ಅಂತ ಗೊತ್ತಾಗುತ್ತೆ. ಆದ್ರೆ ಅವನು “ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ ಇರೋದ್ರಿಂದ” ಪೌಲ ಅನ್ನೋ ರೋಮನ್ ಹೆಸ್ರನ್ನ ಬಳಸೋಕೆ ನಿರ್ಧಾರ ಮಾಡಿದ. ಇದನ್ನ ಬಳಸೋಕೆ ಇನ್ನೊಂದು ಕಾರಣನೂ ಇತ್ತು. ಅದೇನಂದ್ರೆ ಸೌಲ ಅನ್ನೋ ಅವನ ಹೀಬ್ರು ಹೆಸ್ರಿನ ಗ್ರೀಕ್ ಉಚ್ಚಾರಣೆ ಕೆಟ್ಟ ಅರ್ಥ ಇದ್ದ ಒಂದು ಗ್ರೀಕ್ ಪದಕ್ಕೆ ತುಂಬ ಹೋಲುತ್ತಿತ್ತು.—ರೋಮ. 11:13.