ಪಾದಟಿಪ್ಪಣಿ
a ಜೈವಿಕ ಪದವಾಗಿರೋ ಫೈಲಾ ಅಂದರೆ (ಏಕವಚನದಲ್ಲಿ ಫೈಲಮ್), ಒಂದೇ ರೀತಿಯ ಶರೀರ ಇರೋ ಪ್ರಾಣಿಗಳ ದೊಡ್ಡ ಗುಂಪು. ಪ್ರಾಣಿಗಳನ್ನ ಮತ್ತು ಗಿಡಗಳನ್ನ ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅವು ಹೀಗಿವೆ: ಸಾಮ್ರಾಜ್ಯ (ಕಿಂಗ್‌ಡಮ್), ವಂಶ (ಫೈಲಮ್), ವರ್ಗ (ಕ್ಲಾಸ್), ಗಣ (ಆರ್ಡರ್), ಕುಟುಂಬ (ಫ್ಯಾಮಿಲಿ), ಜಾತಿ (ಜೀನಸ್) ಮತ್ತು ಪ್ರಭೇದ (ಸ್ಪೀಶಿಸ್). ಉದಾಹರಣೆಗೆ ಕುದುರೆಯ ವರ್ಗೀಕರಣ ಹೀಗಿದೆ- ಸಾಮ್ರಾಜ್ಯ: ಅನಿಮೇಲಿಯಾ; ವಂಶ: ಕೊರ್ಡಾಟಾ; ವರ್ಗ: ಮಾಮಿಲಿಯ; ಗಣ: ಪೆರಿಸೊಡಕ್ಟೈಲ; ಕುಟುಂಬ: ಇಕ್ವಿಡೇ; ಜಾತಿ: ಇಕ್ವಸ್; ಪ್ರಭೇದ: ಕ್ಯಾಬಲಸ್.