ಪಾದಟಿಪ್ಪಣಿ
c ಲೂಕ ಬರೆದ ಸುವಾರ್ತಾ ಪುಸ್ತಕದಲ್ಲಿ ಯೇಸು ಕ್ರಿಸ್ತನಿಗೆ ಬಂದ ಈ ಮೂರು ಪರೀಕ್ಷೆಗಳನ್ನ ಬೇರೆ ಕ್ರಮದಲ್ಲಿ ಕೊಡಲಾಗಿದೆ. ಆದ್ರೆ ಮತ್ತಾಯ ಈ ಪರೀಕ್ಷೆಗಳು ಹೇಗೆ ನಡೆದವೋ ಅದೇ ಕ್ರಮದಲ್ಲಿ ಬರೆದಿದ್ದಾನೆ. ಇದು ನಮಗೆ ಹೇಗೆ ಗೊತ್ತಾಗುತ್ತೆ? (1) ಮತ್ತಾಯ ಎರಡನೇ ಪರೀಕ್ಷೆ ಬಗ್ಗೆ ತಿಳಿಸುವಾಗ “ಆಮೇಲೆ” ಅಂತ ಹೇಳಿದ್ದಾನೆ. ಅದ್ರ ಅರ್ಥ ಒಂದನೇ ಪರೀಕ್ಷೆ ಆದ್ಮೇಲೆ ಎರಡನೇ ಪರೀಕ್ಷೆ ಬಂತು ಅಂತ ಅರ್ಥ. (2) “ನೀನು ದೇವರ ಮಗನಾಗಿದ್ರೆ” ಅಂತ ಹೇಳ್ತಾ ಸೈತಾನ ಮಾತಾಡೋಕೆ ಶುರುಮಾಡಿದ ಪರೀಕ್ಷೆಗಳೇ ಅವನು ತಂದ ಮೊದಲ ಎರಡು ಪರೀಕ್ಷೆಗಳಾಗಿವೆ. ಸೈತಾನ ಈ ಎರಡೂ ಪರೀಕ್ಷೆಗಳಲ್ಲಿ ಕುತಂತ್ರದಿಂದ ಮಾತಾಡಿದ್ದಾನೆ. ಆ ಕುತಂತ್ರ ಮಣ್ಣುಪಾಲಾದಾಗ ನೇರವಾಗಿ ಯೇಸುವಿಗೆ ದಶಾಜ್ಞೆಯಲ್ಲಿರೋ ಮೊದಲನೇ ಆಜ್ಞೆಯನ್ನ ಮುರಿಯೋಕೆ ಹೇಳಿರುತ್ತಾನೆ. (ವಿಮೋ. 20:2, 3) (3) ಯೇಸು ಯಾವ ಪರೀಕ್ಷೆಯ ಕೊನೆಯಲ್ಲಿ “ಸೈತಾನ ಇಲ್ಲಿಂದ ತೊಲಗಿ ಹೋಗು!” ಅಂತ ಹೇಳಿದನೋ ಅದೇ ಖಂಡಿತ ಮೂರನೇ ಅಥವಾ ಕೊನೇ ಪರೀಕ್ಷೆ ಆಗಿರುತ್ತೆ.—ಮತ್ತಾ. 4:5, 10, 11.