ಪಾದಟಿಪ್ಪಣಿ
a ಯೆಹೂದ್ಯರು ಶತ್ರುಗಳನ್ನು ಪೂರ್ತಿಯಾಗಿ ಸೋಲಿಸಲು ರಾಜನು ಅವರಿಗೆ ಇನ್ನೊಂದು ದಿನ ಕೊಟ್ಟನು. (ಎಸ್ತೇ. 9:12-14) ಆ ವಿಜಯವನ್ನು ಯೆಹೂದ್ಯರು ಇವತ್ತಿಗೂ ಪ್ರತಿ ವರ್ಷ ಎಡಾರ್ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ತಿಂಗಳು ನಮ್ಮ ಕ್ಯಾಲೆಂಡರಿನಲ್ಲಿ ಫೆಬ್ರವರಿ ತಿಂಗಳ ಕೊನೆ ಭಾಗದಿಂದ ಹಿಡಿದು ಮಾರ್ಚ್ ತಿಂಗಳ ಆರಂಭ ಭಾಗದ ವರೆಗೆ ಇರುತ್ತದೆ. ಈ ಹಬ್ಬದ ಹೆಸರು ಪ್ಯೂರಿಮ್. ಏಕೆಂದರೆ ಇಸ್ರಾಯೇಲ್ಯರನ್ನು ನಾಶಮಾಡಲಿಕ್ಕಾಗಿ ಹಾಮಾನನು ಪೂರ್ ಅಥವಾ ಚೀಟಿ ಹಾಕಿದ್ದನು.